Aadhaar card ನಲ್ಲಿ ಫೋಟೋ ಚೆನ್ನಾಗಿಲ್ವಾ? ಅದನ್ನ ಚೇಂಜ್ ಮಾಡಬೇಕಾ? ಹೇಗೆ ಇಲ್ಲಿದೆ

ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ನವೀಕರಣ ಮಾಡಬಹುದು

Last Updated : Apr 13, 2021, 07:45 PM IST
  • 12 ಸಂಖ್ಯೆಯ ಗುರುತಿನ ಚೀಟಿ ಹೊಂದಿರುವವರ ಸಾಮಾನ್ಯ ಕುಂದುಕೊರತೆಗಳಲ್ಲಿ ಫೋಟೋ ನವೀಕರಣವೂ ಒಂದು
  • ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ನವೀಕರಣ ಮಾಡಬಹುದು
  • ಸರ್ಕಾರದ ನಿಯಮದಂತೆ ಅದು ನಿಮ್ಮ ಮನೆಗೆ ಪೋಸ್ಟ್ ಆಫೀಸ್ ಮೂಲಕ ಬರುತ್ತದೆ.
Aadhaar card ನಲ್ಲಿ ಫೋಟೋ ಚೆನ್ನಾಗಿಲ್ವಾ? ಅದನ್ನ ಚೇಂಜ್ ಮಾಡಬೇಕಾ? ಹೇಗೆ ಇಲ್ಲಿದೆ title=

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಸರಿಯಾಗಿಲ್ಲದ ಕಾರಣ ಕೆಲವು ಕಡೆ ಅದು ನಿಮ್ಮದಲ್ಲ ಬೆರೆದು ಕೊಡಿ ಎಂದು ಕೇಳುತ್ತಾರೆ. ಅಲ್ಲದೆ ಅದರಲ್ಲಿರುವ ಫೋಟೋ ನೋಡಿ ಕೆಲವರು ಅಪಹಾಸ್ಯ  ಕೂಡ ಮಾಡುತ್ತಾರೆ. ಇವೆಲ್ಲವೂ 12 ಸಂಖ್ಯೆಯ ಗುರುತಿನ ಚೀಟಿ  ಹೊಂದಿರುವವರ ಸಾಮಾನ್ಯ ಕುಂದುಕೊರತೆಗಳಲ್ಲಿ ಒಂದಾಗಿದೆ. ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ನವೀಕರಣ ಮಾಡಬಹುದು.

ಯುಐಡಿಎಐ ಪ್ರಕಾರ, ಆಧಾರ್ ಕಾರ್ಡ್(Aadhaar card) ಫೋಟೋ ನವೀಕರಣಕ್ಕಾಗಿ, ಆಧಾರ್ ಕಾರ್ಡ್ ಹೊಂದಿರುವವರು ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ಅಲ್ಲಿನ ಆಧಾರ್ ಕಾರ್ಯನಿರ್ವಾಹಕರಿಗೆ ನನ್ನ  ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಬದಲಾವಣೆ ಮಾಡಬೇಕು ಎಂದು ಕೇಳಬೇಕು. ಅದಕ್ಕೆ ಯುಐಡಿಎಐ  ₹ 25  ಶುಲ್ಕದ ಜೊತೆಗೆ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಬೀಳುತ್ತದೆ. ಈ ಶುಲ್ಕ ಪಾವತಿಸಿದ ನಂತರ, ಅಲ್ಲಿನ ಕಾರ್ಯನಿರ್ವಾಹಕರು ನಿಮ್ಮ ಫೋಟೋ  ಬದಲಾಯಿಸುತ್ತಾರೆ. ಆಧಾರ್ ಕಾರ್ಯನಿರ್ವಾಹಕನು ನಿಮಗೆ ಆಧಾರ್ ಕಾರ್ಡ್ ನವೀಕರಣದ ಸಂಖ್ಯೆ (URN) ಹೊಂದಿರುವ ಸ್ಲಿಪ್ ಕೊಡುತ್ತಾರೆ. 

ಇದನ್ನೂ ಓದಿ- Top Selling Cars In India: FY 2021ರಲ್ಲಿ ಅತ್ಯಧಿಕ ಮಾರಾಟಗೊಂಡ ಐದು ಕಾರುಗಳು, ಪಾರುಪತ್ಯ ಮೆರೆದ Maruti Suzuki

1] UIDAI ವೆಬ್‌ಸೈಟ್ - uidai.gov.in ನಲ್ಲಿ ಲಾಗ್ ಇನ್ ಮಾಡಿ ಮತ್ತು ಆಧಾರ್ ದಾಖಲಾತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

2] ಆಧಾರ್ ದಾಖಲಾತಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಹತ್ತಿರದ ಸ್ಥಳೀಯ ಆಧಾರ್ ದಾಖಲಾತಿ ಕೇಂದ್ರ(Aadhaar Center)ದಲ್ಲಿ ಕೆಲಸ ಮಾಡುವ ಆಧಾರ್ ಕಾರ್ಯನಿರ್ವಾಹಕರಿಗೆ ಸಲ್ಲಿಸಿ

ಇದನ್ನೂ ಓದಿ- PM Kisan Samman Nidhi : ಈ ತಪ್ಪುಗಳಾಗಿದ್ದರೆ ಪಿಎಂ ಕಿಸಾನ್ ಸೌಲಭ್ಯದಿಂದ ನೀವೂ ವಂಚಿತರಾಗಬಹುದು

3] ಆಧಾರ್ ಕಾರ್ಯನಿರ್ವಾಹಕ ನಿಮ್ಮ ಬಯೋ ಮೆಟ್ರಿಕ್(Biometric) ವಿವರವನ್ನು ಪಡೆಯುತ್ತಾರೆ. 

4] ಆಧಾರ್ ದಾಖಲಾತಿ ಕೇಂದ್ರದ ಕಾರ್ಯನಿರ್ವಾಹಕರು ನಿಮ್ಮ ಫೋಟೋ(Photo) ತೆಗೆದುಕೊಳ್ಳುತ್ತಾರೆ.

ಇದನ್ನೂ ಓದಿ- LIC Pension : 41500 ಪಿಂಚಣಿ, ಬಡ್ಡಿ ಸಹಿತ ಹೂಡಿಕೆ ಹಣ ವಾಪಸ್, ತಿಳಿಯಿರಿ ಹೊಸ ಸ್ಕೀಮ್

5] ಕಾರ್ಯನಿರ್ವಾಹಕ ನಿಮ್ಮ ಆಧಾರ್ ಕಾರ್ಡ್ ಅಪ್ ಡೇಟ್ ಗೆ 25 ರೂ.(GST) ಸೇರಿ ಚಾರ್ಜ್ ಮಾಡುತ್ತಾರೆ. 

6] ಕಾರ್ಯನಿರ್ವಾಹಕರು ನಿಮಗೆ ಅಪ್ ಡೇಟ್ ನಂಬರ್ (URN Number) ಹೊಂದಿರುವ ಸ್ಲಿಪ್ ನೀಡುತ್ತಾರೆ.

ಇದನ್ನೂ ಓದಿ- Punjab National Bank Free Training - ಮಹಿಳಾ ವರ್ಗಕ್ಕೆ PNB ವತಿಯಿಂದ ಉಚಿತ ತರಬೇತಿ, ಇಲ್ಲಿದೆ ಡೀಟೇಲ್ಸ್

7] ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು URN ನಂಬರ್ ಬಳಸಬಹುದು.

8] ಆಧಾರ್ ಕಾರ್ಡ್ ಫೋಟೋ ನವೀಕರಣದ ನಂತರ ಅದನ್ನ ಯುಐಡಿಎಐ ವೆಬ್‌ಸೈಟ್ - uidai.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ- ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ ..!10,000 ರೂಗಳಷ್ಟು ಅಗ್ಗವಾಯಿತು ಚಿನ್ನ..!

ಮೇಲೆ ತಿಳಿಸಿದ ಸ್ಟೆಪ್ ಅನುಸರಿಸುವ ಮೂಲಕ, ಆಧಾರ್ ಕಾರ್ಡ್ ಫೋಟೋ ನವೀಕರಣವನ್ನು ಸುಲಭವಾಗಿ ಮಾಡಬಹುದು. ಸರ್ಕಾರದ ನಿಯಮದಂತೆ ಅದು ನಿಮ್ಮ ಮನೆಗೆ ಪೋಸ್ಟ್ ಆಫೀಸ್ ಮೂಲಕ ಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News