Top Selling Cars In India: FY 2021ರಲ್ಲಿ ಅತ್ಯಧಿಕ ಮಾರಾಟಗೊಂಡ ಐದು ಕಾರುಗಳು, ಪಾರುಪತ್ಯ ಮೆರೆದ Maruti Suzuki

Top Selling Cars in India: ದೇಶದಲ್ಲಿ ಅತ್ಯಧಿಕ ಮಾರಾಟಗೊಂಡ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳು ಮೊದಲ ಐದು ಸ್ಥಾನ ಅಲಂಕರಿಸಿವೆ. ಟಾಪ್ 10 ಕಾರುಗಳ ಪಟ್ಟಿಯಲ್ಲಿ 7 ಕಾರುಗಳು Maruti Suzuki ಕಂಪನಿಯ ಕಾರುಗಳಾಗಿವೆ.

Written by - Nitin Tabib | Last Updated : Apr 13, 2021, 04:46 PM IST
  • 2020-21 ಆರ್ಥಿಕ ವರ್ಷದಲ್ಲಿ ಮಾರಾಟದಲ್ಲಿ ಪಾರುಪತ್ಯ ಮೆರೆದ ಮಾರುತಿ ಸುಜುಕಿ.
  • ಟಾಪ್ 10 ಕಾರುಗಳಲ್ಲಿ 7 ಮಾರುತಿ ಬ್ರಾಂಡ್ ಕಾರುಗಳಿವೆ
  • ಟಾಪ್ 10 ಕಾರುಗಳಲ್ಲಿ ಮೊದಲ 5 ಸ್ಥಾನಗಳಲ್ಲಿ ಕಂಪನಿಯ ಕಾರುಗಳು.
Top Selling Cars In India: FY 2021ರಲ್ಲಿ ಅತ್ಯಧಿಕ ಮಾರಾಟಗೊಂಡ ಐದು ಕಾರುಗಳು, ಪಾರುಪತ್ಯ ಮೆರೆದ Maruti Suzuki title=
Top Selling Cars In India (File Photo)

ನವದೆಹಲಿ:  Top Selling Cars In India - ದೇಶದ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿಯಾಗಿರುವ Maruti Suzuki India(MSI)ಯ Swift, Baleno, Wagon R, Alto ಹಾಗೂ  Dzire ಈ ಐದೂ ಕಾರುಗಳು ಅತ್ಯದಿಕ ಮಾರಾಟಗೊಳ್ಳುವ ಕಾರುಗಳಾಗಿವೆ. ಕಳೆದ ಆರ್ಥಿಕ ವರ್ಷ ಅಂದರೆ 2020-21ರ ಕುರಿತು ಹೇಳುವುದಾದರೆ, ಈ ಐದು ಕಾರುಗಳು ಅತ್ಯಧಿಕ ಮಾರಾಟಗೊಂಡ ಕಾರುಗಳ ಪಟ್ಟಿಯಲ್ಲಿ ತನ್ನ ಆಕರ್ಷಣೆಯನ್ನು ಮುಂದುವರೆಸಿವೆ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕಂಪನಿ ಈ ಸಂಗತಿಯನ್ನು ಬಹಿರಂಗಪಡಿಸಿದೆ. ಕಂಪನಿ ನೆದಿರುವ ಮಾಹಿತಿ ಪ್ರಕಾರ, ಮಾರುತಿ ಸುಜ್ಹುಕಿ ಸ್ವಿಫ್ಟ್, ಬಲೇನೋ, ವ್ಯಾಗನ್ ಆರ್, ಆಲ್ಟೊ ಹಾಗೂ ಡಿಸೈರ್ ಸತತ ನಾಲ್ಕನೇ ವರ್ಷದಲ್ಲಿಯೂ ಕೂಡ ಭಾರಿ ಮಾರಾಟಕ್ಕೆ ಒಳಗಾಗಿವೆ ಎಂದು ಹೇಳಿದೆ. 2020-21 ಆರ್ಥಿಕ ವರ್ಷದಲ್ಲಿ ಅತ್ಯಧಿಕ ಮಾರಾಟಗೊಂಡ ಟಾಪ್ 10 ಕಾರುಗಳ ಕುರಿತು ಹೇಳುವುದಾದರೆ, ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ 7 ಮಾಡೆಲ್ ಗಳು ಶಾಮೀಲಾಗಿವೆ. ಸ್ವಿಫ್ಟ್ ಅತಿ ಹೆಚ್ಚು ಮಾರಾಟಗೊಂಡ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಬಲೇನೋ ಎರಡನೇ ಸ್ಥಾನದಲ್ಲಿದೆ. ಕಂಪನಿಯ ವ್ಯಾಗನ್ ಆರ್, ಆಲ್ಟೊ ಹಾಗೂ ಡಿಸೈರ್ ಗಳಿಗೂ ಕೂಡ ಜನರ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವರ್ಷ 2020 ಆರ್ಥಿಕವರ್ಷದಲ್ಲಿ ಪ್ಯಾಸೆಂಜರ್ ವೆಹಿಕಲ್ ಮಾರಾಟದಲ್ಲಿ ಶೇ.30 ರಷ್ಟು ಪಾರುಪತ್ಯ ಈ ಕಾರುಗಳದ್ದೆ ಆಗಿದೆ ಎಂಬುದರ ಮೇಲೆ ನೀವು ಈ ಕಾರುಗಳ ಜನಪ್ರೀಯತೆಯನ್ನು ಅಂದಾಜಿಸಬಹುದು.

ಇದನ್ನೂ ಓದಿ- Maruti Suzuki Celerio 2021: ತನ್ನ ಜನಪ್ರೀಯ ಕಾರ್ ನ 2021 ಆವೃತ್ತಿ ಬಿಡುಗಡೆಗೆ ಸಜ್ಜಾದ Maruti

ಆರ್ಥಿಕ ವರ್ಷ 2021 ರಲ್ಲಿ ಮಾರಾಟಗೊಂಡ ಟಾಪ್ ಐದು ಮಾರುತಿ ಸುಜುಕಿ ಕಾರುಗಳು
>>
ಸ್ವಿಫ್ಟ್ ಕಾರು ಅತಿ ಹೆಚ್ಚು ಮಾರಾಟಗೊಂಡ ನಂ.1 ಕಾರ್ ಆಗಿ ಹೊರಹೊಮ್ಮಿದ್ದು, ಕಂಪನಿ ಸುಮಾರು 1.72 ಲಕ್ಷಕ್ಕೂ ಅಧಿಕ ಕಾರುಗಳ ಮಾರಾಟ ನಡೆಸಿದೆ.
>>ಇದಾದ ಬಳಿಕ ಬಲೇನೋ ಅತಿ ಹೆಚ್ಚು ಮಾರಾಟಗೊಂಡ ಎರಡನೇ ಕಾರ್ ಆಗಿದೆ. ಈ ಆರ್ಥಿಕ ವರ್ಷದಲ್ಲಿ ಸುಮಾರು 1.63 ಲಕ್ಷಕ್ಕೂ ಹೆಚ್ಚು ಯುನಿಟ್ ಗಳ ಮಾರಾಟ ಕಂಪನಿ ನಡೆಸಿದೆ.
>>ಟಾಲ್ ಬಾಯ್ ಹೆಸರಿನಿಂದ ಖ್ಯಾತಿ ಪಡೆದಿರುವ ಕಂಪನಿಯ ವ್ಯಾಗನ್ ಆರ್. ಕಾರು 1.60 ಲಕ್ಷ ಯುನಿಟಗಳ ಮಾರಾಟದ ಮೂಲಕ ಮೂರನೇ ಸ್ಥಾನದಲ್ಲಿದೆ.
>>ಮಾರಾಟದ ವಿಷಯದಲ್ಲಿ ಆಲ್ಟೊ ಹಾಗೂ ಡಿಸೈರ್ ಕ್ರಮೇಣ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿವೆ. 2021ರಲ್ಲಿ 1.53ಲಕ್ಷ ಆಲ್ಟೊ ಯೂನಿಟ್ಸಗಳು ಮಾರಾಟಗೊಂಡಿದ್ದರೆ, ಡಿಸೈರ್ ನ 1.28  ಲಕ್ಷ ಯುನಿಟ್ಗಳು ಮಾರಾಟಗೊಂಡಿವೆ.

ಇದನ್ನೂ ಓದಿ-Maruti Suzuki Subscribe: ಖರೀದಿಸದೆಯೇ ಈ ಕಾರನ್ನು ಮನೆಗೆ ತೆಗೆದುಕೊಂಡು ಹೋಗಿ

99ಕ್ಕೂ ಅಧಿಕ ಬ್ರಾಂಡ್ ಗಳ ನಡುವೆ ಮಾರುತಿ ಸುಜುಕಿಯ ಕಡಕ್ ಅಸ್ತಿತ್ವ
ಈ ಕುರಿತು ಹೇಳಿಕೆ ನೀಡಿರುವ ಮಾರುತಿ ಸುಜುಕಿ ಎಕ್ಸಿಕ್ಯೂಟಿವ್ ಡೈರೆಕ್ಟರ್ (ಮಾರ್ಕೆಟಿಂಗ್ ಮತ್ತು ಸೇಲ್ಸ್ ) ಶಶಾಂಕ್ ಶ್ರೀವಾಸ್ತವ್, ಹೆಚ್ಚಾಗುತ್ತಿರುವ ಪ್ರತಿಸ್ಪರ್ಧೆಯ ನಡುವೇನೂ ಕೂಡ ಆರ್ಥಿಕ ವರ್ಷ 2020-21 ರಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಂಡ ಯಾತ್ರಿ ವಾಹನ ಮಾರುತಿ ಸುಜುಕಿಯಾಗಿದೆ ಎಂದಿದ್ದಾರೆ. ಕೊರೊನಾ ಕಾಲಾವಧಿಯಲ್ಲಿ ಆರ್ಥಿಕ ಹಿನ್ನಡೆತದ ಕಾರಣ ಜನರು ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಆದರೆ, ಗ್ರಾಹಕರು ನಮ್ಮ ಭರವಸೆಯನ್ನು ಹುಸಿಯಾಗಿಡಲು ಬಿಟ್ಟಿಲ್ಲ. ಹೀಗಾಗಿ ದೇಶದಲ್ಲಿರುವ 90ಕ್ಕೂ ಅಧಿಕ ಬ್ರಾಂಡ್ ಗಳ ನಡುವೆ ಕಂಪನಿಯ ಕಾರುಗಳು ತಮ್ಮ ಪಾರುಪತ್ಯ ಮೆರೆಯುವಲ್ಲಿ ಯಶಸ್ವಿಯಾಗಿವೆ ಎಂದು ಶ್ರೀವಾಸ್ತವ್ ಹೇಳಿದ್ದಾರೆ. 

ಇದನ್ನೂ ಓದಿ- Maruti Celerio Offer: ಕೇವಲ 48 ಸಾವಿರ ಪಾವತಿಸಿ ಮನೆಗೆ ತನ್ನಿ ಈ ಹೊಚ್ಚ ಹೊಸ ಕಾರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News