LPG Delivery Charges : ನಿಮಗೆ ಬೇಕಾದ ಸಮಯದಲ್ಲಿ ಎಲ್ ಪಿಜಿ ಸಿಲಿಂಡರ್ ಬೇಕಾದರೆ ಏನು ಮಾಡಬೇಕು?

ಇಂಡೇನ್ ತನ್ನ ಗ್ರಾಹಕರಿಗೆ ಮತ್ತೊಂದು ಸೇವೆಯನ್ನು ಒದಗಿಸುತ್ತಿದೆ. 'Preferred Time Delivery system' ಮೂಲಕ ಗ್ರಾಹಕರು ಬಯಸುವ ದಿನ ಮತ್ತು ಸಮಯಕ್ಕೆ ಸಿಲಿಂಡರ್ ಡೆಲಿವೆರಿ ಮಾಡಲಾಗುತ್ತದೆ.

Written by - Ranjitha R K | Last Updated : Jun 18, 2021, 01:04 PM IST
  • ಗ್ರಾಹಕರು ಬಯಸುವ ದಿನ ಮತ್ತು ಸಮಯಕ್ಕೆ ಸಿಲಿಂಡರ್ ಡೆಲಿವೆರಿ
  • ಸೇವೆಗಾಗಿ ಸಣ್ಣ ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ
  • ವಾರಾಂತ್ಯದಲ್ಲೂ ನೀವು ಬಯಸುವ ಸಮಯಕ್ಕೇ ಸಿಗಲಿದೆ ಸಿಲಿಂಡರ್
LPG Delivery Charges : ನಿಮಗೆ ಬೇಕಾದ ಸಮಯದಲ್ಲಿ ಎಲ್ ಪಿಜಿ ಸಿಲಿಂಡರ್ ಬೇಕಾದರೆ ಏನು ಮಾಡಬೇಕು? title=
ಗ್ರಾಹಕರು ಬಯಸುವ ದಿನ ಮತ್ತು ಸಮಯಕ್ಕೆ ಸಿಲಿಂಡರ್ ಡೆಲಿವೆರಿ (file photo)

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ (LPG cylinder booking) ಮಾಡುವುದು, ಡೆಲಿವೆರಿ ಪಡೆಯುವುದು ಈಗ ಮೊದಲಿಗಿಂತ ಸರಳವಾಗಿದೆ.  ಮೊದಲು ಸಿಲಿಂಡರ್ ಬುಕಿಂಗ್ ಮಾಡುವುದಕ್ಕಾಗಿ  ದೀರ್ಘ ಸಮಯದವರೆಗೆ ಕಾಲ್ ಗಳಲ್ಲಿ ಕಾಯಬೇಕಾಗುತ್ತಿತ್ತು. ಇನ್ನು ಡೆಲಿವೆರಿ ಪಡೆಯಲು ವಾರಗಳವರೆಗೆ ಕಾಯಬೇಕಾಗುತ್ತಿತ್ತು. ಆದರೆ ಈಗ ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ಸಿಲಿಂಡರ್ ಬುಕ್ ಆಗಿ ಬಿಡುತ್ತದೆ. ಅದೇ ದಿನ ಸಿಲಿಂಡರ್ ಡೆಲಿವೆರಿ ಕೂಡಾ ಪಡೆಯಬಹುದು. 

ಬೇಕಾದ ಸಮಯದಲ್ಲಿ ಡೆಲಿವೆರಿ ಬೇಕಾದಲ್ಲಿ ಹಣ ಪಾವತಿಸಬೇಕು : 
ಇಂಡೇನ್ (Indane) ತನ್ನ ಗ್ರಾಹಕರಿಗೆ ಮತ್ತೊಂದು ಸೇವೆಯನ್ನು ಒದಗಿಸುತ್ತಿದೆ. 'Preferred Time Delivery system' ಮೂಲಕ ಗ್ರಾಹಕರು ಬಯಸುವ ದಿನ ಮತ್ತು ಸಮಯಕ್ಕೆ ಸಿಲಿಂಡರ್ ಡೆಲಿವೆರಿ ಮಾಡಲಾಗುತ್ತದೆ. ಅಂದರೆ ಸಿಲಿಂಡರ್ ಬುಕ್ ಮಾಡುವ ವೇಳೆಯೇ ಗ್ರಾಹಕರು, ಡೆಲಿವೆರಿ ಯಾವ ದಿನ ಮತ್ತು ಯಾವ ಸಮಯಕ್ಕೆ ಬೇಕು ಎನ್ನುವುದನ್ನು ಕೂಡಾ ನಮೂದಿಬಹುದು.  ಸೇವೆಗಾಗಿ ಸಣ್ಣ ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ :  petrol price today: ಏರುಗತಿಯಲ್ಲಿ ಪೆಟ್ರೋಲ್, 21 ಜಿಲ್ಲೆಗಳಲ್ಲಿ ಬೆಲೆ 99.99/ಲೀಟರ್

ಚಾರ್ಜ್ ಹೇಗೆ ಮಾಡಲಾಗುತ್ತದೆ : 
ಈ ವ್ಯವಸ್ಥೆಯಡಿಯಲ್ಲಿ, ಗ್ರಾಹಕರಿಗೆ (Customer) ಕೆಲವು ಆಯ್ಕೆಗಳನ್ನು ನೀಡಲಾಗುತ್ತದೆ. ಇವುಗಳಲ್ಲಿ ಗ್ರಾಹಕರು ದಿನ ಮತ್ತು ಸಮಯವನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ಶುಲ್ಕವನ್ನು ಪಾವತಿಸಿದರೆ ನಿಮಗೆ  ಬೇಕಾದ ಸಮಯಕ್ಕೆ ಸಿಲಿಂಡರ್ ತಲುಪಿಸಲಾಗುತ್ತದೆ. 

ವಾರದ ದಿನಗಳಲ್ಲಿ ವಿತರಣೆ :
ಈ ವ್ಯವಸ್ಥೆಯಡಿಯಲ್ಲಿ, ಇಂಡೇನ್‌ನ ಸಿಲಿಂಡರ್ ಅನ್ನು ಸೋಮವಾರದಿಂದ ಶುಕ್ರವಾರದವರೆಗೆ ಯಾವಾಗ ಬೇಕಾದರೂ ಡೆಲಿವೆರಿ (Delivery) ಪಡೆಯಬಹುದು. ನೀವು ಯಾವ ದಿನ ಮತ್ತು ಸಮಯವನ್ನು ಆಯ್ಕೆ ಮಾಡಿರುತ್ತೀರಿ ಅದೇ ದಿನ ಮತ್ತು ಸಮಯಕ್ಕೆ ನಿಮಗೆ ಸಿಲಿಂಡೆರ್ ತಲುಪಿಸಲಾಗುತ್ತದೆ. ಒಂದು ವೇಳೆ  ನೀವು ಬುಕ್ (LPG Booking) ಮಾಡುವ ವೇಳೆ ದಿನವನ್ನು ಆಯ್ಕೆ ಮಾಡದೆ ಕೇವಲ ಸಮಯವನ್ನು ಮಾತ್ರ ಆಯ್ಕೆ ಮಾಡಿದ್ದರೆ, ಸೋಮವಾರದಿಂದ ಶುಕ್ರವಾರದೊಳಗೆ ನೀವು ಆಯ್ಕೆ ಮಾಡಿದ ಸಮಯಕ್ಕೆ ಸಿಲಿಂಡರ್ ಡೆಲಿವೆರಿಯಾಗುತ್ತದೆ. 

ಇದನ್ನೂ ಓದಿ :  Indian Currency: ನಿಮ್ಮ ಬಳಿಯೂ ಈ ರೀತಿಯ 10 ರೂ. ನೋಟು ಇದ್ದರೆ, 25,000 ರೂ. ಗಳಿಸುವ ಅವಕಾಶ

ವೀಕ್ ಎಂಡ್ ಡೆಲಿವೆರಿ : 
ಇನ್ನು ನೀವು ಶನಿವಾರ-ಭಾನುವಾರ ಅಂದರೆ ವಾರಾಂತ್ಯದಲ್ಲಿ ಸಿಲಿಂಡರ್ ಡೆಲಿವೆರಿ ಪಡೆಯಲು ಬಯಸಿದರೆ, ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಯಾವುದೇ ಸಮಯದ ಸ್ಲಾಟ್ ಅನ್ನು ಆಯ್ಕೆ ಮಾಡಬಹುದು. 
ನೀವು ಬಯಸಿದ ಸಮಯದಲ್ಲಿ ಎಲ್ಪಿಜಿ ಡೆಲಿವೆರಿ ಪಡೆಯಬಹುದು ..ತೆಗೆದುಕೊಳ್ಳಬಹುದು
ಸೋಮವಾರ-ಭಾನುವಾರ ಬೆಳಿಗ್ಗೆ ಬೆಳಿಗ್ಗೆ  8- 11
ಸೋಮವಾರ-ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ
ಸೋಮವಾರ-ಭಾನುವಾರ ಮಧ್ಯಾಹ್ನ 3 ರಿಂದ 6 ಗಂಟೆ
ಸೋಮವಾರ-ಶುಕ್ರವಾರ ಸಂಜೆ 6 ರಿಂದ 8 ಗಂಟೆ

ಎಷ್ಟು ಶುಲ್ಕ ವಿಧಿಸಲಾಗುತ್ತದೆ?
ವಾರದ ದಿನ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಸಿಲಿಂಡರ್ ಪಡೆಯಲು ಬಯಸಿದರೆ, 25 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ
ವಾರದ ದಿನ ಸಂಜೆ 6 ರಿಂದ ರಾತ್ರಿ 8 ರವರೆಗೆ ಸಿಲಿಂಡರ್ ಪಡೆಯಲು 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ವಾರಾಂತ್ಯದಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಸಿಲಿಂಡರ್ ಪಡೆಯಲು  ಬಯಸಿದರೆ, 25 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ವಾರದ ದಿನ ಬೆಳಿಗ್ಗೆ 8 ಗಂಟೆಯ ಮೊದಲು ಸಿಲಿಂಡರ್ ಪಡೆಯಲು  ಬಯಸಿದರೆ  50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ :  SBI ಗ್ರಾಹಕರೇ ಗಮನಿಸಿ : ಇಂದು 2 ಗಂಟೆ ಬಂದ್ ಇರುತ್ತೆ ಈ Online ಬ್ಯಾಂಕಿಂಗ್ ಸೇವೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News