NPS ಹೂಡಿಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಇನ್ಮುಂದೆ ಚಂದಾದಾರರಿಗೆ ಸಿಗಲಿದೆ ಈ ಅದ್ಭುತ ಸೌಕರ್ಯ

NPS Latest Update -  ನ್ಯಾಷನಲ್ ಪೆನ್ಷನ್ ಸ್ಕೀಮ್ ಚಂದಾದಾರರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ಇನ್ಮುಂದೆ ಎನ್ಪಿಎಸ್ ಚಂದಾದಾರರು ತಮ್ಮ ಮನೆಯಿಂದಲೇ NPS ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ನ್ಯಾಷನಲ್ ಪೇಮೆಂಟ್ ಟ್ರಸ್ಟ್ ವಾಟ್ಸ್ ಆಪ್ ಸೇವೆಯನ್ನು ಆರಂಭಿಸಿದ್ದು, ತನ್ಮೂಲಕ ಚಂದಾದಾರರು ತಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ.   

Written by - Nitin Tabib | Last Updated : Jun 13, 2022, 09:41 PM IST
  • ಎನ್‌ಪಿಎಸ್ ಚಂದಾದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ.
  • ಹೌದು, ಇನ್ಮುಂದೆ ಸರ್ಕಾರ ನಿಮಗೆ ಈ ಅದ್ಭುತ ಸೌಲಭ್ಯವೊಂದನ್ನು ನೀಡುತ್ತಿದೆ.
  • ಈ ಸೌಲಭ್ಯದ ಮೂಲಕ ನೀವು ಮನೆಯಲ್ಲಿಯೇ ಕುಳಿತು ಈ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಬಹದು
NPS ಹೂಡಿಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಇನ್ಮುಂದೆ ಚಂದಾದಾರರಿಗೆ ಸಿಗಲಿದೆ ಈ ಅದ್ಭುತ ಸೌಕರ್ಯ  title=
NPS On WhatsApp

NPS Latest News: ಎನ್‌ಪಿಎಸ್ ಚಂದಾದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಇನ್ಮುಂದೆ ಸರ್ಕಾರ ನಿಮಗೆ ಈ ಅದ್ಭುತ ಸೌಲಭ್ಯವೊಂದನ್ನು ನೀಡುತ್ತಿದೆ. ಸರ್ಕಾರವು ತಾನು ಈ ಮೊದಲು ಚಲಾಯಿಸುತ್ತಿದ್ದ ಸರ್ಕಾರಿ ಪಿಂಚಣಿ ಯೋಜನೆಯನ್ನು ಸ್ಥಗಿತಗೊಳಿಸಿರುವುದರಿಂದ, ದೇಶದ ಕೋಟ್ಯಾಂತರ ಜನರು ರಾಷ್ಟ್ರೀಯ ಪಿಂಚಣಿ ಯೋಜನೆಗೆ ದಾಖಲಾಗಿದ್ದಾರೆ. ಇದೀಗ ಎನ್‌ಪಿಎಸ್ ಚಂದಾದಾರರ ಅನುಕೂಲಕ್ಕಾಗಿ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ (ಎನ್‌ಪಿಎಸ್‌ಟಿ) ವಾಟ್ಸಾಪ್ ಸೇವೆಯನ್ನು ಪ್ರಾರಂಭಿಸಿದೆ, ಇದರಿಂದ ಅವರು ಮನೆಯಲ್ಲೇ ಕುಳಿತು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.

ಎನ್‌ಪಿಎಸ್ ಅಡಿಯಲ್ಲಿ ಈ ಮಹತ್ವದ ಸೌಲಭ್ಯ ಸಿಗಲಿದೆ
ರಾಷ್ಟ್ರೀಯ ಪಿಂಚಣಿ ಯೋಜನೆ ಅಂದರೆ ಎನ್‌ಪಿಎಸ್ ಕೇಂದ್ರ ಸರ್ಕಾರದ ಒಂದು ಮಹತ್ವದ ಯೋಜನೆಯಾಗಿದ್ದು, ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ನಿರ್ವಹಿಸುತ್ತದೆ. NPS ಒಂದು ಕಡಿಮೆ-ವೆಚ್ಚದ ಹೂಡಿಕೆ ಉತ್ಪನ್ನವಾಗಿದ್ದು ಅದು ಮಾರುಕಟ್ಟೆಯ ಪರಿಸ್ಥಿತಿಗಳನ್ನು ಆಧರಿಸಿ ಆದಾಯವನ್ನು ನೀಡುತ್ತದೆ. ಇದರಲ್ಲಿ ಚಂದಾದಾರರಿಗೆ ತೆರಿಗೆ ವಿನಾಯಿತಿ ಲಾಭವೂ ಕೂಡ ಸಿಗುತ್ತದೆ. ಇದರಲ್ಲಿ, ಭಾರತದ ಯಾವುದೇ ನಾಗರಿಕರು (ನಿವಾಸಿ ಮತ್ತು ಅನಿವಾಸಿ) 18 ರಿಂದ 65 ವರ್ಷ ವಯಸ್ಸಿನವರೆಗೆ ತಮ್ಮ ಖಾತೆಯನ್ನು ತೆರೆಯಬಹುದು.

ಟ್ವಿಟ್ ಮಾಡಿ ಮಾಹಿತಿ ನೀಡಿದ NPST 
ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್‌ ಮಾಡಿ ಮಾಹಿತಿ ನೀಡಿರುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ (ಎನ್‌ಪಿಎಸ್‌ಟಿ), 'ಆತ್ಮೀಯ ಚಂದಾದಾರರೇ, NPS ಟ್ರಸ್ಟ್ ಇದೀಗ WhatsApp ಗೆ ಬಂದಿದೆ. ತನ್ಮೂಲಕ ನೀವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.!! ನಮ್ಮನ್ನು ಸಂಪರ್ಕಿಸಿ @918588852130.' ಎಂದು ಬರೆದುಕೊಂಡಿದೆ.

ಇದನ್ನೂ ಓದಿ-Post Office ನ ಈ ಯೋಜನೆಯಲ್ಲಿ 7500 ರೂ.ಮೂಲಕ ಹೂಡಿಕೆ ಆರಂಭಿಸಿ, ಕೋಟ್ಯಾಧೀಶರಾಗಿ ನಿವೃತ್ತಿ ಹೊಂದುವ ಟ್ರಿಕ್ ಇಲ್ಲಿದೆ

ಈ ಸೇವೆಯಲ್ಲಿ ಎಲ್ಲಾ NPS ಚಂದಾದಾರರು ಶ್ರೇಣಿ I ಮತ್ತು ಶ್ರೇಣಿ II ಖಾತೆಗಳನ್ನು ಮತ್ತು NPS ಖಾತೆಗೆ ಸಂಬಂಧಿಸಿದ ಎಲ್ಲಾ ಸೇವೆಗಳಾದ ಕೊಡುಗೆಗಳು, ಹಿಂಪಡೆಯುವಿಕೆ, ನಿರ್ಗಮನ, eNPS ಸೇವೆಗಳು, ಸ್ಕೀಮ್ ಆದ್ಯತೆಗಳಲ್ಲಿನ ಬದಲಾವಣೆ, ಹೂಡಿಕೆ ಮಾದರಿಯನ್ನು ಮಾರ್ಪಡಿಸುವುದು ಇತ್ಯಾದಿಗಳನ್ನು WhatsApp ನಲ್ಲಿ ಕಾಣಬಹುದು ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಇದನ್ನೂ ಓದಿ-Petrol-Diesel Update: ಪೆಟ್ರೋಲ್-ಡಿಸೇಲ್ ಭಾರಿ ಕೊರತೆ! ಈ ರಾಜ್ಯದ 4500 ಪಂಪ್ ಗಳ ಸಪ್ಲೈ ಮೇಲೆ ನಿರ್ಭಂಧ

ಎನ್ಪಿಎಸ್ ವಾಟ್ಸಾಪ್ ಸಂಖ್ಯೆಯನ್ನು ಹೇಗೆ ಬಳಸಬೇಕು?
>> ಇದಕ್ಕಾಗಿ, ನೀವು ಮೊದಲು ನಿಮ್ಮ WhatsApp ಖಾತೆಯನ್ನು ತೆರೆಯಿರಿ ಮತ್ತು ಮೇಲೆ ಟ್ವಿಟ್ಟರ್ ನಲ್ಲಿ ನೀಡಲಾಗಿರುವ WhatsApp ಮೊಬೈಲ್ ಸಂಖ್ಯೆಗೆ ಹಾಯ್ ಸಂದೇಶವನ್ನು ಕಳುಹಿಸಿ.
>> ನಂತರ ನಿಮ್ಮ ಮುಂದೆ ಒಂದು ಪ್ರಶ್ನೆಗಳ ಪಟ್ಟಿ ತೆರೆದುಕೊಳ್ಳುತ್ತದೆ
>> ಈ ಪಟ್ಟಿಯಲ್ಲಿ ನಿಮ್ಮ ಸಮಸ್ಯೆ, ಕೊಡುಗೆ, eNPS, ನಿರ್ಗಮನ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಯ ಮೇಲೆ ಟ್ಯಾಪ್ ಮಾಡಿ.
>> ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಸಮಸ್ಯೆ ಯಾವುದು ನಿಮಗೆ ಕಾಣಿಸದಿದ್ದರೆ ನೀವು 'ಹೆಚ್ಚು ಸಹಾಯ ಬೇಕು' ಆಯ್ಕೆಯನ್ನು ಆಯ್ದುಕೊಳ್ಳಬೇಕು.
>> ಈಗ ನೀವು NPS ಟ್ರಸ್ಟ್‌ನಿಂದ ಈ ನಿಟ್ಟಿನಲ್ಲಿ 'ದಯವಿಟ್ಟು ನಿಮ್ಮ ಪ್ರಶ್ನೆಯನ್ನು grievances@npstrust.org.in ಗೆ ಇಮೇಲ್ ಮಾಡಿ' ಅಥವಾ ನೀವು ನಮಗೆ 011-47207700 ಗೆ ಕರೆ ಮಾಡಬಹುದು ಎಂಬ ಉತ್ತರ ಸಿಗುತ್ತದೆ.
>> ನಿಮಗೆ ಇದಕ್ಕಿಂತ ಹೆಚ್ಚಿನ ಸಹಾಯ ಬೇಕಾದರೆ, ನೀವು 022-2499 3499 ಗೆ ಕರೆ ಮಾಡಬಹುದು. ಈ ಸಂಖ್ಯೆ eNPS NSDL ಸಹಾಯವಾಣಿಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News