Petrol Price Hike: ಒಂದು ವಾರದಲ್ಲಿ ಮೂರನೇ ಬಾರಿಗೆ ಸಿಎನ್‌ಜಿ ಬೆಲೆ ಏರಿಕೆ

Petrol-Diesel-CNG Price Hike:  ಗ್ರಾಹಕರು ಹಣದುಬ್ಬರದ ಎರಡು ಹೊಡೆತವನ್ನು ಎದುರಿಸುತ್ತಿದ್ದಾರೆ. ಪೆಟ್ರೋಲ್-ಡೀಸೆಲ್  (Petrol-Diesel)  ಬೆಲೆಯೊಂದಿಗೆ, ಈಗ ಸಿಎನ್‌ಜಿ ಬೆಲೆಯೂ ಹೆಚ್ಚಾಗಲು ಪ್ರಾರಂಭಿಸಿದೆ.

Written by - Yashaswini V | Last Updated : Apr 4, 2022, 06:29 AM IST
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ
  • ಸಿಎನ್‌ಜಿ ಬೆಲೆಯೂ ಏರಿಕೆಯಾಗಿದೆ
  • 14 ದಿನಗಳಲ್ಲಿ 12ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ
Petrol Price Hike: ಒಂದು ವಾರದಲ್ಲಿ ಮೂರನೇ ಬಾರಿಗೆ ಸಿಎನ್‌ಜಿ ಬೆಲೆ ಏರಿಕೆ title=
Petrol-Diesel-CNG Price Hike

Petrol-Diesel-CNG Price Hike: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಭಾನುವಾರ 14 ದಿನಗಳಲ್ಲಿ 12ನೇ ಬಾರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರೊಂದಿಗೆ ಸಿಎನ್‌ಜಿ ಬೆಲೆಯಲ್ಲಿ ಸಹ ಹೆಚ್ಚಳ ಮಾಡಲಾಗಿದೆ. ಕಳೆದ ಒಂದು ವಾರದಲ್ಲಿ ಸಿಎನ್‌ಜಿ ಬೆಲೆಯಲ್ಲಿ ಇದು ಮೂರನೇ ಏರಿಕೆಯಾಗಿದೆ. ಹೆಚ್ಚಿದ ಬೆಲೆಗಳು ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಅನ್ವಯವಾಗಲಿದೆ.

ಡೀಸೆಲ್-ಪೆಟ್ರೋಲ್ ಬೆಲೆ ಮತ್ತೆ ಏರಿಕೆ:
ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ (Petrol-Diesel) ಎರಡಕ್ಕೂ ಲೀಟರ್‌ಗೆ 40 ಪೈಸೆ ಹೆಚ್ಚಳ ಘೋಷಿಸಿವೆ. ಎರಡು ವಾರಗಳಲ್ಲಿ ಇದು 12ನೇ ಹೆಚ್ಚಳವಾಗಿದೆ. ಈ ಹೆಚ್ಚಳದೊಂದಿಗೆ ಇಲ್ಲಿಯವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 8.40 ರೂ. ಈ ಏರಿಕೆಯೊಂದಿಗೆ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.81 ರೂ., ಡೀಸೆಲ್ ಬೆಲೆ ಲೀಟರ್‌ಗೆ 95.07 ರೂ. ತಲುಪಿದೆ.

ಇದನ್ನೂ ಓದಿ- Good News: ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ ಶ್ರೀಸಾಮಾನ್ಯರಿಗೊಂದು ನೆಮ್ಮದಿಯ ಸುದ್ದಿ, ಈ ವರದಿ ಓದಿ

ಸಿಎನ್‌ಜಿ ಬೆಲೆಯೂ ಏರಿಕೆ:
ಸಿಎನ್‌ಜಿ ದರವೂ (CNG Rate) ಕೆಜಿಗೆ 80 ಪೈಸೆ ಏರಿಕೆಯಾಗಿದೆ. ಈ ಹೆಚ್ಚಳದ ನಂತರ, ದೆಹಲಿಯಲ್ಲಿ ಸಿಎನ್‌ಜಿಯ ಹೊಸ ಬೆಲೆ ಕೆಜಿಗೆ 61.61 ರೂ. ಸಿಎನ್‌ಜಿ ಬೆಲೆಯನ್ನು ವಾರದೊಳಗೆ ಮೂರು ಬಾರಿ ಹೆಚ್ಚಿಸಲಾಗಿದೆ. ವಾರದಲ್ಲಿ ಸಿಎನ್‌ಜಿ  ದರವು ಕೆಜಿಗೆ 2.40 ರೂ.ಗಳಷ್ಟು ದುಬಾರಿಯಾಗಿದೆ. 

ಇದನ್ನೂ ಓದಿ- Honda: 1 ಕೋಟಿಗೂ ಅಧಿಕ ಭಾರತೀಯರ ಈ ಅಚ್ಚುಮೆಚ್ಚಿನ ಬೈಕ್ ಅನ್ನು ಕೇವಲ 5999 ಪಾವತಿಸಿ ಮನೆಗೆ ಕೊಂಡೊಯ್ಯಿರಿ!

ನಿಮ್ಮ ನಗರದಲ್ಲಿ ಇತ್ತೀಚಿನ ಬೆಲೆಯನ್ನು ಈ ರೀತಿ ತಿಳಿದುಕೊಳ್ಳಬಹುದು:
ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಎಷ್ಟಿದೆ ಎಂಬ ಮಾಹಿತಿಯನ್ನು ನೀವು SMS ಮೂಲಕ ಪಡೆಯಬಹುದು. ಇದಕ್ಕಾಗಿ, ಇಂಡಿಯನ್ ಆಯಿಲ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ - IOCL) ಗ್ರಾಹಕರು RSP ಕೋಡ್ ಅನ್ನು 9224992249 ಸಂಖ್ಯೆಗೆ ಕಳುಹಿಸಬೇಕಾಗುತ್ತದೆ. ನೀವು ಇಂಡಿಯನ್ ಆಯಿಲ್ ವೆಬ್‌ಸೈಟ್‌ನಲ್ಲಿ RSP ಕೋಡ್ ಅನ್ನು ಕಾಣಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News