ನವದೆಹಲಿ : ಸಾಮಾನ್ಯ ಜನರಿಗೆ ಮತ್ತೆ ಹೊಡೆತ. ಪೆಟ್ರೋಲಿಯಂ ಕಂಪನಿಗಳು ಮತ್ತೊಮ್ಮೆ LPG ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು 25 ರೂ. ಹೆಚ್ಚಿಸಿವೆ. ದೆಹಲಿಯಲ್ಲಿ, 14.2 ಕೆಜಿ ಎಲ್ಪಿಜಿ ಸಿಲಿಂಡರ್ ಈಗ 859.5 ರೂ. ಆದರೆ ಈ ಮೊದಲು ಇದರ ಬೆಲೆ 834.50 ಇತ್ತು. ಈ ಹಿಂದೆ ಜುಲೈ 1 ರಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 25.50 ರೂ. ಏರಿಕೆ ಮಾಡಲಾಗಿತ್ತು.
ಎಲ್ಪಿಜಿ ಬೆಲೆ ಮತ್ತೆ ಏರಿಕೆ
ಮುಂಬೈನಲ್ಲಿಯೂ ಸಹ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರ(LPG Cylinder Price) ಈಗ 859.5 ರೂ, ಆದರೆ ಇದು ಮೊದಲು 834.50 ರೂ. ಇತ್ತು. ಕೋಲ್ಕತ್ತಾದಲ್ಲಿ ಎಲ್ಪಿಜಿ ಸಿಲಿಂಡರ್ ದರ ಪ್ರತಿ ಸಿಲಿಂಡರ್ಗೆ 861 ರಿಂದ 886 ರೂ.ಗೆ ಏರಿಕೆಯಾಗಿದೆ. ಚೆನ್ನೈನ ಎಲ್ಪಿಜಿ ಸಿಲಿಂಡರ್ ಬೆಲೆ ಇಂದಿನಿಂದ 875.50 ರೂ. ಪಾವತಿಸಬೇಕಾಗುತ್ತದೆ, ಅದು ನಿನ್ನೆ 850.50 ರೂ. ಇತ್ತು. ಉತ್ತರ ಪ್ರದೇಶದ ಲಕ್ನೋದಲ್ಲಿ LPG ಸಿಲಿಂಡರ್ಗಾಗಿ ನೀವು 897.5 ರೂ. ಪಾವತಿಸಬೇಕಾಗುತ್ತದೆ. ಗುಜರಾತ್ನ ಅಹಮದಾಬಾದ್ನಲ್ಲಿ ಎಲ್ಪಿಜಿಗೆ 866.50 ರೂ. ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : Airtel-Jioಗೆ ಟಕ್ಕರ್ ನೀಡುತ್ತಿದೆ Vodafone-Idea ದ ಈ ಪ್ಲಾನ್ , 56 ದಿನಗಳವರೆಗೆ ಸಿಗುತ್ತಿದೆ 4GB ಡೇಟಾ
LPG ಸಿಲಿಂಡರ್ ಈ ವರ್ಷ 165.50 ರೂಗಳಷ್ಟು ದುಬಾರಿ
2021 ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ, ದೆಹಲಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 694 ರೂಗಳಷ್ಟಿತ್ತು, ಇದನ್ನು ಫೆಬ್ರವರಿಯಲ್ಲಿ ಪ್ರತಿ ಸಿಲಿಂಡರ್(Cylinder)ಗೆ 719 ರೂ. ಏರಿಸಲಾಯಿತು. ಫೆಬ್ರವರಿ 15 ರಂದು ಬೆಲೆಯನ್ನು 769 ರೂ.ಗೆ ಹೆಚ್ಚಿಸಲಾಯಿತು. ಇದರ ನಂತರ, ಫೆಬ್ರವರಿ 25 ರಂದು, ಸಿಲಿಂಡರ್ ಬೆಲೆಯನ್ನು 794 ರೂ.ಗೆ ಇಳಿಸಲಾಯಿತು. ಮಾರ್ಚ್ ನಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 819 ರೂ.ಗೆ ಇಳಿಸಲಾಯಿತು. ಏಪ್ರಿಲ್ ಆರಂಭದಲ್ಲಿ 10 ರೂ. ಕಡಿತ ಮಾಡಿದ ನಂತರ, ದೆಹಲಿಯಲ್ಲಿ ಎಲ್ಪಿಜಿಯ ಬೆಲೆ 809 ರೂ.ಗೆ ಏರಿತ್ತು. ಒಂದು ವರ್ಷದಲ್ಲಿ, ಎಲ್ಪಿಜಿ ಸಿಲಿಂಡರ್ಗಳ ಬೆಲೆ 165.50 ರೂ. ಡಿಸೆಂಬರ್ ನಿಂದ ಇಲ್ಲಿಯವರೆಗೆ, ಸಿಲಿಂಡರ್ ಬೆಲೆ ಸುಮಾರು 275 ರೂ. ಏರಿಕೆ ಮಾಡಲಾಗಿದೆ.
ಇದನ್ನೂ ಓದಿ : LIC's Superhit Policy: ಕೇವಲ 233 ರೂ. ಹೂಡಿಕೆ ಮಾಡಿ 17 ಲಕ್ಷ ಪಡೆಯಿರಿ
ದೇಶದ ಪ್ರಮುಖ ನಗರಗಳಲ್ಲಿ LPG ಹೊಸ ಬೆಲೆ
ದೆಹಲಿ 859.5 ರೂ.
ಮುಂಬೈ 859.50 ರೂ.
ಕೋಲ್ಕತಾ 886.00 ರೂ.
ಚೆನ್ನೈ 875.50 ರೂ.
ಲಕ್ನೋ 897.50 ರೂ.
ಅಹಮದಾಬಾದ್ 866.50 ರೂ.
ಕಮರ್ಷಿಯಲ್ ಸಿಲಿಂಡರ್ ಬೆಲೆ ಕೂಡ ದುಬಾರಿ
ಎಲ್ಪಿಜಿ ಸಿಲಿಂಡರ್ ಹೊರತುಪಡಿಸಿ, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್(Commercial Cylinder Rate) ಕೂಡ 68 ರೂ. ದುಬಾರಿಯಾಗಿದೆ. ಈಗ 19 ಕೆಜಿಯ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದೆಹಲಿಯಲ್ಲಿ 1618 ರೂ.ಗೆ ಲಭ್ಯವಿದ್ದು, ಇದು ಮೊದಲು 1550 ರೂ.ಗೆ ಲಭ್ಯವಿತ್ತು.
ಇದನ್ನೂ ಓದಿ : E-Visa For India: ಅಫ್ಘಾನಿಸ್ತಾನದ ಬಿಕ್ಕಟ್ಟಿನ ಮಧ್ಯೆ ಭಾರತ ಸರ್ಕಾರದ ಒಂದು ಪ್ರಮುಖ ಉಪಕ್ರಮ
ವಾಸ್ತವವಾಗಿ, ಕೇಂದ್ರ ಸರ್ಕಾರ(Central Govt)ವು ತಿಂಗಳ ಮೊದಲ ದಿನದಂದು ಅನಿಲದ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿತು, ಆದರೆ ಇದ್ದಕ್ಕಿದ್ದಂತೆ ಆಗಸ್ಟ್ 17 ರ ಬೆಳಿಗ್ಗೆ ಬೆಲೆಯನ್ನು ಹೆಚ್ಚಿಸಿದೆ. ಗ್ಯಾಸ್ ಏಜೆನ್ಸಿ ನಿರ್ವಾಹಕರು ಕೂಡ ಇದರಿಂದ ಆಶ್ಚರ್ಯಗೊಂಡಿದ್ದಾರೆ. ಮಾಹಿತಿ ದೊರೆತ ತಕ್ಷಣ, ತೈಲ ಮಾರಾಟ ಕಂಪನಿಗಳು 14.2 ಕೆಜಿ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಮಂಗಳವಾರದಿಂದ 25 ರೂ. ಏರಿಕೆ ಸೇರಿಸಿ ಪಡೆಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ