ಸರ್ಕಾರದಿಂದ ಅಗ್ಗದಬೆಲೆಗೆ ಚಿನ್ನದ ಮಾರಾಟ! ಈ ದಿನದಿಂದ ಖರೀದಿ ಸಾಧ್ಯ

RBI Gold Bond Scheme: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಸರ್ಕಾರಿ ಗೋಲ್ಡ್ ಬಾಂಡ್ ಯೋಜನೆ ಆರಂಭಿಸಲಿದೆ.  ಎರಡು ಹಂತಗಳಲ್ಲಿ ಸರ್ಕಾರಿ ಚಿನ್ನದ ಬಾಂಡ್ ಯೋಜನೆಯನ್ನು RBI ಬಿಡುಗಡೆ ಮಾಡುತ್ತದೆ. 

Written by - Ranjitha R K | Last Updated : Dec 16, 2022, 08:46 AM IST
  • ಚಿನ್ನದ ಬೆಲೆ ದಿನೇ ದಿನೇ ಗಗನ ಮುಖಿಯಾಗುತ್ತಿದೆ.
  • ಕೇಂದ್ರ ಸರ್ಕಾರ ಉತ್ತಮ ಆಫರ್ ನೀಡುತ್ತಿದೆ.
  • ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಸರ್ಕಾರಿ ಗೋಲ್ಡ್ ಬಾಂಡ್ ಯೋಜನೆ ಆರಂಭ
ಸರ್ಕಾರದಿಂದ ಅಗ್ಗದಬೆಲೆಗೆ ಚಿನ್ನದ ಮಾರಾಟ! ಈ ದಿನದಿಂದ ಖರೀದಿ ಸಾಧ್ಯ  title=
RBI Gold Bond Scheme

ಬೆಂಗಳೂರು : RBI Gold Bond Scheme : ಚಿನ್ನದ ಬೆಲೆ ದಿನೇ ದಿನೇ ಗಗನ ಮುಖಿಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಚಿನ್ನ ಕೊಳ್ಳುವುದು ಹೇಗೆ ಎನ್ನುವ ಚಿಂತೆ ಎಲ್ಲರನ್ನೂ ಕಾಡುವುದು ಸಹಜ. ಈ ಮಧ್ಯೆ, ಕೇಂದ್ರ  ಸರ್ಕಾರ ಉತ್ತಮ ಆಫರ್ ನೀಡುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಸರ್ಕಾರಿ ಗೋಲ್ಡ್ ಬಾಂಡ್ ಯೋಜನೆ ಆರಂಭಿಸಲಿದೆ. ಎರಡು ಹಂತಗಳಲ್ಲಿ ಸರ್ಕಾರಿ ಚಿನ್ನದ ಬಾಂಡ್ ಯೋಜನೆಯನ್ನು RBI ಬಿಡುಗಡೆ ಮಾಡುತ್ತದೆ. ಹೂಡಿಕೆಯ ಯೋಜನೆಯನ್ನು ಡಿಸೆಂಬರ್ ಮತ್ತು ಮಾರ್ಚ್‌ನಲ್ಲಿ ತೆರೆಯಲಾಗುತ್ತದೆ.

ಡಿಸೆಂಬರ್ 19 ರಿಂದ 23 ರವರೆಗೆ ಹೂಡಿಕೆ ಮಾಡಲು ಅವಕಾಶ :
ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ ಮೊದಲ ಹಂತದಲ್ಲಿ ಡಿಸೆಂಬರ್ 19 ರಿಂದ 23 ರವರೆಗೆ ಹೂಡಿಕೆ ಮಾಡಬಹುದು. ಎರಡನೇ ಹಂತದಲ್ಲಿ ಮಾರ್ಚ್ 6ರಿಂದ 10ರವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಭಾರತ ಸರ್ಕಾರದ ಪರವಾಗಿ ಆರ್‌ಬಿಐ ಈ ಬಾಂಡ್ ಅನ್ನು ಬಿಡುಗಡೆ ಮಾಡುತ್ತದೆ. ಗೋಲ್ಡ್ ಬಾಂಡ್‌ಗಳನ್ನು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಆಯ್ದ ಅಂಚೆ ಕಚೇರಿಗಳು ಮತ್ತು ಬಿಎಸ್‌ಇ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್, ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಇದನ್ನೂ ಓದಿ : 500 ರೂಪಾಯಿ ನೋಟ್ ಬಗ್ಗೆ ಸರ್ಕಾರ ನೀಡಿದೆ ಮಹತ್ವದ ಮಾಹಿತಿ .!

4 ಕೆಜಿವರೆಗೆ ಇರಲಿದೆ  ಖರೀದಿ ಮಿತಿ :
ಚಿನ್ನದ ಬಾಂಡ್‌ನ ಅವಧಿ ಎಂಟು ವರ್ಷಗಳು. ಹೂಡಿಕೆದಾರರು ಅರ್ಧ-ವಾರ್ಷಿಕ ಆಧಾರದ ಮೇಲೆ ವಾರ್ಷಿಕ 2.50 ಪ್ರತಿಶತದಷ್ಟು ಬಡ್ಡಿಯನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಹೂಡಿಕೆದಾರರು ಗರಿಷ್ಠ 4 ಕೆಜಿ ವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.  ಸಾವರಿನ ಗೋಲ್ಡ್ ಬಾಂಡ್ ಬೆಲೆಯನ್ನು ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಲಾಗುತ್ತದೆ.  ಆನ್‌ಲೈನ್‌ನಲ್ಲಿ ಚಂದಾದಾರರಾಗುವ ಮತ್ತು ಡಿಜಿಟಲ್ ಮೋಡ್ ಮೂಲಕ ಈ ಯೋಜನೆಯಲ್ಲಿ ಪಾವತಿಸುವ ಹೂಡಿಕೆದಾರರಿಗೆ  ಪ್ರತಿ ಗ್ರಾಂ ಚಿನ್ನದ ಬೆಲೆಯ ಮೇಲೆ  50 ರೂಪಾಯಿಯಷ್ಟು ಕಡಿತ ನೀಡಲಾಗುತ್ತದೆ. 

ಹಿಂದೂ ಅವಿಭಜಿತ ಕುಟುಂಬಕ್ಕೆ  4 ಕೆಜಿ ಮತ್ತು  ಸಂಸ್ಥೆಗಳಾದರೆ 20 ಕೆಜಿ. ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಭೌತಿಕ ಚಿನ್ನದ  ಬೇಡಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮತ್ತು ಹೂಡಿಕೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ನವೆಂಬರ್ 2015 ರಲ್ಲಿ ಗೋಲ್ಡ್ ಬಾಂಡ್ ಯೋಜನೆಯನ್ನು ಮೊದಲು ಪರಿಚಯಿಸಲಾಯಿತು. ಇದಾದ ನಂತರ ಈ ಯೋಜನೆಗೆ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : SBI: ಕೋಟ್ಯಾಂತರ ಎಸ್‌ಬಿಐ ಗ್ರಾಹಕರಿಗೆ ಬಿಗ್ ಶಾಕ್, ಇಂದಿನಿಂದ ಈ ಕೆಲಸಕ್ಕೆ ಶುಲ್ಕ ಹೆಚ್ಚಳ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News