Alert..! ಈ ತಿಂಗಳು ಅಂತ್ಯದೊಳಗೆ ಮಾಡಿಯೇ ಮುಗಿಸಬೇಕಾದ ಕೆಲಸಗಳಿವು

2020-21 ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 ಆಗಿದೆ. ತೆರಿಗೆ ತಜ್ಞರ ಪ್ರಕಾರ, ಗಡುವಿನ ಮೊದಲು ಐಟಿಆರ್ ಸಲ್ಲಿಸುವುದರಿಂದ ದಂಡವನ್ನು ತಪ್ಪಿಸಬಹುದು.

Written by - Ranjitha R K | Last Updated : Dec 15, 2021, 11:29 AM IST
  • ಈ ತಿಂಗಳು ಮಾಡಬೇಕಾದ 4 ಪ್ರಮುಖ ಕೆಲಸಗಳು
  • ಆದಾಯ ತೆರಿಗೆ ರಿಟರ್ನ್ ಡಿ. 31 ರೊಳಗೆ ಸಲ್ಲಿಸಿ
  • ಆಡಿಟ್ ವರದಿ ಸಲ್ಲಿಸುವುದು ಕಡ್ಡಾಯ
Alert..!  ಈ ತಿಂಗಳು ಅಂತ್ಯದೊಳಗೆ ಮಾಡಿಯೇ ಮುಗಿಸಬೇಕಾದ ಕೆಲಸಗಳಿವು  title=
ಈ ತಿಂಗಳು ಮಾಡಬೇಕಾದ 4 ಪ್ರಮುಖ ಕೆಲಸಗಳು (file photo)

ನವದೆಹಲಿ : 2021 ರ ಕೊನೆಯ ತಿಂಗಳು ಅಂದರೆ ಡಿಸೆಂಬರ್ ನಡೆಯುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ, ಕೆಲವೊಂದು ಕೆಲಸಗಳನ್ನು ಮುಗಿಸಲೇ ಬೇಕು. ನಿಗದಿತ ದಿನಾಂಕದ ಮೊದಲು ಈ ಕಾರ್ಯಗಳನ್ನು ಪೂರ್ಣಗೊಳಿಸದಿದ್ದರೆ, ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ನೀವು ಇನ್ನೂ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸದಿದ್ದರೆ, ಡಿಸೆಂಬರ್ 31 ರೊಳಗೆ ಆ ಕೆಲಸವನ್ನು ಮಾಡಿ ಮುಗಿಸಬೇಕು. ಅದೇ ವೇಳೆ, ಇಪಿಎಫ್‌ಒ (EPFO) ಪಿಎಫ್ (PF) ಖಾತೆದಾರರಿಗೆ ನಾಮಿನಿಯನ್ನು ಸೇರಿಸಲು ಈ ತಿಂಗಳ ಅಂತ್ಯದವರೆಗೆ ಮಾತ್ರ ಸಮಯಾವಕಾಶ ನೀಡಲಾಗಿದೆ. 

ಆದಾಯ ತೆರಿಗೆ ರಿಟರ್ನ್ :
2020-21 ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 ಆಗಿದೆ. ತೆರಿಗೆ ತಜ್ಞರ ಪ್ರಕಾರ, ಗಡುವಿನ ಮೊದಲು ಐಟಿಆರ್ ಸಲ್ಲಿಸುವುದರಿಂದ ದಂಡವನ್ನು ತಪ್ಪಿಸಬಹುದು. ನಿಗದಿತ ದಿನಾಂಕದ ಮೊದಲು ITR ಸಲ್ಲಿಸದಿದ್ದರೆ, ಭಾರೀ ದಂಡವನ್ನು ಪಾವತಿಸಬೇಕಾಗಬಹುದು. ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದರೆ, ನೋಟಿಸ್ ಪಡೆಯುವ ಭಯವಿಲ್ಲ.

ಇದನ್ನೂ ಓದಿ : ಈ ನಂಬರ್ ಕಳೆದುಹೋದರೆ ನಿಂತು ಹೋಗುತ್ತದೆ ಪಿಂಚಣಿ..! ಮತ್ತೆ ಪಡೆಯಲು ಅನುಸರಿಸಿ ಈ ಸರಳ ಉಪಾಯ

ಪಿಎಫ್ ಖಾತೆದಾರರಿಗೆ ನಾಮಿನಿ ಅಗತ್ಯ : 
ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಎಲ್ಲಾ ಪಿಎಫ್ ಖಾತೆದಾರರಿಗೆ ನಾಮಿನಿಯನ್ನು ಸೇರಿಸುವಂತೆ ಕೇಳಿದೆ.  ನೇ ಡಿಸೆಂಬರ್ 31ರೊಳಗೆ ನಾಮಿನಿಯನ್ನು ಸೇರಿಸಲು ಕೊನೆಯ ದಿನಾಂಕ ಎಂದು ನಿಗದಿಪಡಿಸಿದೆ. ಡಿಸೆಂಬರ್ 31 ರೊಳಗೆ  ಪಿಎಫ್ ಖಾತೆಗೆ ನಾಮಿನಿಯನ್ನು ಸೇರಿಸದಿದ್ದರೆ, ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. EPFO ನ ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಈ ಕೆಲಸವನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಮಾಡಬಹುದು. PF ಹಣ, ಉದ್ಯೋಗಿ ಪಿಂಚಣಿ ಯೋಜನೆ (EPS) ಮತ್ತು EPF ಸದಸ್ಯರ ಮರಣದ ಸಂದರ್ಭದಲ್ಲಿ ನೌಕರರ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (EDLI) ಲಾಭವನ್ನು ಪಡೆಯಲು ನಾಮಿನಿ ಮಾಡಿಸುವುದು ಅಗತ್ಯವಾಗಿರುತ್ತದೆ. 

ಆಡಿಟ್ ರಿಪೋರ್ಟ್ ಫೈಲ್ : 
ಈ ತಿಂಗಳ ಅಂತ್ಯದೊಳಗೆ ಆಡಿಟ್ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ವಾರ್ಷಿಕ ಆದಾಯ 10 ಕೋಟಿ ರೂ.ಗಿಂತ ಹೆಚ್ಚಿರುವ ಉದ್ಯಮಿಗಳು ಆದಾಯ ತೆರಿಗೆ ರಿಟರ್ನ್ ಜೊತೆಗೆ ಆಡಿಟ್ ವರದಿಯನ್ನು ಕೂಡಾ ಸಲ್ಲಿಸಬೇಕು. ಆರ್ಕಿಟೆಕ್ಟ್‌ಗಳು, ಎಂಜಿನಿಯರ್‌ಗಳು, ವೈದ್ಯರು, ಚಲನಚಿತ್ರ ನಟರು, ವಕೀಲರು, ತಂತ್ರಜ್ಞರಂತಹ ವೃತ್ತಿಪರರು 50 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಲೆಕ್ಕಪರಿಶೋಧನಾ ವರದಿಯನ್ನು ನೀಡಬೇಕು. 2020-21 ರ ಆರ್ಥಿಕ ವರ್ಷಕ್ಕೆ ಆಡಿಟ್ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31 ಆಗಿದೆ. 

ಇದನ್ನೂ ಓದಿ : LIC ಹೊರ ತಂದಿದೆ ನೂತನ ಪಾಲಿಸಿ Dhan Rekha! ಪಾಲಿಸಿದಾರರಿಗೆ ಸಿಗಲಿದೆ ಅದ್ಬುತ ಪ್ರಯೋಜನ

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ :
ಬ್ಯಾಂಕ್ ಆಫ್ ಬರೋಡಾ (Bank of Baroda) ಹಬ್ಬದ ಸೀಸನ್ ನಲ್ಲಿ ಗೃಹ ಸಾಲದ ಬಡ್ಡಿ ದರವನ್ನು 6.50% ಕ್ಕೆ ಇಳಿಸಿದೆ. ಅಂದರೆ ಈಗ ಅಗ್ಗದ ದರದಲ್ಲಿ ಗೃಹ ಸಾಲವನ್ನು (Housing loan) ತೆಗೆದುಕೊಳ್ಳಬಹುದು. ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಹೊಸ ಸಾಲದ ಹೊರತಾಗಿ, ಹೊಸ ಬಡ್ಡಿದರದ ಪ್ರಯೋಜನವು ಇತರ ಬ್ಯಾಂಕ್‌ನಿಂದ ವರ್ಗಾಯಿಸಲಾದ ಗೃಹ ಸಾಲದ ಮೇಲೆಯೂ ಲಭ್ಯವಿರುತ್ತದೆ. ಆದರೆ, ಈ ಕೊಡುಗೆಯ ಲಾಭವನ್ನು ಡಿಸೆಂಬರ್ 31 ರವರೆಗೆ ಮಾತ್ರ ಪಡೆದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News