ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಗ್ರಾಹಕ ಸಾಲ ವಿತರಣೆಗೆ ಸಂಬಂಧಿಸಿದ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಗ್ರಾಹಕ ಸಾಲಗಳನ್ನು ವಿತರಿಸುವಾಗ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಬಫರ್ ಮಾಡಬೇಕಾದ ಮೊತ್ತದ ಮಿತಿಯನ್ನು ಹೆಚ್ಚಿಸಲಾಗಿದೆ. ಅರ್ಥಾತ್, ಇದೀಗ ಗ್ರಾಹಕ ಸಾಲಗಳನ್ನು ವಿತರಿಸಲು ಅಪಾಯದ ವೆಟೆಜ್ ಹೆಚ್ಚಾಗಲಿದೆ. ಗ್ರಾಹಕ ಸಾಲವು ವೈಯಕ್ತಿಕ ಸಾಲವನ್ನು ಒಳಗೊಂಡಿರುತ್ತದೆ. ಇದು ಹೊಸ ಮತ್ತು ಹಳೆಯ ಸಾಲಗಳೆರಡಕ್ಕೂ ಅನ್ವಯಿಸುತ್ತದೆ. ಆದಾಗ್ಯೂ, ಗೃಹ ಸಾಲ, ಶಿಕ್ಷಣ ಸಾಲ, ವಾಹನ ಸಾಲ ಮತ್ತು ಚಿನ್ನದ ಸಾಲವನ್ನು ಇದರ ವ್ಯಾಪ್ತಿಯ ಹೊರಗೆ ಇರಿಸಲಾಗಿದೆ. ಅಪಾಯದ ತೂಕವನ್ನು 25% ಹೆಚ್ಚಿಸಲಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ. ಬದಲಾದ ನಿಯಮಗಳಿಂದಾಗಿ ವೈಯಕ್ತಿಕ ಸಾಲ ದುಬಾರಿಯಾಗಲಿದೆ. (Business News In Kannada)
ಇದನ್ನೂ ಓದಿ-ಏರ್ಟೆಲ್, ಜಿಯೋ, ವಿಐ, ಬಿಎಸ್ಎನ್ಎಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಟ್ರಾಯ್! ನಿಮಗೂ ಬಂದಿದೆಯಾ?
ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳಿಗೆ ವೆಟೆಜ್ ರಿಸ್ಕ್
ಆರ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಧಿಸೂಚನೆಯಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ನಿಯಮಗಳ ಪ್ರಕಾರ, ಗ್ರಾಹಕರ ಕ್ರೆಡಿಟ್‌ಗೆ ಅಂದರೆ ಗ್ರಾಹಕ ಸಾಲದ ವೆಟೆಜ್ ರಿಸ್ಕ್ ಅನ್ನು 100% ರಿಂದ 125% ಕ್ಕೆ ಹೆಚ್ಚಿಸಲಾಗಿದೆ. ಇದು ಹೊಸ ಮತ್ತು ಹಳೆಯ ಸಾಲಗಳೆರಡಕ್ಕೂ ಅನ್ವಯಿಸುತ್ತದೆ. ವೈಯಕ್ತಿಕ ಸಾಲವನ್ನು ಇದರಲ್ಲಿ ಸೇರಿಸಲಾಗಿದೆ. ಗೃಹ ಸಾಲ, ಶಿಕ್ಷಣ ಸಾಲ, ವಾಹನ ಸಾಲ ಮತ್ತು ಚಿನ್ನದ ಸಾಲವನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.
ಇದನ್ನೂ ಓದಿ-ವೈಯಕ್ತಿಕ ಸಾಲ ತೆಗೆದುಕೊಳ್ಳುವ ಬದಲು ಇಲ್ಲಿಂದ ಹಣ ಪಡೆದುಕೊಳ್ಳಿ, ಹೊರೆ ಕಮ್ಮಿಯಾಗುತ್ತೆ!
ಈ ಮೊದಲು ಎನ್‌ಬಿಎಫ್‌ಸಿಗಳಿಗೆ ಸಂಬಂಧಿಸಿದಂತೆ ನೀಡಲಾದ ನಿಯಮಗಳ ಪ್ರಕಾರ, ಗ್ರಾಹಕರ ಕ್ರೆಡಿಟ್‌ಗೆ ವೆಟೆಜ್ ರಿಸ್ಕ್ 100% ಆಗಿತ್ತು. ಇದೀಗ ಅದನ್ನು ಶೇ.125ಕ್ಕೆ ಹೆಚ್ಚಿಸಲಾಗಿದೆ. ಇದು ಹೊಸ ಮತ್ತು ಹಳೆಯ ಸಾಲ ಎರಡಕ್ಕೂ ಅನ್ವಯಿಸುತ್ತದೆ. ಇದು ಎಲ್ಲಾ ರೀತಿಯ ಚಿಲ್ಲರೆ ಸಾಲಗಳನ್ನು ಒಳಗೊಂಡಿರುತ್ತದೆ. ಆದರೆ, ಗೃಹ ಸಾಲ, ಶಿಕ್ಷಣ ಸಾಲ, ವಾಹನ ಸಾಲ, ಚಿನ್ನದ ಸಾಲವನ್ನು ಇದರ ವ್ಯಾಪ್ತಿಯಿಂದ ಪ್ರತ್ಯೇಕವಾಗಿ ಇರಿಸಲಾಗಿದೆ. ಇದರಲ್ಲಿ ಮೈಕ್ರೊ ಫೈನಾನ್ಸ್ ಸಾಲ ಮತ್ತು ಸ್ವಸಹಾಯ ಗುಂಪುಗಳಿಗೆ ವಿತರಿಸುವ ಸಾಲಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ