Samsung Diwali Offers: ಸ್ಮಾರ್ಟ್‌ಫೋನ್‌ಗಳ ಮೇಲೆ 57ಶೇ. ರಿಯಾಯಿತಿ, ಟಿವಿಯೊಂದಿಗೆ ಫೋನ್ ಫ್ರೀ

Samsung Diwali Offers: ಹಬ್ಬದ ಹಿನ್ನೆಲೆಯಲ್ಲಿ ಖರೀದಿಯೂ ಜೋರಾಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಕಂಪನಿಗಳು ಭರ್ಜರಿ ಆಫರ್ ನೀಡುತ್ತದೆ. 

Written by - Ranjitha R K | Last Updated : Sep 29, 2022, 09:26 AM IST
  • ಹಬ್ಬದ ಹಿನ್ನೆಲೆಯಲ್ಲಿ ಜೋರಾಗಿದೆ ಖರೀದಿ
  • ಕಂಪನಿಗಳು ನೀಡುತ್ತಿವೆ ಭಾರೀ ಆಫರ್
  • ಅಬ್ಬರದ ಸೇಲ್ ಆರಂಭಿಸಿದ ಸ್ಯಾಮ್‌ಸಂಗ್ ಇಂಡಿಯಾ
Samsung Diwali Offers: ಸ್ಮಾರ್ಟ್‌ಫೋನ್‌ಗಳ ಮೇಲೆ  57ಶೇ. ರಿಯಾಯಿತಿ, ಟಿವಿಯೊಂದಿಗೆ ಫೋನ್  ಫ್ರೀ  title=
Samsung Diwali Offers (file photo)

Samsung Diwali Offers : ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ದಸರಾ ಬೆನ್ನಲ್ಲೇ ದೀಪಾವಳಿ ಸಡಗರ ಮನೆ ಮಾಡಲಿದೆ. ಈ ಹಬ್ಬದ ಹಿನ್ನೆಲೆಯಲ್ಲಿ ಖರೀದಿಯೂ ಜೋರಾಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಕಂಪನಿಗಳು ಭರ್ಜರಿ ಆಫರ್ ನೀಡುತ್ತದೆ. ಈ ಬಾರಿಯೂ ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆಯೇ ವಿವಿಧ ಕಂಪನಿಗಳು ಗ್ರಾಹಕರಿಗೆ  ಭಾರೀ ಆಫರ್ ಗಳನ್ನು ನೀಡಲಾರಂಭಿಸಿವೆ. 

ಅಬ್ಬರದ ಸೇಲ್ ಆರಂಭಿಸಿದ ಸ್ಯಾಮ್‌ಸಂಗ್ ಇಂಡಿಯಾ  :
ಆನ್‌ಲೈನ್  ಶಾಪಿಂಗ್ ಸೈಟ್ ಗಳಾದ  ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಗ್ರಾಹಕರಿಗೆ ಹಲವು ರೀತಿಯ ಆಫರ್‌ಗಳನ್ನು ನೀಡುತ್ತಿವೆ. ಇದೀಗ ಸ್ಯಾಮ್‌ಸಂಗ್ ಇಂಡಿಯಾ ತನ್ನ ಮೆಗಾ ಸೇಲ್ No Mo’FOMO ಸೇಲ್ ಅನ್ನು ಆರಂಭಿಸಿದೆ. ಆನ್‌ಲೈನ್‌ನಲ್ಲಿ ನಡೆಯುವ ಈ ಸೇಲ್‌ನಲ್ಲಿ, ಕಂಪನಿಯು ಎಲ್ಲಾ ರೀತಿಯ ಗೃಹೋಪಯೋಗಿ ವಸ್ತುಗಳು, ಟೆಕ್ ಪರಿಕರ ಮತ್ತು ಸ್ಮಾರ್ಟ್‌ಫೋನ್‌, ಟಿವಿಗಳ ಮೇಲೆ ಉತ್ತಮ ಆಫರ್ ನೀಡುತ್ತಿದೆ. ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಫೋನ್ ಖರೀದಿಸುವ ಯೋಚನೆಯಿದ್ದರೆ, ಈ ಸೇಲ್ ನಲ್ಲಿ ಸ್ಯಾಮ್‌ಸಂಗ್ ಫೋನ್ ಖರೀದಿಸಬಹುದು. Galaxy M, S ಮತ್ತು Z ಸರಣಿಯ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಕಂಪನಿಯು ಶೇಕಡಾ 57 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. 

ಇದನ್ನೂ ಓದಿ : Gold Price Today : ಇಂದಿನ ಬಂಗಾರದ ಬೆಲೆ ಎಷ್ಟಿದೆ ತಿಳಿಯಿರಿ

6 ಸಾವಿರ ರೂಪಾಯಿ ಬೆಲೆಯ ಚಾರ್ಜರ್  ಕೇವಲ 500 ರೂ.ಗೆ :
ಈ ಸೇಲ್ ‌ನಲ್ಲಿ Galaxy Z ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರೆ, 5199 ರೂಪಾಯಿ ಮೌಲ್ಯದ  ವೈರ್‌ಲೆಸ್ ಚಾರ್ಜರ್ ಡ್ಯುಯೊವನ್ನು ಕೇವಲ  499 ರೂ.ಗೆ ಖರೀದಿಸಬಹುದು. Galaxy S ಸರಣಿ ಮತ್ತು Galaxy A ಸರಣಿಯ ಸ್ಮಾರ್ಟ್‌ಫೋನ್‌ಗಳ ಖರೀದಿಸಿದರೆ, ಫೋನ್ ಕವರ್‌ ಮೇಲೆ  50% ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. Galaxy F ಸರಣಿಯ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆಯನ್ನು 10,999 ರೂಗಳಲ್ಲಿ ಇರಿಸಲಾಗಿದೆ. ಅದೇ ಸಮಯದಲ್ಲಿ, Galaxy M ಸರಣಿಯ ಸ್ಮಾರ್ಟ್‌ಫೋನ್‌ಗಳು ಕೂಡಾ  10,499 ರೂ.ಯಿಂದ ಪ್ರಾರಂಭವಾಗುತ್ತವೆ. ಈ ಆನ್‌ಲೈನ್  ಸೇಲ್ ನಲ್ಲಿ Galaxy S20 FE 5G ಸ್ಮಾರ್ಟ್‌ಫೋನ್ ಇದೇ ಮೊದಲ ಬಾರಿಗೆ 26,999 ರೂ. ಗೆ ಸಿಗುತ್ತಿದೆ. ಅದನ್ನು EMIನಲ್ಲಿಯೂ ಖರೀದಿಸಬಹುದು. 

ಟಿವಿ ಖರೀದಿಸಿದರೆ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಉಚಿತ :
ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ, ಸ್ಯಾಮ್‌ಸಂಗ್‌ನ ಎಲ್‌ಇಡಿ ಟಿವಿ ಖರೀದಿಸಿದರೆ ಗ್ಯಾಲಕ್ಸಿ ಎ32 ಸ್ಮಾರ್ಟ್‌ಫೋನ್ ಉಚಿತವಾಗಿ ಸಿಗುತ್ತದೆ. ಮತ್ತೊಂದೆಡೆ, ಸ್ಯಾಮ್‌ಸಂಗ್‌ನ  ವಾಶಿಂಗ್ ಮೆಷಿನ್  ಖರೀದಿಸಿದರೆ,  ಮೈಕ್ರೋವೇವ್ ಓವನ್ ಉಚಿತವಾಗಿ  ಸಿಗುತ್ತದೆ. ಈ  ಸೇಲ್ ನಲ್ಲಿ UHD ಸ್ಮಾರ್ಟ್ ಟಿವಿಗಳಲ್ಲಿ ಕಂಪನಿಯು ಉತ್ತಮ ಕೊಡುಗೆಗಳನ್ನು ನೀಡುತ್ತಿದೆ. ಕ್ರಿಸ್ಟಲ್ 4K UHD ಸ್ಮಾರ್ಟ್ ಟಿವಿ AUE60ಯನ್ನು 45% ರಿಯಾಯಿತಿಯೊಂದಿಗೆ ಖರೀದಿಸಬಹುದು. 

ಇದನ್ನೂ ಓದಿ : Cabinet Meeting : ಕ್ಯಾಬಿನೆಟ್ ಸಭೆಯಲ್ಲಿ DA ಹೆಚ್ಚಳ, ಉಚಿತ ಪಡಿತರ ಸೇರಿದಂತೆ, ರೈಲ್ವೆ ನೌಕರರಿಗೆ ಬಿಗ್ ಗಿಫ್ಟ್!

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News