ಅಗ್ಗದ ದರದಲ್ಲಿ ಮನೆ, ಅಂಗಡಿ ಹಾಗೂ ಪ್ಲಾಟ್ ಖರೀದಿಸಲು ಶೀಘ್ರದಲ್ಲಿಯೇ SBI ನಿಂದ ಯೋಜನೆ ಜಾರಿ

ದೇಶದ ಅತಿದೊಡ್ಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ ಮನೆಗಳು, ಅಂಗಡಿಗಳು ಮತ್ತು ಪ್ಲಾಟ್‌ಗಳನ್ನು ಅಗ್ಗವಾಗಿ ಖರೀದಿಸುವ ಯೋಜನೆಯನ್ನು ತಂದಿದೆ.

Updated: Sep 25, 2020 , 04:36 PM IST
ಅಗ್ಗದ ದರದಲ್ಲಿ ಮನೆ, ಅಂಗಡಿ ಹಾಗೂ ಪ್ಲಾಟ್ ಖರೀದಿಸಲು ಶೀಘ್ರದಲ್ಲಿಯೇ SBI ನಿಂದ ಯೋಜನೆ ಜಾರಿ

ನವದೆಹಲಿ: ಮುಂಬರುವ ದಿನಗಳಲ್ಲಿ ಒಂದು ವೇಳೆ ನೀವು ಮನೆ, ಅಂಗಡಿ ಅಥವಾ ಪ್ಲಾಟ್‌ಗಳನ್ನು ಅಗ್ಗವಾಗಿ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಇಲ್ಲಿದೆ ಒಂದು ಸುವರ್ಣಾವಕಾಶ. ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಿಮಗೆ  ಮನೆ, ಅಂಗಡಿ ಹಾಗೂ  ಪ್ಲಾಟ್‌ಗಳನ್ನು ಅಗ್ಗವಾಗಿ ಖರೀದಿಸಲುಯೋಜನೆಯನ್ನು ತಂದಿದೆ. ಬ್ಯಾಂಕ್ ತನ್ನಲ್ಲಿರುವ ಆಸ್ತಿಗಳನ್ನು ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ಕೈಗೊಳ್ಳಲಿದೆ. ಈ ಅವಕಾಶವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

ಇದನ್ನು ಓದಿ- 2 ವರ್ಷಗಳವರೆಗೆ ಎಲ್ಲಾ ರೀತಿಯ ಲೋನ್ ಮರುಪಾವತಿಸಲು ಸಿಗಲಿದೆ ನೆಮ್ಮದಿ, SBI ತಂದಿದೆ ಈ ಸ್ಕೀಮ್

ಜಪ್ತಿ ಮಾಡಿಕೊಳ್ಳಲಾದ ಆಸ್ತಿಗಳ ಹರಾಜು ಪ್ರಕ್ರಿಯೆ
ಭಾರತೀಯ ಸ್ಟೇಟ್ ಬ್ಯಾಂಕ್ (SBI)ಸೆಪ್ಟೆಂಬರ್ 30 ರಂದು ಮೆಗಾ ಇ-ಹರಾಜು ಪ್ರಕ್ರಿಯೆ ನಡೆಸಲಿದೆ. ಈ ಹರಾಜಿನಲ್ಲಿ, 1000 ಕ್ಕೂ ಹೆಚ್ಚು ಆಸ್ತಿಗಳನ್ನು ಹರಾಜಿಗೆ ಇಡಲಾಗುತ್ತದೆ. ಇವುಗಳಲ್ಲಿ ಓಪನ್ ಪ್ಲಾಟ್, ವಸತಿ, ಕೈಗಾರಿಕಾ ಮತ್ತು ವಾಣಿಜ್ಯ ಆಸ್ತಿಗಳು ಶಾಮೀಲಾಗಿವೆ. ಬ್ಯಾಂಕಿನ ಸಾಲವನ್ನು ಮರುಪಾವತಿಸಲು ವಿಫಲರಾದವರ ಅಡಮಾನ ಆಸ್ತಿ ಇವುಗಲಾಗಿವೆ. ಈಗ ಎಸ್‌ಬಿಐ ತನ್ನ ಬಾಕಿ ಹಣವನ್ನು ವಸೂಲಿ ಮಾಡಲು ಈ ಆಸ್ತಿಗಳನ್ನು ಹರಾಜು ಮಾಡಲಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ತನ್ನ ಟ್ವಿಟ್ಟರ್ ಹ್ಯಾಂಡಲ್‌ ಮೂಲಕ ಮಾಹಿತಿ ನೀಡಿದೆ.

ಇದನ್ನು ಓದಿ- ತನ್ನ ಖಾತೆದಾರರಿಗೆ ಮತ್ತೊಂದು ಸಂತಸದ ಸುದ್ದಿ ಪ್ರಕಟಿಸಿದ SBI

ಭಾರತೀಯ ಸ್ಟೇಟ್ ಬ್ಯಾಂಕ್ ನ ವೆಬ್ಸೈಟ್ ನಲ್ಲಿ ನೀಡಲಾಗಿರುವ ವಿವರಗಳ ಪ್ರಕಾರ, ಬ್ಯಾಂಕ್ ಆದವು ಇಟ್ಟ ಅಥವಾ ಕೋರ್ಟ್ ಆದೇಶದಿಂದ ಜಪ್ತಿ ಮಾಡಲಾಗಿರುವ ಸ್ಥರಾಸ್ತಿಗಳನ್ನು ಹರಾಜು ನಡೆಸಲಿದೆ. ಈ ಹರಾಜು ಪ್ರಕ್ರಿಯೆ ಸಂಪೂರ್ಣ ಪಾರದರ್ಶಕತೆಯಿಂದ ಕೂದಿರಲಿದೆ ಎಂದು ಬ್ಯಾಂಕ್ ಹೇಳಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಡಿಟೇಲ್ ಗಳನ್ನು ಮುಂದಿರಿಸಲಿದೆ ಎಂದು ಬ್ಯಾಂಕ್ ಹೇಳಿದೆ. ಹರಾಜಿಗೆ ನೀಡಲಾದ ಸಾರ್ವಜನಿಕ ಪ್ರಕಟಣೆಯಲ್ಲಿ ಆಸ್ತಿಯ ಫ್ರೀಹೋಲ್ಡ್ ಅಥವಾ ಗುತ್ತಿಗೆ, ಅದರ ಅಳತೆ, ಸ್ಥಳ ಇತ್ಯಾದಿ ಸೇರಿದಂತೆ ಇತರ ಮಾಹಿತಿಯನ್ನು ನೀಡಲಾಗುವುದು ಎಂದು ಬ್ಯಾಂಕ್ ಹೇಳಿದೆ.

ಇದನ್ನು ಓದಿ- ಇನ್ಮುಂದೆ Debit Card ಅಲ್ಲ, Watch ಬಳಸಿ ಈ ಕೆಲಸ ಮಾಡಿ, SBI ಆರಂಭಿಸಿದೆ ಈ ಅದ್ಭುತ ಸೇವೆ

ಎಲ್ಲಿ ಸಂಪರ್ಕಿಸಬೇಕು?
ಈ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಗಾಗಿ, ಗ್ರಾಹಕರು ಎಸ್‌ಬಿಐನ ಯಾವುದೇ ಹತ್ತಿರದ ಶಾಖೆಯನ್ನು ಸಂಪರ್ಕಿಸಬಹುದು. ಇದಕ್ಕಾಗಿ, ಬ್ಯಾಂಕ್ ನಲ್ಲಿ ಸಂಪರ್ಕಕ್ಕಾಗಿ ವ್ಯಕ್ತಿಯನ್ನು ನಿಯೋಜಿಸಲಿದೆ. ಇ-ಹರಾಜಿನಲ್ಲಿ ಆಸ್ತಿಯನ್ನು ಖರೀದಿಸುವ ವ್ಯಕ್ತಿಯು ಹರಾಜು ಪ್ರಕ್ರಿಯೆ ಮತ್ತು ಸಂಬಂಧಿತ ಆಸ್ತಿಯ ಬಗ್ಗೆ ಯಾವುದೇ ಮಾಹಿತಿಯನ್ನು ಪಡೆಯಬಹುದು. ನೀವು ಆಸ್ತಿಯನ್ನು ಸಹ ಪರಿಶೀಲಿಸಬಹುದು.