ನವದೆಹಲಿ: ಟಾಟಾ ಮೋಟಾರ್ಸ್ ಕನಿಷ್ಠ 10 ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವುದರೊಂದಿಗೆ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಹೊಸ ಕ್ರಾಂತಿಯನ್ನು ಮಾಡಲು ಹೊರಟಿದೆ.
ವಾಹನ ತಯಾರಕ ಸಂಸ್ಥೆಯು ಇತ್ತೀಚೆಗೆ TPG ರೈಸ್ ಕ್ಲೈಮೇಟ್ ನಿಂದ ಬೃಹತ್ ಹೂಡಿಕೆಯನ್ನು ಸಂಗ್ರಹಿಸಿದೆ. ಹೂಡಿಕೆ ಸಂಸ್ಥೆಯು ಭಾರತೀಯ ಕಾರು ತಯಾರಿಕೆಯಲ್ಲಿ 1 ಬಿಲಿಯನ್ ಡಾಲರ್ ಅಥವಾ 7,500 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಇದನ್ನೂ ಓದಿ- Pulse Oximeter: ಆಕ್ಸಿಮೀಟರ್ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಇಲ್ಲಿದೆ ಅಗ್ಗದ ಆಯ್ಕೆ
ಇತ್ತೀಚೆಗೆ ಸಂಗ್ರಹಿಸಿದ ನಿಧಿಯೊಂದಿಗೆ, ಟಾಟಾ ಮೋಟಾರ್ಸ್ ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಇಂಧನ ಆಧಾರಿತ ವಾಹನಗಳಿಂದ ಎಲೆಕ್ಟ್ರಿಕ್ ಆಗಿ ಪರಿವರ್ತನೆಗೊಳ್ಳುವಂತಹ ಎಲೆಕ್ಟ್ರಿಕ್ ನಾಲ್ಕು ಚಕ್ರದ ವಾಹನಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.
ವಾಹನ ತಯಾರಕರು ಈಗಿರುವ ಮಾದರಿಗಳಿಗಿಂತ ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸಿದ್ದಾರೆ ಎಂದು ಟಾಟಾ ಖಚಿತಪಡಿಸಿದೆ. ಮುಂಬರುವ ಕಾರುಗಳು ಚಾಲನೆಗೆ ಸಹಾಯ ಮಾಡಲು ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಹೆಚ್ಚು ರೋಮಾಂಚನಕಾರಿಯಾಗಬಹುದು.
ಇದನ್ನೂ ಓದಿ- ಭಾರತದಲ್ಲಿ ಪ್ರಾರಂಭವಾಗಿದೆ ಆಪಲ್ ಸ್ಮಾರ್ಟ್ ವಾಚ್ 6, ಎಸ್ಇ ಮಾರಾಟ
ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನಗಳಿಗೆ ಹೊಸದಾಗಿ ಸಂಯೋಜಿತ ಅಂಗಸಂಸ್ಥೆಯನ್ನು EVCo ಎಂದು ಹೆಸರಿಸಿದೆ, ಇದು ಮುಂಬರುವ ಎಲೆಕ್ಟ್ರಿಕ್ ನಾಲ್ಕು ಚಕ್ರಗಳ ಮೇಲೆ ಕೆಲಸ ಮಾಡುತ್ತಿದೆ. 2026 ರ ವೇಳೆಗೆ, ಟಾಟಾ ಮೋಟಾರ್ಸ್ ತನ್ನ ಇವಿ ಪೋರ್ಟ್ಫೋಲಿಯೊಗೆ 10 ಎಲೆಕ್ಟ್ರಿಕ್ ವಾಹನಗಳನ್ನು ಸೇರಿಸಲು ಯೋಜಿಸುತ್ತಿದೆ ಎಂದು ಆಟೋಕಾರ್ ಇಂಡಿಯಾ ವರದಿ ತಿಳಿಸಿದೆ.
ಈ ಕುರಿತಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಟಾಟಾ ಮೋಟಾರ್ಸ್‌ನ ಪ್ಯಾಸೆಂಜರ್ ವೆಹಿಕಲ್ಸ್ ಬ್ಯುಸಿನೆಸ್‌ನ ಅಧ್ಯಕ್ಷ ಶೈಲೇಶ್ ಚಂದ್ರ 'ನಾವು ಒಂದು ತಲೆಮಾರಿನಿಂದ ಮುಂದಿನ ಪೀಳಿಗೆಯ ಇವಿಗಳಿಗೆ ಚಲಿಸುವ ಹಂತ ಹಂತದ ಯೋಜನೆಯನ್ನು ಹೊಂದಿದ್ದೇವೆ" ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.