ನವದೆಹಲಿ: ಕಳೆದ ಕೆಲವು ದಿನಗಳಿಂದ, ಯೆಸ್ ಬ್ಯಾಂಕ್ ಮತ್ತು ಡಿಶ್ ಟಿವಿ ಸುದ್ದಿಗಳು ಮಾರುಕಟ್ಟೆಯಲ್ಲಿ ತೀವ್ರ ಚರ್ಚೆಯಲ್ಲಿವೆ, ಡಿಶ್ ಟಿವಿ ವಿರುದ್ದ ಯೆಸ್ ಬ್ಯಾಂಕ್ ಕೈಗೊಂಡಿರುವ ಕೆಲವು ನಡೆಗಳಿಂದಾಗಿ ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಒಳಗಾಗಿದೆ.ಆಯ್ದ ಬಹಿರಂಗಪಡಿಸುವಿಕೆಗಾಗಿ ಸೆಬಿ ಸ್ಕ್ಯಾನರ್‌ನಲ್ಲಿದ್ದ ಒಬ್ಬ ವ್ಯಕ್ತಿಯನ್ನು ಒಳಗೊಂಡಂತೆ ಮತ್ತು ಡಿಶ್ ಟಿವಿಯಲ್ಲಿ ಹೊಸ ನಿರ್ದೇಶಕರನ್ನು ನೇಮಿಸಲು ಯೆಸ್ ಬ್ಯಾಂಕ್ ಪ್ರಸ್ತಾಪಿಸಿದೆ ಮತ್ತು ದೊಡ್ಡ ಮೊತ್ತದ ಹಣವನ್ನು ಪಾವತಿಸಿದ ನಂತರ ಸಮಸ್ಯೆಯನ್ನು ಪರಿಹರಿಸಬೇಕಾಯಿತು.
ಈಗ, ಯೆಸ್ ಬ್ಯಾಂಕ್ ಮತ್ತು ಪ್ರಾಕ್ಸಿ ಸಲಹಾ ಸಂಸ್ಥೆ Institutional Investor Advisory Services India Limited (IiAS) ಅವರು ಎತ್ತಿರುವ ಪ್ರಶ್ನೆಗಳಲ್ಲಿ ಅವು ಸಿಕ್ಕಿಹಾಕಿಕೊಂಡಿವೆ.ಈ ಎರಡೂ ಸಂಸ್ಥೆಗಳು ತಾವು ಕೈಗೊಂಡ ಕ್ರಮಗಳ ಹಿಂದಿನ ಗುಪ್ತ ಉದ್ದೇಶಗಳು ಮತ್ತು ದುರುದ್ದೇಶಗಳ ಬಗ್ಗೆ ಮಾರುಕಟ್ಟೆಯಿಂದ ಗಂಭೀರ ಪ್ರಶ್ನೆಗಳನ್ನು ಎದುರಿಸುತ್ತಿವೆ.
प्रॉक्सी एडवाइजरी फर्म IiAS क्या किसी कॉरपोरेट घराने के इशारे पर कर रही काम?
कॉरपोरेट गवर्नेंस पर इतना पक्षपात क्यों?
यस बैंक के प्रस्तावित नॉमिनी के खिलाफ SEBI का ऑर्डर, उस पर IiAS चुप क्यों? IiAS और यस बैंक से सवाल।#DishTV #YesBank @AnilSinghvi_ @BrajeshKMZee @SwatiKJain pic.twitter.com/Gu9kULqxs0
— Zee Business (@ZeeBusiness) September 17, 2021
ಅಂತಹ ಪ್ರಶ್ನೆಗಳಲ್ಲಿ ಕೆಲವು ಇಲ್ಲಿವೆ: -
- ಯೆಸ್ ಬ್ಯಾಂಕ್ ಪ್ರಸ್ತಾಪವನ್ನು ಮುಂದಿಟ್ಟಿದ್ದೇಕೆ ? ಅದನ್ನು IiAS ಬೆಂಬಲಿಸಿದ್ದೇಕೆ?
- ಬೃಹತ್ ಹೂಡಿಕೆದಾರರನ್ನು ತಪ್ಪುದಾರಿಗೆಳೆಯಲು ಯೆಸ್ ಬ್ಯಾಂಕ್ ಮತ್ತು IiAS ಪ್ರಯತ್ನಿಸುತ್ತಿವೆಯೇ?
- ಯೆಸ್ ಬ್ಯಾಂಕ್ ಮತ್ತು IiAS ಆಯ್ದ ಸಂಗತಿಗಳನ್ನು ಪ್ರಚಾರ ಮಾಡುತ್ತಿರುವುದೇಕೆ? - ಡಿಶ್ ಟಿವಿ (Dish TV) ಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸುವವರ ಪರವಾಗಿ IiAS ಕೆಲಸ ಮಾಡುತ್ತಿದೆಯೇ?
- IiAS ಹಣಕಾಸಿನ ಫಲಿತಾಂಶಗಳನ್ನು ತಡೆಹಿಡಿಯಬೇಕು ಎಂದು ಹೇಳುತ್ತದೆ - ಈ ಕ್ರಮದಿಂದ ಯಾರು ಪ್ರಯೋಜನ ಪಡೆಯುತ್ತಾರೆ? ಈ ಸಲಹೆ ಏಕೆ?
- ನಿಯಂತ್ರಕ ಕ್ರಮವನ್ನು ಎದುರಿಸಿದ ಯಾರನ್ನಾದರೂ ನೇಮಿಸುವ ಯೆಸ್ ಬ್ಯಾಂಕಿನ ಪ್ರಸ್ತಾಪದ ವಿಚಾರದಲ್ಲಿ IiAS ಮೌನವಾಗಿರುವುದೇಕೆ?
- ಹಕ್ಕುಗಳ ವಿಚಾರದಲ್ಲಿ ಇರುವ ಸಮಸ್ಯೆಯಾದರೂ ಏನು? ಹಣವು ಕಂಪನಿಗೆ ಹೋಗುತ್ತದೆ, ವ್ಯಕ್ತಿಯ ಜೇಬಿಗೆ ಹೋಗುವುದಿಲ್ಲ - ಹಾಗಾದರೆ ನಿಜವಾಗಿಯೂ ಸಮಸ್ಯೆ ಏನು? ಯೆಸ್ ಬ್ಯಾಂಕಿನ ಉದ್ದೇಶವೇನು?
- ಡಿಶ್ ಟಿವಿ ಮ್ಯಾನೇಜ್‌ಮೆಂಟ್ ಬದಲಾವಣೆಗೆ ಬೇಡಿಕೆ ಇಟ್ಟಿರುವುದಾದರೂ ಏಕೆ- ಇದರಿಂದ ಯೆಸ್ ಬ್ಯಾಂಕ್ ಏನನ್ನು ಸಾಧಿಸಲು ಹೊರಟಿದೆ ?
-ಯೆಸ್ ಬ್ಯಾಂಕ್ ಪ್ರಸ್ತಾಪಿಸಿದ ನಾಮನಿರ್ದೇಶಿತರಿಗೆ ಡಿಟಿಎಚ್ ಉದ್ಯಮದಲ್ಲಿ ಅಪಾರ ಅನುಭವವಿದೆಯೇ ?
ಡಿಶ್ ಟಿವಿಯ ಸಂದರ್ಭದಲ್ಲಿ ಯೆಸ್ ಬ್ಯಾಂಕ್ ಮತ್ತು ಐಐಎಎಸ್‌ನ ನಡೆಗಳು ಮತ್ತು ಉದ್ದೇಶಗಳ ಮೇಲೆ ಅನುಮಾನಗಳನ್ನು ಉಂಟುಮಾಡುವ ಹಲವು ಅಂಶಗಳಿವೆ. ಹೂಡಿಕೆದಾರರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಟಿಸುವ ಯೋಜನೆ ಇದೆ ಎಂದು ತೋರುತ್ತದೆ, ಆದರೆ ಅಂತಹ ಕ್ರಮವು ಪ್ರಾಕ್ಸಿ ಸಂಸ್ಥೆಗೆ ವಿಶ್ವಾಸಾರ್ಹತೆಯ ನಷ್ಟಕ್ಕೆ ಕಾರಣವಾಗಬಹುದು. ಜೀ ಮೀಡಿಯಾ ಅವರ ಪ್ರತಿಕ್ರಿಯೆಗಾಗಿ ಯೆಸ್ ಬ್ಯಾಂಕ್ ಮತ್ತು IiAS ಗೆ ಮೇಲ್‌ಗಳನ್ನು ಕಳುಹಿಸಿದೆ, ಆದರೆ ಈ ಸುದ್ದಿಯನ್ನು ಪ್ರಕಟಿಸುವ ವೇಳೆಗೆ ಅವರಿಂದ ಯಾವುದೇ ಉತ್ತರಗಳನ್ನು ಇನ್ನೂ ಸ್ವೀಕರಿಸಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.