ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮಧ್ಯಸ್ಥಿಕೆಗಾರರ ಹುದ್ದೆಗೆ ಅರ್ಜಿ ಆಹ್ವಾನ

 ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕೊಪ್ಪಳ ವತಿಯಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಕಲಂ 75, ಗ್ರಾಹಕ ಸಂರಕ್ಷಣಾ (ಮಧ್ಯಸ್ಥಿಕೆ) ನಿಯಮಗಳು, 2020, ಗ್ರಾಹಕ ಸಂರಕ್ಷಣಾ (ಮಧ್ಯಸ್ಥಿಕೆ) ರೆಗ್ಯುಲೇಷನ್ಸ್ 2020ರ ರೆಗ್ಯುಲೇಷನ್-3ರಂತೆ ಮಧ್ಯಸ್ಥಿಕೆಗಾರರನ್ನು ಆಯ್ಕೆ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Last Updated : Jun 29, 2022, 08:49 PM IST
  • ಅರ್ಜಿ ನಮೂನೆಯನ್ನು ರಾಜ್ಯ ಆಯೋಗದ ಜಾಲತಾಣ https://kscdrc.karnataka.gov.in ಇಲ್ಲಿಂದ ಪಡೆಯಬಹುದಾಗಿರುತ್ತದೆ.
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಮಧ್ಯಸ್ಥಿಕೆಗಾರರ ಹುದ್ದೆಗೆ ಅರ್ಜಿ ಆಹ್ವಾನ title=
ಸಾಂದರ್ಭಿಕ ಚಿತ್ರ

ಬೆಂಗಳೂರು : ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕೊಪ್ಪಳ ವತಿಯಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಕಲಂ 75, ಗ್ರಾಹಕ ಸಂರಕ್ಷಣಾ (ಮಧ್ಯಸ್ಥಿಕೆ) ನಿಯಮಗಳು, 2020, ಗ್ರಾಹಕ ಸಂರಕ್ಷಣಾ (ಮಧ್ಯಸ್ಥಿಕೆ) ರೆಗ್ಯುಲೇಷನ್ಸ್ 2020ರ ರೆಗ್ಯುಲೇಷನ್-3ರಂತೆ ಮಧ್ಯಸ್ಥಿಕೆಗಾರರನ್ನು ಆಯ್ಕೆ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಗ್ರಾಹಕ ಆಯೋಗಗಳ ನಿವೃತ್ತ ಸದಸ್ಯರು, ನಿವೃತ್ತ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಅಥವಾ ರಾಜ್ಯದ ಇತರೆ ಉನ್ನತ ನ್ಯಾಯಾಂಗ ಸೇವೆಗಳ ನಿವೃತ್ತ ಸದಸ್ಯರುಗಳು, 10 ವರ್ಷಗಳಿಗೆ ಕಡಿಮೆ ಇಲ್ಲದಂತೆ ಅನುಭವವನ್ನು ಹೊಂದಿರುವ ನಿವೃತ್ತ ನ್ಯಾಯಾಂಗ ಅಧಿಕಾರಿಗಳು, ಕನಿಷ್ಠ 10 ವರ್ಷಗಳು ವಕೀಲರಾಗಿ ಸೇವೆ ಸಲ್ಲಿಸಿ ಅನುಭವವಿರುವವರು, ಭಾರತದ ಸರ್ವೋಚ್ಛ ನ್ಯಾಯಾಲಯ, ಉಚ್ಛ ನ್ಯಾಯಾಲಯ ಅಥವಾ ಜಿಲ್ಲಾ ನ್ಯಾಯಾಲಯದಲ್ಲಿನ ಮಧ್ಯಸ್ಥಿಕೆ ಕೋಶದ ಮಧ್ಯಸ್ಥಿಕೆಗಾರರ ಪಟ್ಟಿಯಲ್ಲಿರುವವರು, 5 ವರ್ಷಗಳು ಮಧ್ಯಸ್ಥಿಕೆಗಾರರಾಗಿ ಅಥವಾ ಸಂಧಾನಕಾರರಾಗಿ ಅನುಭವವಿರುವ ವ್ಯಕ್ತಿಗಳು, ತಜ್ಞರು ಅಥವಾ ಇತರೆ ವೃತ್ತಿಯಲ್ಲಿ ಕನಿಷ್ಟ 15 ವರ್ಷಗಳ ಅನುಭವವನ್ನು ಹೊಂದಿರುವವರು ಅಥವಾ ನಿವೃತ್ತ ಹಿರಿಯ ಅಧಿಕಾರಿಗಳು ಅಥವಾ ನಿವೃತ್ತ ಕಾರ್ಯನಿರ್ವಾಹಕರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ : ಹೆಲ್ಮೆಟ್ ಹಾಕದೇ ಬೈಕ್ ಬಳಸಿ ರೀಲ್ಸ್: ಟಿಕ್‌ಟಾಕ್‌ ಸ್ಟಾರ್‌ಗೆ ಬಿತ್ತು ಭಾರಿ ದಂಡ..!

ಗ್ರಾಹಕ ಸಂರಕ್ಷಣಾ (ಮಧ್ಯಸ್ಥಿಕೆ) ರೆಗ್ಯುಲೇಷನ್ಸ್ 2020ರ ರೆಗ್ಯುಲೇಷನ್ 4ರ ಅನುಸಾರ ನ್ಯಾಯಾಲಯದಲ್ಲಿ ಸುಸ್ತಿದಾರರೆಂದು ತೀರ್ಮಾನಿಸಲ್ಪಟ್ಟ ವ್ಯಕ್ತಿ, ಅಪರಾಧಿಕ ನ್ಯಾಯಾಲಯದಿಂದ ನೈತಿಕ ಪ್ರಕ್ಷುಬ್ಧತೆಯನ್ನು ಒಳಗೊಂಡ ಅಪರಾಧಿಕ ಆರೋಪವನ್ನು ಹೊರಿಸಲಾಗಿರುವ ಮತ್ತು ಎದುರಿಸುತ್ತಿರುವ ವ್ಯಕ್ತಿ, ನೈತಿಕ ಪ್ರಕ್ಷುಬ್ಧತೆ ಒಳಗೊಂಡಿರುವ ಯಾವುದೇ ಅಪರಾಧಕ್ಕಾಗಿ ಅಪರಾಧಿಕ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿ, ಶಿಸ್ತು ಪ್ರಾಧಿಕಾರದಿಂದ ಶಿಸ್ತು ಪ್ರಕ್ರಿಯೆಗಳಿಗೆ ಒಳಗಾಗಿರುವ ಅಥವಾ ಗುರಿಯಾಗಿರುವ ವ್ಯಕ್ತಿ ಅರ್ಜಿ ಸಲ್ಲಿಸುವುದಕ್ಕೆ ಅನರ್ಹರಾಗಿರುತ್ತಾರೆ.

ಆಯ್ಕೆಯಾದ ಮಧ್ಯಸ್ಥಿಕೆಗಾರರ ಶುಲ್ಕವನ್ನು ಗ್ರಾಹಕ ಸಂರಕ್ಷಣಾ (ಮಧ್ಯಸ್ಥಿಕೆ) ರೆಗ್ಯುಲೇಷನ್ಸ್ 2020ರ ರೆಗ್ಯುಲೇಷನ್ 8ರಂತೆ ಪಾವತಿಸಲಾಗುವುದು. ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಒಳಗೊಂಡ ಮಧ್ಯಸ್ಥಿಕೆಗಾರರ ಆಯ್ಕೆ ಸಮಿತಿಯು ಕೊಪ್ಪಳ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆವರಣದಲ್ಲಿ ಗ್ರಾಹಕ ಸಂರಕ್ಷಣಾ (ಮಧ್ಯಸ್ಥಿಕೆ) ನಿಯಮಗಳು ಹಾಗೂ ರೆಗ್ಯುಲೇಷನ್ಸ್ ಅನುಸಾರ ಗ್ರಾಹಕ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸುವ ಸಲುವಾಗಿ, ಅಭ್ಯರ್ಥಿಗಳು ಗ್ರಾಹಕ ವ್ಯಾಜ್ಯಗಳನ್ನು ಪರಿಹರಿಸುವ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಅವರ ಅರ್ಹತೆಯನ್ನು ಪರಿಶೀಲಿಸಿದ ನಂತರ ಸೂಕ್ತ ಅಭ್ಯರ್ಥಿಗಳನ್ನು ಮಧ್ಯಸ್ಥಿಕೆಗಾರರ ಪಟ್ಟಿಗೆ ಸೇರಿಸಲು ಕ್ರಮವಹಿಸಲಾಗುತ್ತದೆ.

ಇದನ್ನೂ ಓದಿ : ಟೀಂ ಇಂಡಿಯಾದ ಮತ್ತೊಂದು ವಿದೇಶಿ ಪ್ರವಾಸ ಘೋಷಣೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಕೊಪ್ಪಳ ಜಿಲ್ಲಾ  ಗ್ರಾಹಕ  ವ್ಯಾಜ್ಯಗಳ  ಪರಿಹಾರ ಆಯೋಗದ  ಆವರಣದಲ್ಲಿ ಮಧ್ಯಸ್ಥಿಕೆಗಾರರಾಗಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು “ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಹಳೇ ಸಿವಿಲ್ ಕೋರ್ಟ್ ಕಟ್ಟಡ, ಜವಾಹರ್ ರಸ್ತೆ, ಕೊಪ್ಪಳ-583231 ಇವರಿಗೆ ನಿಗದಿತ  ನಮೂನೆಯಲ್ಲಿನ  ಅರ್ಜಿಯನ್ನು  ಜುಲೈ 25 ರ ಸಂಜೆ 05 ಗಂಟೆಯೊಳಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಲ್ಲಿಸಬಹುದಾಗಿರುತ್ತದೆ.

ಅರ್ಜಿ ನಮೂನೆಯನ್ನು ರಾಜ್ಯ ಆಯೋಗದ ಜಾಲತಾಣ  https://kscdrc.karnataka.gov.in ಇಲ್ಲಿಂದ ಪಡೆಯಬಹುದಾಗಿರುತ್ತದೆ. ನಿಗದಿತ ದಿನಾಂಕ ಹಾಗೂ ಸಮಯದ ನಂತರ ಸ್ವೀಕರಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು  ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಮತ್ತು ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News