23 ದಿನಗಳಲ್ಲಿ ಮುರುಘಾ ಶ್ರೀಗಳನ್ನ ನೋಡಲು 20 ಬಾರಿ ಸಂದರ್ಶಕರು ಜೈಲಿಗೆ: ಜೈಲಾಧಿಕಾರಿಗಳಿಂದಲೇ ರೂಲ್ಸ್ ಬ್ರೇಕ್

ಜೈಲಿನ ನಿಯಾಮಾವಳಿ ಪ್ರಕಾರ, ಆರೋಪಿಯು ಒಮ್ಮೆ ಜೈಲಿಗೆ ಹೋದರೆ ಆತನನ್ನ 15 ದಿನಕ್ಕೊಮ್ಮೆ ಸಂದರ್ಶಕರು ಒಮ್ಮೆ ಭೇಟಿಯಾಗಲು ಅವಕಾಶವಿದೆ. ಆದರೆ ವಿಚಾರಣಾಧೀನ ಖೈದಿಯಾಗಿರುವ ಶಿವಮೂರ್ತಿ ಸ್ವಾಮೀಜಿ ವಿಷಯದಲ್ಲಿ ಕಾನೂನನ್ನ ಗಾಳಿಗೆ ತೂರಿರುವ ಜೈಲಾಧಿಕಾರಿಗಳು ಅಕ್ಟೋಬರ್ 7ರಿಂದ 29ರವರೆಗೆ ಸುಮಾರು 23 ಮಂದಿಗೆ ಭೇಟಿ ಮಾಡಲು ಅವಕಾಶ ಕಲ್ಪಿಸಿರುವುದು ಬಯಲಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Written by - VISHWANATH HARIHARA | Last Updated : Nov 4, 2022, 12:23 PM IST
  • ಜೈಲಿನ ನಿಯಾಮಾವಳಿ ಪ್ರಕಾರ, ಆರೋಪಿಯು ಒಮ್ಮೆ ಜೈಲಿಗೆ ಹೋದರೆ ಆತನನ್ನ 15 ದಿನಕ್ಕೊಮ್ಮೆ ಸಂದರ್ಶಕರು ಒಮ್ಮೆ ಭೇಟಿಯಾಗಲು ಅವಕಾಶವಿದೆ.
  • ಆದರೆ ವಿಚಾರಣಾಧೀನ ಖೈದಿಯಾಗಿರುವ ಶಿವಮೂರ್ತಿ ಸ್ವಾಮೀಜಿ ವಿಷಯದಲ್ಲಿ ಕಾನೂನನ್ನ ಗಾಳಿಗೆ ತೂರಿರುವ ಜೈಲಾಧಿಕಾರಿಗಳು
  • ಅಕ್ಟೋಬರ್ 7ರಿಂದ 29ರವರೆಗೆ ಸುಮಾರು 23 ಮಂದಿಗೆ ಭೇಟಿ ಮಾಡಲು ಅವಕಾಶ ಕಲ್ಪಿಸಿರುವುದು ಬಯಲು
23 ದಿನಗಳಲ್ಲಿ ಮುರುಘಾ ಶ್ರೀಗಳನ್ನ ನೋಡಲು 20 ಬಾರಿ ಸಂದರ್ಶಕರು ಜೈಲಿಗೆ: ಜೈಲಾಧಿಕಾರಿಗಳಿಂದಲೇ ರೂಲ್ಸ್ ಬ್ರೇಕ್ title=
POCSO Case

ಬೆಂಗಳೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಂಧಿನವಾಗಿ 23 ದಿನಗಳ ಅಂತರದಲ್ಲಿ  20 ಮಂದಿ ಸಂದರ್ಶಕರು ಪ್ರತ್ಯೇಕವಾಗಿ ಜೈಲಿಗೆ ಭೇಟಿಯಾಗಿದ್ದಾರೆ. ಇದು ಜೈಲಿನ ನಿಯಾಮವಳಿಯಡಿ ಸ್ಷಷ್ಟ ಉಲ್ಲಂಘನೆಯಾಗಿದ್ದು ಸ್ವಾಮೀಜಿ ಪರವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಜೈಲಿನ ನಿಯಾಮಾವಳಿ ಪ್ರಕಾರ, ಆರೋಪಿಯು ಒಮ್ಮೆ ಜೈಲಿಗೆ ಹೋದರೆ ಆತನನ್ನ 15 ದಿನಕ್ಕೊಮ್ಮೆ ಸಂದರ್ಶಕರು ಒಮ್ಮೆ ಭೇಟಿಯಾಗಲು ಅವಕಾಶವಿದೆ. ಆದರೆ ವಿಚಾರಣಾಧೀನ ಖೈದಿಯಾಗಿರುವ ಶಿವಮೂರ್ತಿ ಸ್ವಾಮೀಜಿ ವಿಷಯದಲ್ಲಿ ಕಾನೂನನ್ನ ಗಾಳಿಗೆ ತೂರಿರುವ ಜೈಲಾಧಿಕಾರಿಗಳು ಅಕ್ಟೋಬರ್ 7ರಿಂದ 29ರವರೆಗೆ ಸುಮಾರು 23 ಮಂದಿಗೆ ಭೇಟಿ ಮಾಡಲು ಅವಕಾಶ ಕಲ್ಪಿಸಿರುವುದು ಬಯಲಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ- ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು ಕೊಟ್ಯಂತರ ರೂಪಾಯಿ ವಂಚನೆ!

ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬುವರು ಸ್ವಾಮೀಜಿ ಅವರನ್ನು ಸೆರೆಮನೆಯಲ್ಲಿರುವಾಗ ಭೇಟಿ ನೀಡಿದವರು ಯಾರು ? ಎಷ್ಟು ಮಂದಿ ಯಾರು ? ಅವರ ಹೆಸರು-ವಿಳಾಸ ಹಾಗೂ ಮೊಬೈಲ್ ನಂಬರ್ ನೀಡುವಂತೆ  ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಅಧಿಕಾರಿಗಳು ಅಕ್ಟೋಬರ್ 7ರಿಂದ 29ರವರೆಗೆ ಸುಮಾರು 23 ಮಂದಿಗೆ ಭೇಟಿ ಅವಕಾಶ ಕಲ್ಪಿಸಲಾಗಿದ್ದು ಅವರ ಹೆಸರುಗಳ ಮಾಹಿತಿ ನೀಡಿದ್ದಾರೆ. ಇದರಂತೆ ಸ್ವಾಮೀಜಿಯನ್ನು ಸಂದರ್ಶಕರ ಹೆಸರಿನ ಮೊಬೈಲ್ ನಂಬರ್ ಸೇರಿದಂತೆ, ಭೇಟಿ ನೀಡಿದ ಸಮಯ ಹಾಗೂ ಎಷ್ಟು ನಿಮಿಷಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು ಎಂಬುದು ಸೇರಿ ಮಾಹಿತಿ ನೀಡುವಂತೆ ಕೇಳಿದ ಪ್ರಶ್ನೆಗೆ ಸ್ವಾಮೀಜಿಗೆ ನೋಟಿಸ್ ಜಾರಿ ಮಾಡಿ ಅವರಿಂದ ಅಭಿಪ್ರಾಯ ಪಡೆದು ಲಿಖಿತ ರೂಪದಲ್ಲಿ ಯಾವುದೇ ರೀತಿ ದಾಖಲೆ ನೀಡಬಾರದೆಂದು ಹೇಳಿದ್ದಾರೆ. ಹೀಗಾಗಿ ದಾಖಲೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿದಾರರಿಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ- ಕಾರ್ಮಿಕ ಸೋಗಿನಲ್ಲಿ ಲಕ್ಷಾಂತರ ರೂ. ಎಗರಿಸಿದ್ದ ಕಿರಾತಕ ಅರೆಸ್ಟ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಆರ್ ಟಿಐ ಅಡಿಯಲ್ಲಿ ಕೇಳಿದ ಮಾಹಿತಿಗೆ ಕಾರಾಗೃಹ ಇಲಾಖೆಯ ಅಧಿಕಾರಿಗಳು ಅಪೂರ್ಣ ಮಾಹಿತಿ ನೀಡಿದ್ದಾರೆ. ಸ್ವಾಮೀಜಿಯನ್ನ ಭೇಟಿ ಮಾಡಿದ ವ್ಯಕ್ತಿಗಳ ವಿವರ ನಮೂದಿಸುವ ದಾಖಲಾತಿಗಳ ಬಗ್ಗೆ ಮಾಹಿತಿ ನೀಡಿಲ್ಲ. ಅಲ್ಲದೆ ಈ ದಾಖಲೆ ನೀಡಲು ಆರೋಪಿ ಸ್ಥಾನದಲ್ಲಿರುವ ಅಭಿಪ್ರಾಯ ಪಡೆದಿರುವುದು ಸರಿಯಲ್ಲ. 15ದಿನಕ್ಕೊಮ್ಮೆ ಮಾತ್ರ ಸಂದರ್ಶಕರು ಭೇಟಿಯಾಗಬಹುದು ಎಂದು ಜೈಲಿನ ನಿಯಾಮವಳಿ ಹೇಳಿದರೂ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಹೈಕೋರ್ಟ್ ಮುಖ್ಯನ್ಯಾಯಾಧೀಶರು, ಗೃಹ ಸಚಿವರು ಹಾಗೂ ಬಂಧಿಖಾನೆ ಇಲಾಖೆಯ ಡಿಜಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದರು.
ಸದ್ಯ ಸ್ವಾಮೀಜಿ ವಿರುದ್ಧ ಎರಡನೇ ಪೋಕ್ಸೊ ಪ್ರಕರಣದಡಿ ಪ್ರಕರಣ ದಾಖಲಾಗಿದ್ದು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ವಿಚಾರಣೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News