ಬೆಂಗಳೂರು: ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್ ನನ್ನು ಠಾಣಾ ಜಾಮೀನಿನ ಮೇರೆಗೆ ಹಲಸೂರು ಪೊಲೀಸರು ನಿನ್ನೆ ರಾತ್ರಿ ಬಿಟ್ಟು ಕಳುಹಿಸಿದ್ದರು. ನೋಟಿಸ್ ನೀಡಿದ್ದ ಕಾರಣ ಸಿದ್ದಾಂತ್ ವಿಚಾರಣೆಗೆ ಹಾಜರಾಗಿದ್ದಾನೆ.
ಇದನ್ನೂ ಓದಿ: ಕುಡಿದ ಮತ್ತಲ್ಲಿ ಮೊಬೈಲ್ ವಿಷಯಕ್ಕೆ ಗಲಾಟೆ, ವ್ಯಕ್ತಿಗೆ ಚಾಕು ಇರಿತ
ಮತ್ತೊಂದೆಡೆ ರೇವ್ ಪಾರ್ಟಿ ಆಯೋಜಕರು ಸೇರಿ ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇವೆಂಟ್ ಕಂಪನಿಗಳಾಗಿರುವ ಇಂಡಿವೈಬ್, ಎಲ್ಎ ಪ್ರೊಡಕ್ಷನ್ ಕಂಪನಿಯ ಪ್ರತಿನಿಧಿಗಳು ಠಾಣೆಗೆ ಹಾಜರಾಗುವ ಸಾಧ್ಯತೆಯಿದೆ. ಎಷ್ಟು ವರ್ಷಗಳಿಂದ ಹೈ-ಎಂಡ್ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗೆ ಈ ಹಿಂದೆ ಯಾವ ಯಾವ ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಿದ್ದರು. ಡ್ರಗ್ ಪೆಡ್ಲಿಂಗ್ ಮಾಡಿದ್ದು ಯಾರು ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸಲು ಸಿದ್ದತೆ ನಡೆಸಿದ್ದಾರೆ.
ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡು ಬಂಧನವಾಗಿದ್ದ ಸಿದ್ದಾಂತ್ ಕಪೂರ್ ನಿನ್ನೆ ನಡೆದ ಸುದೀರ್ಘಾವಧಿ ವಿಚಾರಣೆಯಲ್ಲಿ ಹಲವು ಸಂಗತಿಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬೆಂಗಳೂರಿನಲ್ಲಿ ನನಗೆ ಅನೇಕ ಸ್ನೇಹಿತರಾಗಿದ್ದಾರೆ. ಈ ಹಿಂದೆ ನಗರದಲ್ಲಿ ನಡೆದಿದ್ದ ಪಾರ್ಟಿಗಳಲ್ಲಿ ಡಿಜೆಯಾಗಿ ಭಾಗಿಯಾಗಿದ್ದು ನಿಜ ಎಂದಿದ್ದಾನೆ. ಡ್ರಗ್ಸ್ ಸೇವನೆ ಬಗ್ಗೆ ಪೊಲೀಸರು ಕೇಳಿದ ಪ್ರಶ್ನೆಗೆ ಉತ್ತರಿಸಿ ಡ್ರಗ್ಸ್ ಹೇಗೆ ಬಂತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಪಾರ್ಟಿಯಲ್ಲಿದ್ದ ಸ್ನೇಹಿತರು ನೀರಿನಲ್ಲಿ ಅಥವಾ ಸಿಗರೇಟಿನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ನನಗೆ ಕೊಟ್ಟಿದ್ದಾರೆ. ಇದನ್ನ ಅರಿಯದೆ ನೀರು ಕುಡಿದು ಸಿಗರೇಟು ಸೇವನೆ ಮಾಡಿದ್ದೆ ಅಷ್ಟೇ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಮೊಬೈಲ್ಗಳು ಎಫ್ಎಸ್ಎಲ್ಗೆ ರವಾನೆ:
ಸಿದ್ದಾಂತ್ ಸೇರಿದಂತೆ ಬಂಧಿಸಿದ್ದ ಒಟ್ಟು ಐದು ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ. ಡ್ರಗ್ಸ್ ಪೆಡ್ಲಿಂಗ್ ಮಾಡಿರುವ ಆಯಾಮದಡಿ ತಾಂತ್ರಿಕವಾಗಿ ತನಿಖೆ ನಡೆಸುತ್ತಿರುವ ಪೊಲೀಸರು, ಜಪ್ತಿ ಮಾಡಿಕೊಂಡಿರುವ ಐದು ಮೊಬೈಲ್ ಗಳನ್ನು ರಿಟ್ರೈವ್ಗಾಗಿ ಎಫ್ಎಸ್ಎಲ್ ಕಳುಹಿಸಿದ್ದಾರೆ. ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕದಲ್ಲಿ ಇದ್ದಾರಾ ಎಂಬುದು ವರದಿ ಬಂದ ಬಳಿಕವಷ್ಟೇ ಗೊತ್ತಾಗಲಿದೆ. ಗೋವಾ, ಕೇರಳ ಹಾಗೂ ಮುಂಬೈನಲ್ಲಿ ನಡೆದಿರುವ ಡ್ರಗ್ಸ್ ಪಾರ್ಟಿಯಲ್ಲಿ ಈ ಹಿಂದೆ ಭಾಗಿಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ದಿ ಪಾರ್ಕ್ ಹೊಟೇಲ್ನಲ್ಲಿ ಆ ರಾತ್ರಿ ನಡೆದಿದ್ದು ರೇವ್ ಪಾರ್ಟಿನಾ! FIR ನಲ್ಲಿ ಏನಿದೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.