Revenge to Boss: ಏನಿದು ಕ್ರೂರತೆ…ಪ್ರಮೋಶನ್ ನೀಡಿಲ್ಲ ಎಂದು ಬಾಸ್ ಸೇರಿ ಇಡೀ ಕುಟುಂಬವನ್ನೇ ಹತ್ಯೆಗೈದ ಉದ್ಯೋಗಿ!

ಈ ಘೋರ ಘಟನೆ ಅಮೆರಿಕದಲ್ಲಿ ನಡೆದಿದೆ. 58 ವರ್ಷದ ವ್ಯಕ್ತಿಯೊಬ್ಬ ಬಡ್ತಿ ಕೊಟ್ಟಿಲ್ಲ ಎಂದು ಒಟ್ಟು 4 ಕೊಲೆ ಮಾಡಿದ್ದಾನೆ. ಫಾಂಗ್ ಲು ಎಂಬ ಹೆಸರಿನ ಈ ಕೊಲೆಗಾರ ತನ್ನ ಬಾಸ್ ಸೇರಿದಂತೆ ಅವನ ಇಡೀ ಕುಟುಂಬವನ್ನು ಕೊಂದಿದ್ದಾನೆ. ಫಾಂಗ್ ಲು ಆಯಿಲ್‌ ಫೀಲ್ಡ್ ಸರ್ವೀಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು.

Written by - Bhavishya Shetty | Last Updated : Sep 16, 2022, 08:14 PM IST
    • ಬಡ್ತಿ ಮಾಡಿಲ್ಲ ಎಂದು ಕೋಪಗೊಂಡ ಉದ್ಯೋಗಿ
    • ಬಾಸ್ ಸೇರಿ ಆತನ ಇಡೀ ಕುಟುಂಬದ ಪ್ರಾಣ ತೆಗದ ಕಿರಾತಕ
    • ಘಟನೆ ನಡೆದು 8 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಿದ ಪೊಲೀಸರು
Revenge to Boss: ಏನಿದು ಕ್ರೂರತೆ…ಪ್ರಮೋಶನ್ ನೀಡಿಲ್ಲ ಎಂದು ಬಾಸ್ ಸೇರಿ ಇಡೀ ಕುಟುಂಬವನ್ನೇ ಹತ್ಯೆಗೈದ ಉದ್ಯೋಗಿ!  title=
Murder for Job Promotion

ಕೆಲಸ ಮಾಡುವ ಯಾವುದೇ ವ್ಯಕ್ತಿಗೆ ಅವನ ಸಂಬಳ ಬಹಳ ಮುಖ್ಯ, ಆದರೆ ಅನೇಕ ಬಾರಿ ಉದ್ಯೋಗಿಗಳಿಗೆ ತಕ್ಕಂತೆ ಸಂಬಳ ಅಥವಾ ಬಡ್ತಿ ಸಿಗುವುದಿಲ್ಲ. ಇದರಿಂದ ಮೇಲಾಧಿಕಾರಿಗಳ ಮೇಲೆ ಉದ್ಯೋಗಿಗಳು ಕೋಪಗೊಳ್ಳುತ್ತಾರೆ. ಅಮೆರಿಕಾದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ಆದರೆ ಕೋಪದಿಂದ ಆತ ತೆಗೆದುಕೊಂಡ ಹೆಜ್ಜೆಯನ್ನು ಕೇಳಿದರೆ, ನೀವೂ ಸಹ ಭಯಪಡುವಿರಿ. ನೌಕರಿಯಲ್ಲಿ ಬಡ್ತಿ ಸಿಗದೆ ಕಂಗಾಲಾಗಿದ್ದ ಆ ವ್ಯಕ್ತಿ ಎಂತಹ ಘೋರ ಹೆಜ್ಜೆ ಇಟ್ಟಿದ್ದಾನೆ ಎಂದರೆ ಶಾಕ್ ಆಗುವಿರಿ. 

ಇದನ್ನೂ ಓದಿ: ghost of Princess Diana: ಬ್ರಿಟನ್ ಅರಮನೆಯಲ್ಲಿ ಕಂಡಿತು ಪ್ರಿನ್ಸಸ್ ಡಯಾನಾ ಪ್ರೇತಾತ್ಮ! ಆತ್ಮದ ವಿಡಿಯೋ ನೋಡಿ

ಈ ಘೋರ ಘಟನೆ ಅಮೆರಿಕದಲ್ಲಿ ನಡೆದಿದೆ. 58 ವರ್ಷದ ವ್ಯಕ್ತಿಯೊಬ್ಬ ಬಡ್ತಿ ಕೊಟ್ಟಿಲ್ಲ ಎಂದು ಒಟ್ಟು 4 ಕೊಲೆ ಮಾಡಿದ್ದಾನೆ. ಫಾಂಗ್ ಲು ಎಂಬ ಹೆಸರಿನ ಈ ಕೊಲೆಗಾರ ತನ್ನ ಬಾಸ್ ಸೇರಿದಂತೆ ಅವನ ಇಡೀ ಕುಟುಂಬವನ್ನು ಕೊಂದಿದ್ದಾನೆ. ಫಾಂಗ್ ಲು ಆಯಿಲ್‌ ಫೀಲ್ಡ್ ಸರ್ವೀಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಈತ ತನ್ನ ಬಾಸ್ ಮಾಯೊ, ಅವರ 9 ವರ್ಷದ ಮಗಳು, 7 ವರ್ಷದ ಮಗ ಮತ್ತು ಪತ್ನಿ ಮೀಕ್ಸಿ ಎಂಬವರನ್ನು ಕೊಲೆ ಮಾಡಿದ್ದಾನೆ. ಅವರೆಲ್ಲರ ತಲೆಗೆ ಗುಂಡು ಹಾರಿಸಿ, ಫಾಂಗ್ ಲೂ ಕೊಲೆಗೈದಿದ್ದಾನೆ. ಈ ಕೊಲೆಯಾಗಿ ಸುಮಾರು 8 ವರ್ಷಗಳು ಕಳೆದಿದ್ದರೂ ಸಹ ಆರೋಪಿಯನ್ನು ಬಂಧಿಸಲು ಈಗ ಸಾಧ್ಯವಾಗಿದೆ.. ಅಮೇರಿಕಾ ಪೋಲೀಸರು ಈ ಬಂಧನಕ್ಕೆ ಏಕೆ ಇಷ್ಟು ದಿನ ತೆಗೆದುಕೊಂಡರು ಎಂಬುದಕ್ಕೆ ಉತ್ತರ ಇಲ್ಲಿದೆ.

ಹೂಸ್ಟನ್ ಕ್ರಾನಿಕಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೊಲೆಯಾದ ನಂತರ ಫಾಂಗ್ ಲು ಪರಾರಿಯಾಗಿದ್ದ. ಕೊಲೆಗಾರ ಲು ಅಮೆರಿಕದಿಂದ ಚೀನಾಕ್ಕೆ ಪಲಾಯನ ಮಾಡಿ ಸುಮಾರು 8 ವರ್ಷಗಳ ಬಳಿಕ ಅಮೆರಿಕಕ್ಕೆ ಮರಳಿದ್ದಾನೆ. ವರದಿಯ ಪ್ರಕಾರ, ಫಾಂಗ್ ಅನ್ನು ಇತ್ತೀಚೆಗೆ ಸ್ಯಾನ್ ಫ್ರಾನ್ಸಿಸ್ಕೋದಿಂದ ಬಂಧಿಸಲಾಗಿದೆ. 

ಇದನ್ನೂ ಓದಿ: ಅಣೆಕಟ್ಟಿಗೆ $40 ಮಿಲಿಯನ್ ಸಂಗ್ರಹಿಸಿ, ಅದರ ಜಾಹೀರಾತಿಗಾಗಿ $63 ಮಿಲಿಯನ್ ಖರ್ಚು ಮಾಡಿದ ಪಾಕ್..!

“ಕೆಲಸದ ಸಮಯದಲ್ಲಿ, ಬಾಸ್ ನನ್ನನ್ನು ಅವಮಾನಿಸಿದ್ದಾನೆ. ನಾನು ಬೇರೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸಿದ್ದೆ, ಆದರೆ ಆತ ವರ್ಗಾವಣೆ ಮಾಡಲಿಲ್ಲ. ಈ ಎಲ್ಲಾ ವಿಷಯಗಳಿಂದ ಕಂಗಾಲಾಗಿ ಇಡೀ ಕುಟುಂಬವನ್ನು ಕೊಂದೆ” ಎಂದು ತನಿಖೆ ವೇಳೆ ಆರೋಪಿ ಫಾಂಗ್ ಹೇಳಿದ್ದಾನೆ. ಆದರೆ ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸಿದ ದಾಖಲೆಗಳ ಪ್ರಕಾರ, ಫಾಂಗ್ ಲು ತನ್ನ ಹೇಳಿಕೆಯನ್ನು ಹಲವಾರು ಬಾರಿ ಬದಲಾಯಿಸಿದ್ದಾನೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News