ಬೆಂಗಳೂರು: ವಯಸ್ಸಾದವರನ್ನು ನೋಡಿಕೊಳ್ಳಲು ಕೇರ್ ಟೇಕರ್‍ಗಳನ್ನು ಹುಡುಕುತ್ತಾ ಇದ್ದರೆ ನೀವು ಎಚ್ಚರವಾಗಿರಿ. ಯಾಕಂದರೆ ಕೇರ್ ಟೇಕರ್ ಹೆಸರಲ್ಲಿ ಮನೆಗೆ ಬರುವ ಕೆಲವರು ಮನೆಯನ್ನೇ ಗುಡಿಸಿ ಗುಂಡಾಂತರ ಮಾಡುತ್ತಾರೆ.
ಹೀಗೆ ಕೇರ್ ಟೇಕರ್ ಕೆಲಸಕ್ಕೆ ಸೇರಿ ಲಕ್ಷಾಂತರ ರೂ. ನಗ ನಾಣ್ಯ ದೋಚಿ ಪರಾರಿಯಾಗಿದ್ದ ಖತರ್ನಾಕ್ ಲೇಡಿಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರ್ ಟೇಕರ್ ಕೆಲಸಕ್ಕೆ ಇದ್ದ ಉಮಾದೇವಿ ಬಂಧಿತ ಆರೋಪಿ.
ಇದನ್ನೂ ಓದಿ: ಪೊಲೀಸರ ರೇಡ್: ಚಾಮರಾಜನಗರದಲ್ಲಿ ಇಬ್ಬರು ಪಿಎಫ್ಐ ಮುಖಂಡರು ಅರೆಸ್ಟ್
ಬಂಧಿತ ಉಮಾದೇವಿಯಿಂದ 5 ಲಕ್ಷ ರೂ., 230 ಗ್ರಾಂ ಚಿನ್ನದ ಒಡವೆ ಮತ್ತು 750 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಉಮಾದೇವಿ ವೃದ್ಧರ ಆರೈಕೆಯ ಕೆಲಸ ಮಾಡುತ್ತಿದ್ದಳು. ಸ್ವಲ್ಪ ದಿನದಲ್ಲಿ ಮನೆಯವರ ನಂಬಿಕೆ ಗಳಿಸಿದ್ದ ಉಮಾದೇವಿ ಅವರ ಮನೆಯಲ್ಲಿ ಯಾವ ಯಾವ ವಸ್ತುಗಳು ಎಲ್ಲಿದೆ ಅಂತಾ ನೋಡಿಕೊಂಡಿದ್ದಳು.
ಒಳ್ಳೆಯ ಸಮಯ ನೋಡಿಕೊಂಡು ಮನೆ ದೋಚಲು ಉಮಾದೇವಿ ಮಾಸ್ಟರ್ ಪ್ಲಾನ್ ಮಾಡಿದ್ದಳು. ಅದರಂತೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೋಡಿಕೊಂಡು ಹಣ, ಚಿನ್ನದ ವಡವೆ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಿದ್ದಳು. ಮನೆಯಲ್ಲಿ ಕಳ್ಳತನವಾಗಿದ್ದನ್ನು ಗಮನಿಸಿದ ಮಾಲೀಕರು ಉಮಾದೇವಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಧರ್ಮದ ಮುಖಂಡರ ಹತ್ಯೆಗೆ PFI ಟ್ರೈನಿಂಗ್? FIRನಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.