Crime News : ಟ್ರಾಲಿ ಬ್ಯಾಗ್‌ನಲ್ಲಿ ಮಹಿಳೆಯ ಶವ ಪತ್ತೆ.! ತಂದೆಯಿಂದಲೆ ಮಗಳ ಮರ್ಯಾದಾ ಹತ್ಯೆ?

Crime News : ಕಳೆದ ವಾರ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಶವವನ್ನು ತುಂಬಿದ ಟ್ರಾಲಿ ಬ್ಯಾಗ್‌ ಪತ್ತೆಯಾಗಿದೆ. ದೆಹಲಿಯ 21 ವರ್ಷದ ಮಹಿಳೆಯನ್ನು ಆಕೆಯ ತಂದೆಯೇ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅವರ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣ ಕುಟುಂಬವು ಅಸಮಾಧಾನಗೊಂಡಿತ್ತು. ಈ ಹಿನ್ನೆಲೆ ಮಗಳಿಗೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. 

Written by - Chetana Devarmani | Last Updated : Nov 24, 2022, 03:14 PM IST
  • ಟ್ರಾಲಿ ಬ್ಯಾಗ್‌ನಲ್ಲಿ ಮಹಿಳೆಯ ಶವ ಪತ್ತೆ.!
  • ತಂದೆಯಿಂದಲೆ ಮಗಳ ಮರ್ಯಾದಾ ಹತ್ಯೆ?
  • 48 ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು
Crime News : ಟ್ರಾಲಿ ಬ್ಯಾಗ್‌ನಲ್ಲಿ ಮಹಿಳೆಯ ಶವ ಪತ್ತೆ.! ತಂದೆಯಿಂದಲೆ ಮಗಳ ಮರ್ಯಾದಾ ಹತ್ಯೆ?  title=
ಕೊಲೆ

Crime News : ಕಳೆದ ವಾರ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಶವವನ್ನು ತುಂಬಿದ ಟ್ರಾಲಿ ಬ್ಯಾಗ್‌ ಪತ್ತೆಯಾಗಿದೆ. ದೆಹಲಿಯ 21 ವರ್ಷದ ಮಹಿಳೆಯನ್ನು ಆಕೆಯ ತಂದೆಯೇ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅವರ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣ ಕುಟುಂಬವು ಅಸಮಾಧಾನಗೊಂಡಿತ್ತು. ಈ ಹಿನ್ನೆಲೆ ಮಗಳಿಗೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮಥುರಾ ಪೊಲೀಸರು ಮಹಿಳೆಯ ಗುರುತನ್ನು ಖಚಿತಪಡಿಸಿದ್ದು, ಕೊಲೆಯ ಉದ್ದೇಶವನ್ನು ಸಹ ಕಂಡುಹಿಡಿದಿದ್ದಾರೆ. ಇದು ಮರ್ಯಾದಾ ಹತ್ಯೆ ಎಂದು ಹೇಳಿದ್ದಾರೆ.

ದೆಹಲಿಯ ಮಾಡ್ ಬ್ಯಾಂಡ್ ಗ್ರಾಮದ ನಿವಾಸಿ 21 ವರ್ಷದ ಆಯುಷಿ ಯಾದವ್ ಮೃತದೇಹ ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಸಲಾಗಿತ್ತು. ಕೆಲ ದಿನಗಳ ಹಿಂದೆ ಮಹಿಳೆಯ ಎದೆಗೆ ಗುಂಡು ಹಾರಿಸಿ ಶವವನ್ನು ಆರೋಪಿಗಳು ಹೆದ್ದಾರಿಯಲ್ಲಿ ಎಸೆದಿದ್ದರು ಎಂದು ಮಥುರಾ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ : ಮಹಿಳೆಯರ ಪ್ರವೇಶ ನಿಷೇಧಿಸಿ ಜಾಮಾ ಮಸೀದಿ ತೀರ್ಪು: ಮಹಿಳಾ ಆಯೋಗ ಖಂಡನೆ

ಈ ಹತ್ಯೆಗೆ ಸಂಬಂಧಿಸಿದಂತೆ ಆಯುಷಿ ಪೋಷಕರಾದ ನಿತೇಶ್ ಕುಮಾರ್ ಯಾದವ್ ಮತ್ತು ಬ್ರಜ್ಬಾಲಾ ಅವರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆಯುಷಿಯ ತಾಯಿಗೆ ಹತ್ಯೆಯ ಬಗ್ಗೆ ತಿಳಿದಿತ್ತು ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ತಮ್ಮ ಮಗಳ ಶವವನ್ನು ವಿಲೇವಾರಿ ಮಾಡಲು ಪತಿಗೆ ಸಹಾಯ ಮಾಡಿದ್ದರು. ಪೋಷಕರನ್ನು ಬಂಧಿಸಲಾಗಿದೆ. ಅಪರಾಧಕ್ಕೆ ಬಳಸಿದ್ದ ಆಯುಧ ಹಾಗೂ ಶವವನ್ನು ವಿಲೇವಾರಿ ಮಾಡಲು ಬಳಸಿದ್ದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣ ಬೇಧಿಸಲು ಎಂಟು ಪೊಲೀಸ್ ತಂಡಗಳನ್ನು ರಚಿಸಲಾಗಿತು. 48 ಗಂಟೆಗಳ ಒಳಗೆ ಅಧಿಕಾರಿಗಳು ಪ್ರಕರಣ ಬೇಧಿಸಿದ್ದಾರೆ. ಆಕೆಯ ಪೋಷಕರು ಮತ್ತು ಸಹೋದರ ಮೃತದೇಹವನ್ನು ಗುರುತಿಸಲು ಮಥುರಾಗೆ ಬಂದರು ಮತ್ತು ವಿಚಾರಣೆಯ ವೇಳೆ ಕುಟುಂಬದ ಗೌರವವನ್ನು ಕಾಪಾಡಲು ತನ್ನ ಮಗಳಿಗೆ ಗುಂಡು ಹಾರಿಸಿರುವುದಾಗಿ ತಂದೆ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : 6 ಜನ, 2 ಶ್ವಾನ, 2 ಕೋಳಿ ಬೈಕ್‌ ಮಾತ್ರ ಒಂದೇ! ಈ ಸವಾರಿ ಕಂಡು ಹೌಹಾರಿದ ನೆಟ್ಟಿಗರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News