Doctor Murder Case: ಮಾಜಿ ಪ್ರೇಯಸಿಯ ವಿಚಾರಣೆ ವೇಳೆ ಹೊರಬಿತ್ತು ಅಸಲಿ ಸತ್ಯ!

ಬೆಂಗಳಳೂರಿನಲ್ಲಿ ನಡೆದಿದ್ದ ವೈದ್ಯನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮಾಜಿ ಪ್ರೇಯಸಿಯ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

Written by - Puttaraj K Alur | Last Updated : Oct 10, 2022, 02:03 PM IST
  • ಪ್ರೀತಿಸಿದವಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ದ ವೈದ್ಯನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
  • ಬೇಗೂರು ಪೊಲೀಸರ ತನಿಖೆ ವೇಳೆ ಹೊರಬಿದ್ದ ಹತ್ಯೆಯ ಸ್ಫೋಟಕ‌ ಸತ್ಯ
  • ಯುವತಿಯ ಮತ್ತೊಂದು ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ವೈದ್ಯನ ಕೊಲೆ
Doctor Murder Case: ಮಾಜಿ ಪ್ರೇಯಸಿಯ ವಿಚಾರಣೆ ವೇಳೆ ಹೊರಬಿತ್ತು ಅಸಲಿ ಸತ್ಯ! title=
ವೈದ್ಯನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು: ಪ್ರೀತಿಸಿದವಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ವೈದ್ಯನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೇಗೂರು ಪೊಲೀಸರ ತನಿಖೆ ವೇಳೆ ಸ್ಫೋಟಕ‌ ಸತ್ಯ ಹೊರಬಂದಿದೆ. ಯುವತಿಯ ಮತ್ತೊಂದು ಅಫೇರ್‍ಗೆ ಪ್ರಿಯಕರನ ಹೆಣ ಬಿದ್ದಿದೆ.

ಸೆಪ್ಟೆಂಬರ್ ತಿಂಗಳಲ್ಲಿ ವೈದ್ಯ ವಿಕಾಸ್ ಕೊಲೆ ನಡೆದಿತ್ತು. ಮನೆಯಲ್ಲಿ ಕೂಡಿ ಹಾಕಿ ಆತನ ಮೇಲೆ ಹಂತಕರು ಹಲ್ಲೆ ನಡೆಸಿದ್ದರು. ಪ್ಲಾನ್‍ನಂತೆ ಈ ಗ್ಯಾಂಗ್ ವೈದ್ಯ ವಿಕಾಸ್ ಕೊಂದು ಮುಗಿಸಿತ್ತು. ಆರೋಪಿಗಳ ಏಟಿಗೆ ವೈದ್ಯ ವಿಕಾಸ್ ಕೊನೆಯುಸಿರೆಳೆದಿದ್ದ.

ಇದನ್ನೂ ಓದಿಗಂಟು ಚರ್ಮರೋಗಕ್ಕೆ ಜಾನುವಾರುಗಳ ಬಲಿ, 50,000 ರೂ.ಪರಿಹಾರಕ್ಕೆ ಕುಮಾರಸ್ವಾಮಿ ಆಗ್ರಹ

ಪ್ರತಿಭಾ ಮತ್ತು ವಿಕಾಸ್ ಪರಸ್ಪರ ಪ್ರೀತಿ ಮಾಡುತ್ತಿದ್ದರು. ನಂತರ ಪ್ರತಿಭಾಗೆ ಆರೋಪಿ ಸುಶೀಲ್ ಜೊತೆಗೆ ಲವ್ವಿಡವ್ವಿ ಶುರುವಾಗಿತ್ತು. ಇದೇ ಪ್ರೀತಿ ದೈಹಿಕ ಸಂಪರ್ಕವರೆಗೂ ಹೋಗಿತ್ತು. ಇವರ ಕಳ್ಳಾಟ ಪ್ರಿಯತಮ ವಿಕಾಸ್‍ಗೆ ಗೊತ್ತಾಗಿತ್ತು.ಇದೇ ವಿಚಾರವಾಗಿ ವಿಕಾಸ್ ಮತ್ತು ಪ್ರತಿಭಾ ನಡುವೆ ದೊಡ್ಡ ಗಲಾಟೆಯಾಗಿತ್ತು. ಮಾತು ಕೇಳದಿದ್ದಾಗ ಪ್ರತಿಭಾ ಜೊತೆಗಿನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ವಿಕಾಸ್ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ.

ಅಂದಿನಿಂದ ಸುಶೀಲ್ ಜೊತೆಗೆ ಸೇರಿ ವೈದ್ಯ ವಿಕಾಸ್‍ನನ್ನು ಮುಗಿಸಲು ಪ್ರತಿಭಾ ಸ್ಕೆಚ್ ಹಾಕಿದ್ದಳು. ಅಂದುಕೊಂಡಂತೆ ಸುಶೀಲ್, ಗೌತಮ್, ಪ್ರತಿಭಾ ಮತ್ತು ಸೂರ್ಯ ಸೇರಿಕೊಂಡು ವಿಕಾಸ್ ಕೊಲೆ ಮಾಡಿದ್ದರು. ಈ ಪ್ರಕರಣ ಸಂಬಂಧ ನಾಲ್ವರನ್ನು ಬೇಗೂರು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ವೈದ್ಯನ ಕೊಲೆ ಹಿಂದಿನ ಅಸಲಿ ಕಹಾನಿ ರಿವಿಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಡಿಜಿಟಲ್ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: 5 ಮೀ. ದೂರದಲ್ಲಿ ಮಾಲೀಕ ಇದ್ರೂ ಬೈಕ್ ಎಗರಿಸಿದ ಕತರ್ನಾಕ್ ಕಳ್ಳ- ವಾಚ್ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News