Viral Video: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಭಯನಾಯ ಹಾಗೂ ಆಶ್ಚರ್ಯಕರ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.. ಅಂತದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ..
ಶಿವಮೊಗ್ಗ ಜಿಲ್ಲೆಯ ನಾಗಪ್ಪ ದೊಡ್ಡನಾರಾಯಣ ಕೋರ್ಚರ್, ಅವಿನಾಶ್ ಕೊಟ್ರೇಶ್, ನಿಸ್ಸಾರ ಮೊಹಮ್ಮದ್ ಜಾಫರ್, ಸಂಜೀವ ಕೆ ಆರ್ ರಾಮಣ್ಣ ಕೋರ್ಚರ್ ಹಾಗೂ ಕೃಷ್ಣಪ್ಪ ಯಾನೆ ಕೃಷ್ಣಮೂರ್ತಿ ನಾಯ್ಕ್ ಬಂಧಿತ ಆರೋಪಿಗಳಾಗಿದ್ದಾರೆ..
ಈಚರ್ ವಾಹನದಲ್ಲಿ ಹನೂರು ಭಾಗದಲ್ಲಿ ಮಾರಾಟ ಮಾಡಲು ಗಾಂಜಾ ತರಲಾಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಈ ಗಾಂಜಾ ಸಾಗಾಟ ಪತ್ತೆ ಹಚ್ಚಿದ್ದಾರೆ.
ಗಂಡ-ಮಕ್ಕಳೊಂದಿಗೆ ಆಳ್ಳಾಲಸಂದ್ರದಲ್ಲಿ ಇಂದಿರಾ ವಾಸವಾಗಿದ್ದು ಜೀವನಕ್ಕಾಗಿ ಮನೆಗೆಲಸ ಮಾಡುತ್ತಿದ್ದರು. ಮಗಳನ್ನ ಕುಣಿಗಲ್ ನ ಹೆಬ್ಬೂರು ನಿವಾಸಿ ಗೋವಿಂದಗೌಡ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಕೆಲ ತಿಂಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ಕಲಹ ಹಿನ್ನೆಲೆ ತವರು ಮನೆಗೆ ಬರುತ್ತಿದ್ದ ಮಗಳನ್ನ ಕಂಡು ಇಂದಿರಾ ಚಿಂತಾಕ್ರಾಂತಳಾಗಿದ್ದಳು.
Kolar ATM Robbery: ಬ್ಯಾಂಕ್ ಸಿಬ್ಬಂದಿ ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಕೆಜಿಎಫ್ ಡಿವೈಎಸ್ಪಿ ರಮೇಶ್ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ 2 ವರ್ಷದಲ್ಲಿ ಹಾವೇರಿ ಜಿಲ್ಲೆಯಲ್ಲಿ ಸುಮಾರು ಹೈವೆ ದರೋಡೆ ಪ್ರಕರಣಗಳು ಕಂಡು ಬಂದಿವೆ. ಈ ಗ್ಯಾಂಗ್ ಆಟಕ್ಕೆ ಹಾವೇರಿ ಜಿಲ್ಲೆಯ ಖಾಕಿ ಪಡೆಯು ಸುಸ್ತಾಗಿತ್ತು. ಹೇಗಾದ್ರು ಈ ಗ್ಯಾಂಗ್ ಹಿಡಿಯಲೇ ಬೇಕು ಅಂತಾ ತನಿಖೆಗೆ ಇಳಿದ ಖಾಕಿ ಪಡೆಗೆ ಸುಳಿವು ಸಿಗ್ತಿರಲ್ಲಿಲ್ಲ.
ರಾಜಧಾನಿಯ ಮಹಾಲಕ್ಷ್ಮಿ ಲೇಔಟ್ ಠಾಣೆಯ ನೂರು ಮೀಟರ್ ದೂರದಲ್ಲೇ ವಾಸಿಸ್ತಿದ್ದ 82 ವರ್ಷದ ವೃದ್ದೆ ಕಮಲಮ್ಮ ಎಂಬಾಕೆಯನ್ನ ಕೊಲೆ ಮಾಡಿ ರಾಬರಿ ಮಾಡಲಾಗಿದೆ. ಮನೆಗೆ ನುಗ್ಗಿದ್ದ ಆರೋಪಿಗಳು ಕಮಲಮ್ಮರ ಬಾಯಿಗೆ ಟೇಪ್ ಹಾಕಿ, ಕೈಕಾಲು ಕಟ್ಟಿ ಆಕೆ ಮೈಮೇಲಿದ್ದ ಚಿನ್ನಾಭರಣ ದೋಚಿದ್ದಾರೆ.
ರಾಜಧಾನಿಯ ಪುಲಕೇಶಿನಗರ ಹಾಗೂ ಭಾರತಿ ನಗರದಲ್ಲಿ ಸುಲಿಗೆ ಮಾಡಿ ಎಸ್ಕೇಪ್ ಆಗಿದ್ದ ಜಬಿ ಅಲಿಯಾಸ್ ಕಾಲು ಹಾಗು ಯಾಸೀನ್ ಅಲಿಯಾಸ್ ಮಚ್ಚಿ ಯನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 15 ಲಕ್ಷ ಮೌಲ್ಯದ ಮೂರು ಆಟೋಗಳು ಸೇರಿ 17 ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ತನಿಖೆ ವೇಳೆ ಐನಾತಿಗಳ ಕ್ರೈಂ ಹಿಸ್ಟರಿ ಕೇಳಿ ಪೊಲೀಸರಿಗೆ ಶಾಕ್ ಉಂಟಾಗಿದೆ.
ಇದೇ ತಿಂಗಳ 29ರಂದು ಅರ್ಷಾ ಲತೀಫ್ ಎಂಬ ಯುವತಿ ಕುಂದಲಹಳ್ಳಿಯ ಕೆರೆ ಬಳಿ ತನ್ನ ಸ್ನೇಹಿತನ ಜೊತೆ ಮಾತನಾಡುತ್ತ ಕುಳಿತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಹೋಂ ಗಾರ್ಡ್ ಮಂಜುನಾಥ್ ರೆಡ್ಡಿ, ಇಬ್ಬರ ಫೋಟೋ ಕ್ಲಿಕ್ಕಿಸಿಕೊಂಡು ಇಲ್ಲಿ ಯಾಕೆ ಕುಳಿತಿದ್ದೀರಿ ಎಂದು ವಿಚಾರಿಸಿದ್ದ. ನಂತರ ಸ್ಟೇಷನ್ ಗೆ ಬರುವಂತೆ ಹೆದರಿಸಿದ್ದ.
ಶಿವಾಜಿನಗರ ಹಾಗೂ ಪುಲಕೇಶಿನಗರ ಪೊಲೀಸ್ ಠಾಣೆಯ ರೌಡಿಶೀಟರ್ ಮನ್ಸೂರ್ ದಾನ್ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಈತನ ಅಪ್ರಾಪ್ತ ವಯಸ್ಸಿನ ಮಗನನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕಾಗಿ ಶೋಧಕಾರ್ಯ ಚುರುಕುಗೊಳಿಸಲಾಗಿದೆ.
ಬೆಂಗಳೂರು : ರಾತ್ರೋ ರಾತ್ರಿ ದೇವಸ್ಥಾನಕ್ಕೆ ನುಗ್ಗಿ ದೇವರ ಮೇಲಿದ್ದ ಬೆಳ್ಳಿ ಆಭರಣಗಳನ್ನು ಖತರ್ನಾಕ್ ಖದೀಮನೊಬ್ಬ ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ಯ ಗಣಪತಿ ದೇವಸ್ಥಾನದಲ್ಲಿ ಕಳೆದ ತಿಂಗಳು 24ರಂದು ಅಪರಿಚಿತ ತನ್ನ ಕೈಚಳಕ ತೋರಿ ಪರಾರಿಯಾಗಿದ್ದಾನೆ.
ಇದೇ ತಿಂಗಳು 15ರಂದು ಮಾಗಡಿ ರಸ್ತೆಯ ಇಟಿಎಂ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಕ್ಟೋಬರ್ 15 ರಂದು ಮಹೇಂದ್ರ ಕುಮಾರ್ ಮೇಸ್ತಾ ಎಂಬುವರು ಇಟಿಎಂ ಅಪಾರ್ಟ್ಮೆಂಟ್ ಬಳಿ ಬೈಕ್ನಲ್ಲಿ ತೆರಳುವಾಗ ಈ ಘಟನೆ ನಡೆದಿದೆ.
ಅಮೆರಿಕದ ಜಾರ್ಜಿಯಾದಲ್ಲಿ ವಯಸ್ಸಾದ ಮಹಿಳೆಯಂತೆ ವೇಷ ಧರಿಸಿ ಬಂದ ದರೋಡೆಕೋರ ಬ್ಯಾಂಕ್ ಅನ್ನು ದೋಚಿ ಪರಾರಿಯಾಗಿದ್ದಾನೆ. ಹೂವಿನ ಡಿಸೈನ್ ಇರುವ ಉಡುಗೆ, ಬಿಳಿ ಸ್ನೀಕರ್ಸ್, ಕಿತ್ತಳೆ ಲ್ಯಾಟೆಕ್ಸ್ ಕೈ ಗವಸುಗಳು, ಬಿಳಿ ವಿಗ್ ಮತ್ತು ಕಪ್ಪು ಮುಖವಾಡ ಧರಿಸಿ ಬಂದ ದರೋಡೆಕೋರನೊಬ್ಬ ಬ್ಯಾಂಕ್ ರಾಬರಿ ಮಾಡಿದ್ದಾನೆ.
ಕಳೆದ ಮೇ ತಿಂಗಳ 25ರ ರಾತ್ರಿ 8 ಗಂಟೆ ಸುಮಾರಿಗೆ ಮೂವರು ನೈಟಿ ಧರಿಸಿ ಆರ್ಆರ್ ನಗರದ ಮಣಪ್ಪುರಂ ಫೈನಾನ್ಸ್ ಕಂಪನಿ ಒಳನುಗ್ಗಿದ್ರು. ಲಾಕರ್ ಓಪನ್ ಮಾಡುವಷ್ಟರಲ್ಲಿ ಸೈರನ್ ಮೊಳಗಿತ್ತು. ತಕ್ಷಣ ಮೂವರು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಇದೀಗ ಈ ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಖಾರದಪುಡಿ ಎರಚಿ ಸರ ಕಸಿಯಲು ಯತ್ನಿಸಿದ ಯುವತಿ ಮತ್ತು ಆಕೆಯ ಬಾಯ್ ಫ್ರೆಂಡ್ ಇಬ್ಬರನ್ನು ಬಂಧಿಸಲಾಗಿದೆ. ಬ್ಯಾಂಕ್ ಲೋನ್ ತೀರಿಸೋದಕ್ಕಾಗಿ ಗೆಳೆಯನ ಜೊತೆ ಯುವತಿ ರಾಬರಿಗಿಳಿದಿದ್ದಳು. ಈ ಖತರ್ನಾಕ್ ಜೋಡಿಯನ್ನು ನಂದಿನಿ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Thief Dance Viral Video: ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಕಳ್ಳನೊಬ್ಬ ಕಳ್ಳತನ ಮಾಡುವುದಲ್ಲದೆ ಕ್ಯಾಮರಾ ನೋಡಿ ಡ್ಯಾನ್ಸ್ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಗಮನಿಸಲಾಗಿದೆ.
ಇಂದಿರಾನಗರದಿಂದ ಕದ್ದ ಬೈಕಿನಲ್ಲಿ ಬಂದ ಆರೋಪಿಗಳು ಸಿಗರೇಟ್ ಶೋಕಿಗೆ ಹಣ ಹೊಂದಿಸಲು ಕೆಲ ಅಂಗಡಿಗಳಲ್ಲಿ ಲೂಟಿ ಮಾಡಲು ಯತ್ನಿಸಿದ್ದಾರೆ. ಅಂತೆಯೇ ಆರ್ಎಂವಿ 2ನೇ ಹಂತದ ಸ್ಟಾರ್ ಬಕ್ಸ್ ಶಾಪ್ಗೆ ಬಂದಿದ್ದ ಆರೋಪಿಗಳು ಬಾಗಿಲನ್ನು ತೆರೆದಿದ್ದರಾದರೂ ಲಾಕರ್ ಓಪನ್ ಮಾಡಲಾಗದೇ ಪರದಾಡಿದ್ದಾರೆ.
Bank Robbery - ಉತ್ತರ ಕರ್ನಾಟಕದಲ್ಲಿ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಲಿಂಗೈಕ್ಯ ಮಹಾಂತ ಶಿವಯೋಗಿಗಳಿಂದ ಉದ್ಘಾಟನೆಗೊಂಡ ಡಿಸಿಸಿ ಬ್ಯಾಂಕ್ ಶಾಖೆಯೊಂದರಲ್ಲಿ ಬರೋಬ್ಬರಿ 6 ಕೋಟಿಗೂ ಹೆಚ್ಚು ಹಣ, ಚಿನ್ನಾಭರಣ ಕಳ್ಳತನವಾಗಿತ್ತು. ಕಳ್ಳತನ ಮಾಡುವ ಮುನ್ನ ಮುರಗೋಡ (Murugod) ಮಹಾಂತಜ್ಜನ ತಿಜೋರಿ ಖಾಲಿ ಇರಬಾರದು ಅಂತಾ ಒಂದಿಷ್ಟು ಹಣ, ಚಿನ್ನ ಲಾಕರ್ನಲ್ಲೇ ಬಿಟ್ಟು ಖದೀಮರು ಪರಾರಿಯಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.