ಬೆಂಗಳೂರು: ಪೊಲೀಸ್ ಎಂದು ಹೇಳಿಕೊಂಡು ಪಾರ್ಕ್ ನಲ್ಲಿ ಕುಳಿತಿದ್ದ ಯುವಕ, ಯುವತಿಯಿಂದ ಒಂದು ಸಾವಿರ ರೂಪಾಯಿ ಹಣ ವಸೂಲಿ ಮಾಡಿದ್ದ ಹೋಂಗಾರ್ಡ್ ನನ್ನು ಹೆಚ್ ಎಲ್ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ರೆಡ್ಡಿ ಬಂಧಿತ ಆರೋಪಿಯಾಗಿದ್ದಾನೆ.
ಇದೇ ತಿಂಗಳ 29ರಂದು ಅರ್ಷಾ ಲತೀಫ್ ಎಂಬ ಯುವತಿ ಕುಂದಲಹಳ್ಳಿಯ ಕೆರೆ ಬಳಿ ತನ್ನ ಸ್ನೇಹಿತನ ಜೊತೆ ಮಾತನಾಡುತ್ತ ಕುಳಿತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಹೋಂ ಗಾರ್ಡ್ ಮಂಜುನಾಥ್ ರೆಡ್ಡಿ, ಇಬ್ಬರ ಫೋಟೋ ಕ್ಲಿಕ್ಕಿಸಿಕೊಂಡು ಇಲ್ಲಿ ಯಾಕೆ ಕುಳಿತಿದ್ದೀರಿ ಎಂದು ವಿಚಾರಿಸಿದ್ದ. ನಂತರ ಸ್ಟೇಷನ್ ಗೆ ಬರುವಂತೆ ಹೆದರಿಸಿದ್ದ.
Traumatic experience during visit to BLR. During afternoon, on 29/1/23 my male friend & I visited Kundanahalli Lake to sit in the shade & enjoy the view. A cop started clicking our pictures and started harassing us that we did not have the 'permission' to sit there (1/6) pic.twitter.com/4KKMOT0ny7
— Arsha Latif (@ArshaLatif) January 30, 2023
ಇದನ್ನೂ ಓದಿ- ಆಂಟಿ ಪ್ರೀತ್ಸೆ ಅಂತ ಹಿಂದೆ ಬಿದ್ದ ಪಾಗಲ್ ಪ್ರೇಮಿ! ಒಪ್ಪದ ಮಹಿಳೆಯ ಕೊಲ್ಲಲು ಮಿಕ್ಸಿಲ್ಲಿಟ್ಟ ಬಾಂಬ್?
ಪಾರ್ಕ್ ನಲ್ಲಿ ಕುಳಿತುಕೊಳ್ಳಲು ಪರ್ಮಿಷನ್ ಬೇಕು, ಠಾಣೆಗೆ ಬಂದರೆ ಹಿರಿಯ ಅಧಿಕಾರಿಗಳಿಗೆ ಉತ್ತರಿಸಬೇಕಾಗುತ್ತದೆ. ಇಲ್ಲೇ ಆದರೆ ಸಾವಿರ ಫೈನ್ ಕಟ್ಟುವಂತೆ ಹೆದರಿಸಿ 1000 ರೂಪಾಯಿ ಹಣ ಪಡೆದಿದ್ದ. ಇದರಿಂದ ನೊಂದಿದ್ದ ಯುವತಿ ಕಾನ್ಸ್‌ಟೇಬಲ್ ಬೆದರಿಸಿ ಹಣ ಪಡೆದಿದ್ದಾರೆ ಎಂದು ಟ್ವೀಟ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಳು.
ಸದ್ಯ ಈ ಟ್ವೀಟ್ ಆಧಾರದ ಮೇಲೆ ತನಿಖೆ ನಡೆಸಿರುವ ಪೊಲೀಸರು, ಪೊಲೀಸ್ ಎಂದು ಹೇಳಿಕೊಂಡು ಬೆದರಿಸಿ ಒಂದು ಸಾವಿರ ಹಣ ಪಡೆದಿದ್ದ ಹೋಂ ಗಾರ್ಡ್ ಮಂಜುನಾಥ್ ರೆಡ್ಡಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಯುವತಿ ಅರ್ಷಾ ಲತೀಫ್ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈಗ ಪೊಲೀಸ್ ಎಂದು ಸುಳ್ಳು ಹೇಳಿ ಬೆದರಿಸಿದ್ದ ಹೋಂ ಗಾರ್ಡ್ ಬಂಧನದಿಂದ ಪೊಲೀಸ್ ಇಲಾಖೆ ಮೇಲೆ ಮಾಡಲಾಗಿದ್ದ ಆರೋಪವೊಂದು ಸುಳ್ಳಾಗಿದೆ.
ಇದನ್ನೂ ಓದಿ- ಪ್ರೇಯಸಿ ಆಸೆ ತೀರಿಸಲು ಅಣ್ಣನ ಮನೆಗೆ ಕನ್ನ: ಹುಡುಗಿ ಜೊತೆ ಗೋವಾದಲ್ಲಿ ಮಜಾ ಮಾಡುತ್ತಿದ್ದವ ಅಂದರ್!
ಈ ಹಿಂದೆ ಸಂಪಿಗೆಹಳ್ಳಿ, ಆಡುಗೋಡಿ ಪೊಲೀಸರು ಜನರಿಂದ ವಸೂಲಿ ಮಾಡುತ್ತಿದ್ದ ಬಗ್ಗೆ ಆರೋಪ ಕೇಳಿ ಬಂದಿದ್ದಾಗ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದನ್ನ ಸ್ಮರಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.