ಬೆಂಗಳೂರು: ತನ್ನ ಅಕ್ಕನ ಮಗನ ಜೊತೆಯೇ ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿಯನ್ನು ಗಂಡ ಗುಪ್ತಾಂಗಕ್ಕೆ ಇರಿದು ಕೊಲೆ ಮಾಡಿರುವ ಘಟನೆ ಬಸವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅನಾಥಶ್ರಮದಲ್ಲಿ ಹುಟ್ಟಿ ಬೆಳದಿದ್ದ ನಾಗರತ್ನ 11 ವರ್ಷಗಳ ಹಿಂದೆ ಅಯ್ಯಪ್ಪ ಎಂಬಾತನನ್ನು ಮದುವೆಯಾಗಿದ್ದಳು. ಮದುವೆಯಾದ ಬಳಿಕ ಗಂಡ ಹೆಂಡತಿ ಕೆಲಸ ಮಾಡ್ಕೊಂಡು ಸುಖವಾಗಿದ್ರೂ. ಆದರೆ ನಿನ್ನೆ ರಾತ್ರಿ ಹೆಂಡತಿಯ ಅನೈತಿಕ ಸಂಬಂದವನ್ನ ಕಣ್ಣಾರೆ ಕಂಡು ಗಂಡನೇ ಆಕೆಯನ್ನು ಕೊಲೆ ಮಾಡಿದ್ದಾನೆ.
ಇದನ್ನೂ ಓದಿ- ಗಂಡನಿಲ್ಲ ಸುಖ ಕೊಡು ಬಾ ಎಂದು ಕರೆದ ಆಂಟಿ: ನಂಬಿ ಹೋದವನ ಹಣ ದೋಚಿದ ಗ್ಯಾಂಗ್
ನಾಗರತ್ನ ಗಂಡನ ಹೆಸರು ಅಯ್ಯಪ್ಪ. ಮನೆಯಲ್ಲಿ ಊಟ ಇದ್ರೂ ಪಕ್ಕದ ಮನೆ ಊಟನೇ ಇಷ್ಟ ಅನ್ನೋ ಮಾತು ಮೃತ ನಾಗರತ್ನಗೆ ಪರ್ಫೆಕ್ಟ್ ಆಗಿ ಸೂಟ್ ಆಗುತ್ತೆ. ನಾಗರತ್ನ ಸ್ವಂತ ಅಕ್ಕನ ಮಗ ಅಂದರೆ ಸಂಬಂಧದಲ್ಲಿ ಮಗನಾಗುವ ಚಂದ್ರಶೇಖರ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು. ನಿನ್ನೆ ರಾತ್ರಿ ಆಕೆಯ ಗಂಡ ಅಯ್ಯಪ್ಪ ಪ್ರಕಾಶ್ ನಗರದ ಮನೆಗೆ ಬಂದಾಗ ನಾಗರತ್ನ ಮತ್ತು ಆಕೆಯ ಅಕ್ಕನ ಮಗ ಚಂದ್ರಶೇಖರ್ ಚಕ್ಕಂದವಾಡುವಾಗ ಲಾಕ್ ಆಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಯ್ಯಪ್ಪ ನಾಗರತ್ನ ಮೇಲೆ ಹಲ್ಲೆ ನಡೆಸಿ ಆಕೆ ಸಂಬಂಧಿಕರಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ.
ಅಯ್ಯಪ್ಪನ ಕೋಪ ಎಷ್ಟರಮಟ್ಟಿಗೆ ಇತ್ತು ಅಂದ್ರೆ ನಾಗರತ್ನ ತಲೆಗೆ ಹಲ್ಲೆ ನಡೆಸಿ ಆಕೆಯ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಹೀಗಾಗಿ ತೀವ್ರ ರಕ್ತಸ್ರಾವದಿಂದ ನಾಗರತ್ನ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇದನ್ನೂ ಓದಿ- ಬಾರ್ನಲ್ಲಿ ಕುಡಿದು ಗಲಾಟೆ: ಕ್ಯಾಶಿಯರ್ನ ಕೊಲೆಯಲ್ಲಿ ಅಂತ್ಯ
ಇನ್ನೂ ನಾಗರತ್ನ ಸಂಬಂಧಿ ನೀಡಿದ ದೂರಿನ ಮೇರೆಗೆ ಆರೋಪಿ ಅಯ್ಯಪ್ಪನನ್ನ ಬಸವೇಶ್ವರ ನಗರ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಇತ್ತ ಗಂಡನಿದ್ದರೂ ಸಹ ಅಕ್ಕನ ಮಗನ ಜೊತೆ ಸರಸವಾಡಿ ಸಂಬಂಧದ ಮೌಲ್ಯವನ್ನು ಕಳೆದಿದ್ದ ನಾಗರತ್ನ ಈಗ ಬರ್ಬರವಾಗಿ ಕೊಲೆಯಾಗಿ ಮಸಣ ಸೇರಿದ್ದಾಳೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ