Bengaluru Crime: ಮಾದಕವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದವನಿಂದಲೇ ಡ್ರಗ್ ದಂಧೆ: ನಶೆಯಲ್ಲಿ ಪೊಲೀಸರಿಗೆ ಸಿಕ್ಕಿಕಿಬಿದ್ದ ಆಸಾಮಿ!

Drug trafficking in Bengaluru: ಕೆಂಗೇರಿ ಬಳಿ ಪೂರ್ಣ ಪ್ರಜ್ಞಾ ಫೌಂಡೇಶನ್‌ನ ಹೆಸರಿನಲ್ಲಿ ಮದ್ಯ, ಮಾದಕವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದ ಸೂರಜ್ ಗೌಡ ಬಂಧಿತ ಆರೋಪಿ. 

Written by - Chetana Devarmani | Last Updated : Jun 3, 2023, 12:21 PM IST
  • ಮಾದಕವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದವನಿಂದಲೇ ಡ್ರಗ್ ದಂಧೆ
  • ನಶೆಯಲ್ಲಿ ಪೊಲೀಸರಿಗೆ ಸಿಕ್ಕಿಕಿಬಿದ್ದ ಆಸಾಮಿ
  • ಆರೋಪಿಯನ್ನ ಬಂಧಿಸಿದ ಗಿರಿನಗರ ಠಾಣಾ ಪೊಲೀಸರು
Bengaluru Crime: ಮಾದಕವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದವನಿಂದಲೇ ಡ್ರಗ್ ದಂಧೆ: ನಶೆಯಲ್ಲಿ ಪೊಲೀಸರಿಗೆ ಸಿಕ್ಕಿಕಿಬಿದ್ದ ಆಸಾಮಿ!  title=

ಬೆಂಗಳೂರು: ಮದ್ಯ ಮತ್ತು ಮಾದಕವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದ ವ್ಯಕ್ತಿಯೇ ಮಾದಕ ವಸ್ತು ಮಾರಾಟ ಹಾಗೂ ವ್ಯಸನಕ್ಕೆ ದಾಸನಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನ ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಬಳಿ ಪೂರ್ಣ ಪ್ರಜ್ಞಾ ಫೌಂಡೇಶನ್‌ನ ಹೆಸರಿನಲ್ಲಿ ಮದ್ಯ, ಮಾದಕವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದ ಸೂರಜ್ ಗೌಡ ಬಂಧಿತ ಆರೋಪಿ. ಈತ ಪಧವೀಧರನಾಗಿದ್ದು, ಸ್ವತಃ ತಾನೇ ಮಾದಕ ವ್ಯಸನಿಯಾಗಿದ್ದ. ಮಾತ್ರವಲ್ಲದೇ ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದ. 

ಬಳಿಕ ಮಾದಕವ್ಯಸನದಿಂದ ಮುಕ್ತಿ ಹೊಂದಲು ತಾನೇ ಒಂದು ಮಧ್ಯ ಮತ್ತು ಮಾದಕ ವ್ಯಸನ ಮುಕ್ತಿ ಕೇಂದ್ರ ತೆರೆದಿದ್ದ. ಆದರೆ ಮಾದಕ ವ್ಯಸನದಿಂದ ಹೊರಬರಲಾರದೆ ತಾನು ಮಾದಕ ಪದಾರ್ಥಗಳನ್ನ ಸೇವಿಸುವುದಲ್ಲದೇ, ವ್ಯಸನದಿಂದ ಮುಕ್ತರಾಗಲು ದಾಖಲಾಗಿದ್ದವರಿಗೂ ಸಹ ನೀಡುತ್ತಿದ್ದ. 

ಇದನ್ನೂ ಓದಿ: ಯೋನಿಯನ್ನು ಪೂಜಿಸಲ್ಪಡುವ ಮತ್ತು ಮಾಟ-ಮಂತ್ರಗಳಿಗೆ ಫೇಮಸ್‌ ಈ ದೇಗುಲ..!

ನಗರದಲ್ಲಿ ಮಾದಕ ಪದಾರ್ಥಗಳಿಗೆ ಕಡಿವಾಣ ಹಾಕಲು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದ ಸಮಯದಲ್ಲಿ ಈತನೇ ಪೊಲೀಸರ ಬಳಿ ಬಂದು ಗೊಂದಲಕಾರಿಯಾಗಿ ಮಾತನಾಡಿದ್ದಾನೆ. ಈ ವೇಳೆ ಪೊಲೀಸರು ಆರೋಪಿಯನ್ನ ಪರಿಶೀಲಿಸಿದಾಗ ಆತನೇ ಡ್ರಗ್ ಸೇವಿಸಿ ಹೊಸಕೆರೆಹಳ್ಳಿ ಬಳಿ ಎಂಡಿಎಂಎ ಎಕ್ಸ್ಟಸಿ ಪಿಲ್ಸ್ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.

ಸದ್ಯ ಆರೋಪಿಯಿಂದ 1.25 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

ಇದನ್ನೂ ಓದಿ: ಅನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಇಬ್ಬರ ಬಂಧನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News