ಧಾರವಾಡ: ಒಂದೆಡೆ ಬಯಲುಸೀಮೆ, ಮತ್ತೊಂದೆಡೆ ದಟ್ಟವಾಡ್ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿರುವ ಅರೆಮಲೆನಾಡು ಪ್ರದೇಶವಾದ ಹುಬ್ಬಳ್ಳಿ ಧಾರವಾಡ ಜಿಲ್ಲೆಗಳು ನಿಜವಾಗಿಯೂ ಉಗ್ರರ ಅಡಗುತಾಣವಾಗುತ್ತಿದೆಯಾ ಎಂಬ ಅನುಮಾನಗಳು ವ್ಯಕ್ತವಾಗಿವೆ. ಅಷ್ಟಕ್ಕೂ, ಇದ್ದಕ್ಕಿದ್ದಂತೆ ಇಂತಹದೊಂದು ಪ್ರಶ್ನೆ ಮೂಡಲು ಪ್ರಮುಖ ಕಾರಣವೆಂದರೆ ನಿನ್ನೆಯಷ್ಟೇ ದೆಹಲಿಯ ಎನ್‌ಐಎ ತಂಡ ಬಂಧಿಸಿರುವ ಮೂವರು ಶಂಕಿತ ಉಗ್ರರು ನೀಡಿರುವ ಸ್ಫೋಟಕ ಮಾಹಿತಿ.
ಹೌದು, ನಿನ್ನೆ(ಅಕ್ಟೋಬರ್ 03, ಮಂಗಳವಾರ) ದೆಹಲಿ ಎನ್‌ಐಎ ತಂಡ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದು, ಅದರಲ್ಲಿ ಒಬ್ಬ ಶಹನವಾಜ್ ಎಂಬ ಶಂಕಿತ ಉಗ್ರ ಅವಳಿ ನಗರ ಹುಬ್ಬಳ್ಳಿ-ಧಾರವಾಡದ ಪಶ್ಚಿಮ ಘಟ್ಟದ ಕಾಡಿನಲ್ಲಿ ತರಬೇತಿ ಪಡೆದಿರುವುದಾಗಿ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗ ಪಡಿಸಿದ್ದಾನೆ. ಆದರೆ, ಇದುವರೆಗೂ ಉಗ್ರರು ಧಾರವಾಡ ಭಾಗದ ಯಾವ ಅರಣ್ಯದಲ್ಲಿ ಅಡಗಿದ್ದಾರೆ ಅಥವಾ ತರಬೇತಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆ ಬಗ್ಗೆ ಯಾವುದೇ ಕುರುಹುಗಳು ಸಹ ಪತ್ತೆಯಾಗಿಲ್ಲ.
ಈ ವಿಷಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿರುವ ದೆಹಲಿ ಎನ್‌ಐಎ ತಂಡ ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಪೊಲೀಸರು ಹಾಗೂ ಜಿಲ್ಲಾ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಹುಬ್ಬಳ್ಳಿ, ಧಾರವಾಡದ ಯಾವ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣವಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ- Bengaluru: ಮದುವೆಗೆ ಹೋಗಿದ್ದ ಸಂಬಂಧಿಕರ ಮನೆ ದೋಚಿದ್ದ ಖತರ್ನಾಕ್ ಕಳ್ಳನ ಬಂಧನ!
ಇದಲ್ಲದೆ, ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಉಗ್ರರು ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಈ ಭಾಗಗಳಲ್ಲಿ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ದೆಹಲಿಯಲ್ಲಿ ಶಹನವಾಜ್ ಎಂಬ ಶಂಕಿತ ಉಗ್ರ ನೀಡಿರುವ ಹೇಳಿಕೆಯ ಜಾಡು ಹಿಡಿದು ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಾಸ್ತವವಾಗಿ, ಧಾರವಾಡ ದಾಟುತ್ತಿದ್ದಂತೆ ಅನೇಕ ಕಾಡುಗಳಿದ್ದು, ಅಲ್ಲಿ ಉಗ್ರರ ಯಾವ ಕುರುಹುಗಳು ಕೂಡ ಇನ್ನೂ ಪತ್ತೆಯಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಇದನ್ನೂ ಓದಿ- Bengaluru: ಎಲೆಕ್ಟ್ರಾನಿಕ್ ಮಳಿಗೆಯಲ್ಲಿ ಕಳ್ಳತನ ಮಾಡಿದ್ದ ಕಾಲೇಜು ವಿದ್ಯಾರ್ಥಿಗಳ ಬಂಧನ..!
ಗಮನಾರ್ಹವಾಗಿ, ಶಂಕಿತ ಉಗ್ರನ ಹೇಳಿಕೆ ಈ ಭಾಗದ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದರೂ, ಇಂತಹ ಕೆಲವು ವದಂತಿಗಳು ಈ ಹಿಂದೆಯೂ ಕೇಳಿಬಂದಿದ್ದರಿಂದ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿಂದೆ ಧಾರವಾಡ ಜಿಲ್ಲೆಯ ಕಲಘಟಗಿ, ಅಳ್ನಾವರ ಹಾಗೂ ಧಾರವಾಡದಲ್ಲಿ ಶಂಕಿತ ಭಯೋತ್ಪಾದಕರರ ಜಾಡು ಇತ್ತು. ಆದ್ದರಿಂದ ಸರ್ಕಾರ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸುವುದು ಬೇಡಾ ಮತ್ತು ತುಷ್ಟೀಕರಣ ಸಹ ಬೇಡಾ. ಶಂಕಿತ ಉಗ್ರರ ಬಗ್ಗೆ ಪೊಲೀಸ್ ಅಧಿಕಾರಿಗಳೇ ಮಾಹಿತಿ ನೀಡಿದ್ದು ಇಂತಹ ಸಾಮಾಜಿಕ ಘಾತುಕ ಶಕ್ತಿಗಳ ಹುಟ್ಟು ಅಡಗಿಸಲು ವಿಶ್ವ ಹಿಂದು ಪರಿಷತ್ ಹುಬ್ಬಳ್ಳಿ ಮಹಾನಗರ ಕಾರ್ಯದರ್ಶಿ ರಮೇಶ್ ಕದಂ ಹಾಗೂ ವಿಶ್ವ ಹಿಂದು ಪರಿಷತ್ ಹುಬ್ಬಳ್ಳಿ ಮಹಾನಗರ ಕಾರ್ಯದರ್ಶಿ ರಮೇಶ್ ಕದಂ ಹಾಗೂ ವಿಶ್ವ ಹಿಂದು ಪರಿಷತ್ ಮುಖಂಡರಾದ ಅವಿನಾಶ್ ಮುಂತಾದವರು ಒತ್ತಾಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.