ಲವ್ ಮಾಡಿ ಇನ್ನೊಬ್ಬನೊಂದಿಗೆ ಸುತ್ತುತ್ತಿದ್ದಕ್ಕೆ ಚಾಕು ಇರಿತ..!

ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನೊಂದಿಗೆ ಪ್ರವಾಸಿತಾಣದಲ್ಲಿ ಅಡ್ಡಾಡುತ್ತಿರುವ ಕಂಡ ಪ್ರಿಯಕರ ಇಬ್ಬರಿಗೂ ಚಾಕುವಿನಿಂದ ಹಲ್ಲೆ‌ ಮಾಡಿದ ಘಟನೆ ಕುಶಾಲನಗರದ ಕಾವೇರಿ‌ ನಿಸರ್ಗಧಾಮದಲ್ಲಿ ಶನಿವಾರ ನಡೆದಿದೆ.

Written by - Zee Kannada News Desk | Last Updated : Aug 13, 2022, 08:10 PM IST
  • ಕುಶಾಲನಗರ ಸರಕಾರಿ ಪ್ರಥಮ‌ ದರ್ಜೆ‌ ಕಾಲೇಜಿನ ವಿದ್ಯಾರ್ಥಿಗಳಾದ ಜೋಡಿ ಕಾವೇರಿ‌ ನಿಸರ್ಗಧಾಮಕ್ಕೆ ತೆರಳಿದೆ.
 ಲವ್ ಮಾಡಿ ಇನ್ನೊಬ್ಬನೊಂದಿಗೆ ಸುತ್ತುತ್ತಿದ್ದಕ್ಕೆ ಚಾಕು ಇರಿತ..! title=
screengrab

ಮಡಿಕೇರಿ: ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನೊಂದಿಗೆ ಪ್ರವಾಸಿತಾಣದಲ್ಲಿ ಅಡ್ಡಾಡುತ್ತಿರುವ ಕಂಡ ಪ್ರಿಯಕರ ಇಬ್ಬರಿಗೂ ಚಾಕುವಿನಿಂದ ಹಲ್ಲೆ‌ ಮಾಡಿದ ಘಟನೆ ಕುಶಾಲನಗರದ ಕಾವೇರಿ‌ ನಿಸರ್ಗಧಾಮದಲ್ಲಿ ಶನಿವಾರ ನಡೆದಿದೆ.

ಕುಶಾಲನಗರ ಸರಕಾರಿ ಪ್ರಥಮ‌ ದರ್ಜೆ‌ ಕಾಲೇಜಿನ ವಿದ್ಯಾರ್ಥಿಗಳಾದ ಜೋಡಿ ಕಾವೇರಿ‌ ನಿಸರ್ಗಧಾಮಕ್ಕೆ ತೆರಳಿದೆ.ಈ ಪೈಕಿ ಮಾದಾಪಟ್ಟಣ ನಿವಾಸಿ ವಿದ್ಯಾರ್ಥಿನಿ ಪ್ರಿಯಕರ ಎನ್ನಲಾದ ಕುಶಾಲನಗರ ಹೋಟೆಲ್ ಸಿಬ್ಬಂದಿ ದೊಡ್ಡಹರವೆ ಗ್ರಾಮದ ವಿಜಯ್ (22) ಈ ಜೋಡಿಯನ್ನು ಹಿಂಬಾಲಿಸಿ ಚಾಕುವಿನಿಂದ ಇರಿಯಲು‌ ಮುಂದಾಗಿದ್ದಾನೆ.

ಇದನ್ನೂ ಓದಿ: Khadi Flags : ಪಾಲಿಸ್ಟರ್ ಧ್ವಜಗಳ ಮಧ್ಯೆ, ಮಾರುಕಟ್ಟೆಯಲ್ಲಿ ಖಾದಿ ಧ್ವಜಗಳಿಗೆ  ಭಾರಿ ಬೇಡಿಕೆ!

ಘಟನೆಯಿಂದ ಯುವತಿಯ ಭುಜ, ಕೈ, ಕುತ್ತಿಗೆ ಭಾಗದಲ್ಲಿ ಗಾಯ ಉಂಟಾಗಿದೆ. ತಡೆಯಲು ಬಂದ ಈಕೆಯ ಸಹಚರ ಹೆಬ್ಬಾಲೆಯ ಪ್ರವೀಣ್ ಎಂಬಾತನಿಗೂ‌ಕೂಡ ಎರಡು ಕೈಗಳಿಗೆ ಗಾಯ ಉಂಟಾಗಿದೆ. ಸ್ಥಳದಲ್ಲಿ ಇದ್ದ ಇತರೆ ಪ್ರವಾಸಿಗರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸಕಾಲದಲ್ಲಿ‌ ಮದ್ಯ ಪ್ರವೇಶಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.ಆರೋಪಿಯನ್ನು ವಶಕ್ಕೆ ಪಡೆದ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News