ಸಾವಿಗೆ ನ್ಯಾಯ ಸಿಗದ ಹಿನ್ನಲೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ರಾಷ್ಟ್ರಪತಿಗೆ ಪತ್ರ

ಐದು ವರ್ಷದ ಹಿಂದೆ ಬಿಜೆಪಿ ಮುಖಂಡ ಅನ್ವರ್ ಕೊಲೆಗೀಡಾದ ಹಿನ್ನಲೆ ಅವರ ಕುಟುಂಬಸ್ಥರು ಅದಿನಿಂದ ಇಂದಿನವರೆಗೂ ನ್ಯಾಯಕ್ಕಾಗಿ ಪರಿತಪ್ಪಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸದ ಹಿನ್ನಲೆ ಅನ್ವರ್ ಕುಟುಂಬಸ್ಥರು ದಯಾಮರಣಕ್ಕೆ ಅನುಮತಿ ನೀಡುವಂತೆ ಪತ್ರ ಬರೆದಿದ್ದಾರೆ. 

Written by - Zee Kannada News Desk | Last Updated : Jun 23, 2023, 11:36 AM IST
  • ಸಾವಿಗೆ ನ್ಯಾಯ ಸಿಗದ ಹಿನ್ನಲೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ರಾಷ್ಟ್ರಪತಿ ಪತ್ರ
  • ಐದು ವರ್ಷದ ಹಿಂದೆ ಬಿಜೆಪಿ ಮುಖಂಡ ಅನ್ವರ್ ಕೊಲೆ
  • ದಯಾಮರಣಕ್ಕಾಗಿ ಕಬೀರ್ ಸಹೋದರ ರಾಷ್ಟ್ರಪತಿಗೂ ಪತ್ರ
ಸಾವಿಗೆ ನ್ಯಾಯ ಸಿಗದ ಹಿನ್ನಲೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ರಾಷ್ಟ್ರಪತಿಗೆ ಪತ್ರ  title=

ಚಿಕ್ಕಮಗಳೂರು: ಐದು ವರ್ಷದ ಹಿಂದೆ ಬಿಜೆಪಿ ಮುಖಂಡ ಅನ್ವರ್ ಕೊಲೆಗೀಡಾದ ಹಿನ್ನಲೆ ಅವರ ಕುಟುಂಬಸ್ಥರು ಅದಿನಿಂದ ಇಂದಿನವರೆಗೂ ನ್ಯಾಯಕ್ಕಾಗಿ ಪರಿತಪ್ಪಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸದ ಹಿನ್ನಲೆ  ಅನ್ವರ್ ಕುಟುಂಬಸ್ಥರು ದಯಾಮರಣಕ್ಕೆ ಅನುಮತಿ ನೀಡುವಂತೆ ಪತ್ರ ಬರೆದಿದ್ದಾರೆ. 

ಕೊಲೆ ಪ್ರಕರಣ ಸಂಬಂಧ ಅನ್ವರ್ ಸಹೋದರ ಕಬೀರ್, ನನ್ನ ಸಹೋದರ ಕೊಲೆಯಾಗಿ ಐದು ವರ್ಷವಾಯ್ತು. ಐದು ವರ್ಷದಿಂದ ಆರೋಪಿಗಳನ್ನ ಇಂದಿಗೂ ಬಂಧಿಸಿಲ್ಲ. ನನ್ನ ಸಹೋದರನ ಸಾವಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ನಮಗೆ ನ್ಯಾಯ ಕೊಡಿಸಿ ಇಲ್ಲ ದಯಾಮರಣಕ್ಕೆ ಅನುಮತಿ ನೀಡಿ ಎಂದು ಐದು ವರ್ಷದ ಹಿಂದೆ ಕೊಲೆಗೀಡಾದ ಬಿಜೆಪಿ ಮುಖಂಡ ಅನ್ವರ್ ಸಹೋದರ ಕಬೀರ್ ಜಿಲ್ಲಾಧಿಕಾರಿಗೆ ಮನವಿ ಮಾಡಿ ರಾಷ್ಟ್ರಪತಿಗೂ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಡಾ.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಡಾ. ಎಂ‌.ಸಿ ಸುಧಾಕರ್

ನಮ್ಮ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿ-ಪ್ರತಿಭಟನೆ ನಡೆಸಿ ಉಪವಾಸ ಸತ್ಯಾಗ್ರಹ ನಡೆಸಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಅಂದಿನ ಬಿಜೆಪಿ ಸರ್ಕಾರ ಪ್ರಕರಣವನ್ನ ಸಿಐಡಿ ತನಿಖೆಗೆ ನೀಡಿತ್ತು.

ಸದ್ಯ ಸಿಐಡಿಯವರು ತನಿಖೆ ನಡೆಸುತ್ತಿದ್ದರು ಆರೋಪಿಗಳ ಸುಳಿವು ಈವರೆಗೂ ಪತ್ತೆಯಾಗಿಲ್ಲ ಎಂದು ಆರೋಪಿಸಿದ್ದಾರೆ. ಪದೇ-ಪದೇ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ ಮಾಡುತ್ತಿರುವುದು ಕೂಡ ತನಿಖೆ ವಿಳಂಬವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಸಿದ್ಧತೆ- ಮಾಜಿ ಪಶುಸಂಗೋಪನಾ ಸಚಿವ

ಹಿಂದೆ ನಮ್ಮದೇ ಸರಕಾರ ಅಧಿಕಾರದಲ್ಲಿತ್ತು. ಈ ವೇಳೆ ಅಂದಿನ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರು ಪ್ರಕರಣದ ತನಿಖೆಯನ್ನ ಸರಕಾರ ಸಿಐಡಿಗೆ ಒಪ್ಪಿಸಿದೆ. ನಮ್ಮದೇ ಸರಕಾರ ಇದ್ದರೂ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯದಿರುವುದರ ಬಗ್ಗೆ ಬೇಸರವಿದೆ ಎಂದು ಬಿಜೆಪಿ ಸರ್ಕಾರದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News