Maharashtra : ರಾಯಗಢದಲ್ಲಿ ಭಾರಿ ಶಸ್ತ್ರಾಸ್ತ್ರಗಳ ತುಂಬಿದ ಶಂಕಿತ ದೋಣಿ ಪತ್ತೆ, ಹೈ ಅಲರ್ಟ್!

ಪೊಲೀಸರು ರಾಯಗಢದಲ್ಲಿ ಮೊದಲನೆಯ ದೋಣಿಯನ್ನು ಶ್ರೀವರ್ಧನ್ ತೆಹಸಿಲ್‌ನ ಹರಿಹರೇಶ್ವರ ಬೀಚ್‌ನಲ್ಲಿ ಮತ್ತು ಎರಡನೆಯದು ಭರನ್ ಖೋಲ್ ದಡದಲ್ಲಿ ಪತ್ತೆಯಾಗಿವೆ.

Written by - Channabasava A Kashinakunti | Last Updated : Aug 18, 2022, 04:39 PM IST
  • ರಾಯಗಡ ಜಿಲ್ಲೆಯಲ್ಲಿ ಭಯೋತ್ಪಾದನೆಯ ಭಾರಿ ಸಂಚು
  • ಜಿಲ್ಲೆಯಲ್ಲಿ ಎರಡು ಅನುಮಾನಾಸ್ಪದ ದೋಣಿಗಳು ಪತ್ತೆ
  • ದೋಣಿಗಳಲ್ಲಿ ಎಕೆ-47 ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಪತ್ತೆ
Maharashtra : ರಾಯಗಢದಲ್ಲಿ ಭಾರಿ ಶಸ್ತ್ರಾಸ್ತ್ರಗಳ ತುಂಬಿದ ಶಂಕಿತ ದೋಣಿ ಪತ್ತೆ, ಹೈ ಅಲರ್ಟ್! title=

Suspected boat was found in Raigad : ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಭಯೋತ್ಪಾದನೆಯ ಭಾರಿ ಸಂಚು ಬಯಲಾಗಿದೆ. ಜಿಲ್ಲೆಯಲ್ಲಿ ಎರಡು ಅನುಮಾನಾಸ್ಪದ ದೋಣಿಗಳು ಪತ್ತೆಯಾಗಿದ್ದು, ದೋಣಿಗಳಲ್ಲಿ ಎಕೆ-47 ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಸಧ್ಯ ಈ ದೋಣಿಗಳನ್ನು ಪೊಲೀಸರು ವಶಪಡಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. 

ಪೊಲೀಸರು ರಾಯಗಢದಲ್ಲಿ ಮೊದಲನೆಯ ದೋಣಿಯನ್ನು ಶ್ರೀವರ್ಧನ್ ತೆಹಸಿಲ್‌ನ ಹರಿಹರೇಶ್ವರ ಬೀಚ್‌ನಲ್ಲಿ ಮತ್ತು ಎರಡನೆಯದು ಭರನ್ ಖೋಲ್ ದಡದಲ್ಲಿ ಪತ್ತೆಯಾಗಿವೆ.

ಇದನ್ನೂ ಓದಿ : ಸೀರೆಯುಟ್ಟು ಫುಟ್‌ಬಾಲ್‌ ಆಡಿದ ಸಂಸದೆ, ವಿಡಿಯೋ ವೈರಲ್‌

ಹರಿಹರೇಶ್ವರ ಕಡಲತೀರದಲ್ಲಿ ಪತ್ತೆಯಾದ ಬೋಟ್‌ನಲ್ಲಿ 3 ಎಕೆ-47 ಪತ್ತೆಯಾಗಿದ್ದು, ಇನ್ನೊಂದು ಬೋಟ್‌ನಲ್ಲಿ ಲೈಫ್ ಜಾಕೆಟ್‌ಗಳು ಮತ್ತು ಕೆಲವು ದಾಖಲೆಗಳು ಪತ್ತೆಯಾಗಿವೆ. ಹೀಗಾಗಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಯಾವುದೇ ಭಾರಿ ಘಟನೆಯನ್ನು ನಡೆಸಲು ಭಯೋತ್ಪಾದಕರು ಈ ಶಸ್ತ್ರಾಸ್ತ್ರಗಳನ್ನು ಸಮುದ್ರದ ಮೂಲಕ ರಾಯಗಡಕ್ಕೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬೋಟ್ ಗಳ ಮಾಲೀಕರು ಯಾರು, ಇಲ್ಲಿಗೆ ಹೇಗೆ ತಲುಪಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಭದ್ರತಾ ಕಂಪನಿಯೊಂದಿಗೆ ಸಂಪರ್ಕ?

ಮೂಲಗಳಿಂದ ಬಂದಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಇದು ಒಮಾನ್ ದೇಶದ ಭದ್ರತಾ ಬೋಟ್ ಆಗಿದ್ದು, ರಾಯಗಢ ಕರಾವಳಿಗೆ ಬಂದಿದೆ. ಇದೀಗ ನಿರುಪಯುಕ್ತವಾಗಿರುವ ಈ ಬೋಟ್‌ನಿಂದ ಎಕೆ-47 ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಈ ಬಗ್ಗೆ ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕೇಂದ್ರೀಯ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಕೂಡ ತನಿಖೆಯ ಮೇಲೆ ನಿಗಾ ಇರಿಸಿದ್ದಾರೆ. ಮಾಹಿತಿಯ ಪ್ರಕಾರ, ಈ ಬೋಟ್ ಬಹುರಾಷ್ಟ್ರೀಯ ಕಂಪನಿಯೊಂದಿಗೆ ಸಂಪರ್ಕ ಹೊಂದಿದೆ, ಇದನ್ನು ಕಂಪನಿಯು ಜೀ ನ್ಯೂಸ್ ಜೊತೆಗಿನ ವಿಶೇಷ ಸಂಭಾಷಣೆಯಲ್ಲಿ ಖಚಿತಪಡಿಸಿದೆ. ಆದರೆ, ಮಹಾರಾಷ್ಟ್ರ ಎಟಿಎಸ್ ಘಟನಾ ಸ್ಥಳಕ್ಕೆ ತಲುಪಿದ್ದು, ದೋಣಿಯನ್ನು ತನಿಖೆ ನಡೆಸಲಾಗುತ್ತಿದೆ.

Raigad gun scare: AK 47 rifles, bullets found on boat near Harihareshwar  beach; Maharashtra put on high alert

ಈ ಸಂಸ್ಥೆಯು ಕಡಲ ಭದ್ರತೆಗೆ ಸಂಬಂಧಿಸಿದೆ ಎಂದು ಕಂಪನಿಯು ತಿಳಿಸಿದೆ ಮತ್ತು ಈ ಒಂದು ದೋಣಿ ಸಮುದ್ರದಲ್ಲಿ ಉರುಳಿಬಿದ್ದಿದೆ ಅದನ್ನು ರಾಯಗಢದಲ್ಲಿ ವಶಪಡಿಸಿಕೊಳ್ಳಲಾಗಿದೆ. ಕಂಪನಿಯ ಹಿರಿಯ ಅಧಿಕಾರಿಗಳು ಆಡಳಿತದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಗುರುವಾರ ಸಂಜೆಯೊಳಗೆ ಈ ಬಗ್ಗೆ ಸದನಕ್ಕೆ ತಿಳಿಸುವಂತೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಗೃಹ ಸಚಿವರಿಗೆ ಸೂಚಿಸಿದ್ದಾರೆ. ರಾಯಗಡ ಜಿಲ್ಲಾ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ : Viral Video : ತನ್ನ ಮಾಲಿಕನ ಮಾತಿಗೆ ವಿಚಿತ್ರ ಸದ್ದು ಮಾಡುತ್ತಾ ಸ್ಪಂದಿಸುವ ಆನೆ

ಸಮುದ್ರದ ಮೂಲಕ ಒಳನುಸುಳುವಿಕೆ ಅಪಾಯ

ದೇಶದ ಕಡಲ ಗಡಿಯ ಮೂಲಕ ಉಗ್ರರು ಒಳನುಸುಳುವ ಅಪಾಯ ಯಾವಾಗಲೂ ಇರುತ್ತದೆ. 26/11ರ ಮುಂಬೈ ದಾಳಿಯ ಸಂದರ್ಭದಲ್ಲೂ ಪಾಕ್ ಭಯೋತ್ಪಾದಕರು ಸಮುದ್ರದ ಮೂಲಕ ಭಾರತದೊಳಗೆ ನುಸುಳಿ ಮುಂಬೈನಲ್ಲಿ ಅತಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಿದ್ದರು. 2008 ರಲ್ಲಿ ನಡೆದ ಈ ದಾಳಿಯಲ್ಲಿ, ತಾಜ್ ಹೋಟೆಲ್ ಸೇರಿದಂತೆ ಮುಂಬೈನ ಜನನಿಬಿಡ ಪ್ರದೇಶಗಳಲ್ಲಿ ಭಯೋತ್ಪಾದಕರು ವ್ಯವಸ್ಥಿತ ರೀತಿಯಲ್ಲಿ ದಾಳಿ ನಡೆಸಿದ್ದರು. ಉಗ್ರರ ದಾಳಿಯಲ್ಲಿ 160 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿರುವಾಗ ಈ ಅನುಮಾನಾಸ್ಪದ ಬೋಟ್ ಪತ್ತೆಯಾದ ನಂತರ ಮಹಾರಾಷ್ಟ್ರದಿಂದ ದೆಹಲಿಯವರೆಗೂ ಸಂಚಲನ ಮೂಡಿಸಿದ್ದು, ರಾಜ್ಯ ಆಡಳಿತದಿಂದ ಕೇಂದ್ರ ತನಿಖಾ ಸಂಸ್ಥೆಯವರೆಗೂ ಎಚ್ಚೆತ್ತುಕೊಂಡಿದೆ. ಈಗ ಈ ವಿಷಯವನ್ನು ಕೂಲಂಕುಷವಾಗಿ ತನಿಖೆ ಆರಂಭವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News