Viral Video: JCB ತಂದು ಕ್ಷಣಾರ್ಧದಲ್ಲಿಯೇ ATM ಯಂತ್ರವನ್ನೇ ಬುಡಸಮೇತ ಕಿತ್ತುಕೊಂಡು ಹೋದ ಕಳ್ಳ!

Robbery Video - ಕಳ್ಳತನದ ಈ ಬೆಚ್ಚಿ ಬೀಳಿಸುವ ವಿಡಿಯೋದಲ್ಲಿ ಕಳ್ಳ ಜೆಸಿಬಿ ಬಳಸಿ ಎಟಿಎಂ ಯಂತ್ರವನ್ನೇ ಬುಡಸಮೇತ ಕಿತ್ತುಕೊಂಡು ಹೋಗಿರುವುದನ್ನು ನೀವು ಗಮನಿಸಬಹುದು.  

Written by - Nitin Tabib | Last Updated : Jul 14, 2022, 04:33 PM IST
  • ಕಳ್ಳತನಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಇಂಟರ್ನೆಟ್ ಮೇಲಿವೆ.
  • ಈ ವಿಡಿಯೋಗಳಲ್ಲಿ ಕಳ್ಳರು ಕಳ್ಳತನ ಮಾಡಲು ಬಳಸುವ ವಿಧಾನಗಳು ಸಾಮಾನ್ಯ ಜನರು ತಲೆಹಿಡಿದುಕೊಳ್ಳುವಂತಿವೆ.
  • ಕಳ್ಳತನದ ಇಂತಹುದೇ ವಿಡಿಯೋವೊಂದು ಇದೀಗ ಮುನ್ನೆಲೆಗೆ ಬಂದಿದ್ದು, ಅದನ್ನು ನೋಡು ನೀವೂ ಕೂಡ ಬೆಚ್ಚಿಬೀಳುವಿರಿ.
Viral Video: JCB ತಂದು ಕ್ಷಣಾರ್ಧದಲ್ಲಿಯೇ ATM ಯಂತ್ರವನ್ನೇ ಬುಡಸಮೇತ ಕಿತ್ತುಕೊಂಡು ಹೋದ ಕಳ್ಳ! title=
ATM Robbery

ATM Robbery Viral Video - ಕಳ್ಳತನಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ಇಂಟರ್ನೆಟ್ ಮೇಲಿವೆ. ಈ ವಿಡಿಯೋಗಳಲ್ಲಿ ಕಳ್ಳರು ಕಳ್ಳತನ ಮಾಡಲು ಬಳಸುವ ವಿಧಾನಗಳು ಸಾಮಾನ್ಯ ಜನರು ತಲೆಹಿಡಿದುಕೊಳ್ಳುವಂತಿವೆ. ಕಳ್ಳತನದ ಇಂತಹುದೇ ವಿಡಿಯೋವೊಂದು ಇದೀಗ ಮುನ್ನೆಲೆಗೆ ಬಂದಿದ್ದು, ಅದನ್ನು ನೋಡು ನೀವೂ ಕೂಡ ಬೆಚ್ಚಿಬೀಳುವಿರಿ. ಈ ವಿಡಿಯೋ ಎಟಿಎಂ ಕಳ್ಳತನಕ್ಕೆ ಸಂಬಂಧಿಸಿದೆ. ಈ ವಿಡಿಯೋದಲ್ಲಿ ಕಳ್ಳತನಕ್ಕಾಗಿ ಕಳ್ಳ ಅನುಸರಿಸಿದ ವಿಧಾನ ನೀವು ಹಿಂದೆಂದೂ ಕಂಡಿರಲಿಕ್ಕಿಲ್ಲ. ಇದುವರೆಗೆ ಒಂದು ಕೋಟಿಗೂ ಅಧಿಕ ಬಾರಿಗೆ ಈ ವಿಡಿಯೋ ವೀಕ್ಷಣೆಗೆ ಒಳಗಾಗಿದೆ ಮತ್ತು ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ ಬಂದಿವೆ. 

ಬುಡಸಮೇತ ಎಟಿಎಂ ಯಂತ್ರವನ್ನೇ ಕಿತ್ತುಕೊಂಡು ಹೋದ ಕಳ್ಳ
ಕಳ್ಳತನ ಮಾಡುವ ಉದ್ದೇಶದಿಂದ ಕಳ್ಳನೊಬ್ಬ ಎಟಿಎಂಗೆ ಬಂದಿದ್ದಾನೆ. ತನ್ನ ಮೊದಲ ಪ್ರಯತ್ನದಲ್ಲಿ ವಿಫಲನಾದ ಆತ ನಂತರ ಅನುಸರಿಸಿದ ವಿಧಾನ ಬೆಚ್ಚಿಬೀಳಿಸುವಂತಿದೆ. ಹೌದು, ತದನಂತರ ಎಟಿಎಂಗೆ ಜೆಸಿಬಿ ಯಂತ್ರವನ್ನೇ ತಂದ ಕಳ್ಳ, ಯಂತ್ರವನ್ನು ಬುಡಸಮೇತ ಕಿತ್ತುಕೊಂಡು ಹೋಗಿದ್ದಾನೆ. ಈ ಇಡೀ ಘಟನೆ ಎಟಿಎಂಗೆ ಹತ್ತಿರದಲ್ಲಿರುವ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ-Viral Video: ಲುಲು ಮಾಲ್‌ನಲ್ಲಿ ನಮಾಜ್ ವಿಡಿಯೋ ವೈರಲ್‌, ಹಿಂದೂ ಸಂಘಟನೆಗಳ ಪ್ರಶ್ನೆ

ಎಟಿಎಂನ ರಾಕ್ ಬಕೆಟ್ ಅನ್ನು ಕಳ್ಳ ಎಟಿಎಂ ಒಳಗೆ ನುಸುಳಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಅದು ಕೆಲವೇ ಸೆಕೆಂಡುಗಳಲ್ಲಿ ಎಟಿಎಂ ಯಂತ್ರವನ್ನು ಮುರಿದು ಅದರಲ್ಲಿರುವ ಕ್ಯಾಶ್ ಬಾಕ್ಸ್ ಅನ್ನು ತೆಗೆದುಕೊಂಡು ಹೋಗಿದೆ. ಕೆಲವೇ ಸೆಕೆಂಡುಗಳಲ್ಲಿ ಕಳ್ಳ ತನ್ನೀ ಕಳ್ಳತನದ ಘಟನೆಗೆ ಅಂತ್ಯ ಹೇಳಿದ್ದಾನೆ ಮತ್ತು ಅಲ್ಲಿಂದ ಕಣ್ಮರೆಯಾಗಿದ್ದಾನೆ. 

ಇದನ್ನೂ ಓದಿ-Viral Video: ಮಾವುತನ ಹೊತ್ತು 3 ಕಿಲೋ ಮೀಟರ್‌ ಈಜಿ ಗಂಗಾ ನದಿ ದಾಟಿದ ಆನೆ

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಳ್ಳತನ ನಡೆದ ವೇಳೆ ಎಟಿಎಂನಲ್ಲಿ 27 ಲಕ್ಷ ರೂ.ಕ್ಯಾಶ್ ಇತ್ತು ಎನ್ನಲಾಗಿದೆ. ಇನ್ಸ್ಟಾಗ್ರಾಮ್ ನ ghantaa ಹೆಸರಿನ ಖಾತೆಯ ಮೂಲಕ ಅಪ್ಲೋಡ್ ಮಾಡಲಾಗಿದೆ ಮತ್ತು ನೆಟಿಜನ್ ಗಳು ವಿಡಿಯೋ ಕುರಿತು ಸಾಕಷ್ಟು ಕಾಮೆಂಟ್ ಗಳನ್ನು ಕೂಡ ಮಾಡುತ್ತಿದ್ದಾರೆ. 

 
 
 
 

 
 
 
 
 
 
 
 
 
 
 

A post shared by memes comedy (@ghantaa)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News