Bangalore crime : ಪ್ರಿಯತಮನ ಜೊತೆ ಚಕ್ಕಂದವಾಡಲು ಗಂಡನ ಕೊಲೆ: ಪತ್ನಿ ಜೊತೆ ಲವ್ವರ್ ಅಂದರ್‌

Bangalore crime : ಎರಡು‌ ದಿನದ ಹಿಂದೆ ಯಲಹಂಕದಲ್ಲಿ ಮರ್ಮಾಂಗ ಕತ್ತರಿಸಿ ವ್ಯಕ್ತಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

Written by - VISHWANATH HARIHARA | Edited by - Chetana Devarmani | Last Updated : Oct 26, 2022, 11:08 AM IST
  • ಮರ್ಮಾಂಗ ಕತ್ತರಿಸಿ ವ್ಯಕ್ತಿ ಕೊಲೆಗೈದಿದ್ದ ಪ್ರಕರಣ
  • ಪ್ರಿಯತಮನ ಜೊತೆ ಚಕ್ಕಂದವಾಡಲು ಗಂಡನ ಕೊಲೆ
  • ಪತ್ನಿ ಜೊತೆ ಲವ್ವರ್ ಅಂದರ್‌
Bangalore crime : ಪ್ರಿಯತಮನ ಜೊತೆ ಚಕ್ಕಂದವಾಡಲು ಗಂಡನ ಕೊಲೆ: ಪತ್ನಿ ಜೊತೆ ಲವ್ವರ್ ಅಂದರ್‌ title=
ಕೊಲೆ

ಬೆಂಗಳೂರು: ಎರಡು‌ ದಿನದ ಹಿಂದೆ ಯಲಹಂಕದಲ್ಲಿ ಮರ್ಮಾಂಗ ಕತ್ತರಿಸಿ ವ್ಯಕ್ತಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾಗಿದ್ದ ಚಂದ್ರಶೇಖರ್ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯತಮ ಸುರೇಶ್ ಬಂಧಿತರು. ಕೊಲೆಯಾದ ಚಂದ್ರಶೇಖರ್ ಹಾಗೂ ಶ್ವೇತಾಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿರುತ್ತೆ. ಆದರೆ ವಯಸ್ಸಿನಲ್ಲಿ‌ ಶ್ವೇತಾಗಿಂತ‌ 16 ವರ್ಷ ದೊಡ್ಡವನಾಗಿದ್ದ. ಇತ್ತ ಶ್ವೇತಾ ಕಾಲೇಜು ಮೆಟ್ಟಿಲು ಹತ್ತಿ ಬಂದಿರುತ್ತಾಳೆ. ಅಕ್ಕನ ಮಗಳು ಎಂಬ ಕಾರಣಕ್ಕೆ ಶ್ವೇತಾಳನ್ನು ಬಲವಂತವಾಗಿ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದ ಮೇಲೆ ಕಾಲೇಜು ಗೆಳೆಯರೊಂದಿಗೆ ಹಾಗೂ ಕೆಲ ಸ್ನೇಹಿತರ ಜೊತೆ ಶ್ವೇತಾ ನಿರಂತರ ಸಂಪರ್ಕದಲ್ಲಿರುತ್ತಾಳೆ. ಇದೇ ವಿಷಯಕ್ಕೆ ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿರುತ್ತದೆ. ಹೀಗಾಗಿ ಕುಟುಂಬಸ್ಥರು ರಾಜಿಪಂಚಾಯಿತಿ ಮಾಡಿ ಆಂಧ್ರದ ಹಿಂದುಪುರದಿಂದ ಬೆಂಗಳೂರಿಗೆ ವಾಸಿಸಲು ಕಳುಹಿಸಿದ್ದರು. 

ಇದನ್ನೂ ಓದಿ : ಮಹಿಳೆಯ ನಗ್ನ ಫೋಟೊ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿ ಬಂಧನ

ನಾಲ್ಕು ತಿಂಗಳ ಹಿಂದೆ ಯಲಹಂಕದ ಕೊಂಡಪ್ಪ ಲೇಔಟ್​ಗೆ ಬಂದು ವಾಸವಾಗಿದ್ದರು.  ಆದರೆ ಶ್ವೇತಾ ಮಾತ್ರ ಪರಪುರುಷರ ಸಂಪರ್ಕ ಬಿಟ್ಟಿರಲ್ಲಿಲ್ಲ. ಹಿಂದುಪುರದ ಸುರೇಶ್ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಶ್ವೇತಾ ಬೆಂಗಳೂರಿಗೆ ಬಂದರೂ ಸಹ ಸುರೇಶ್ ಶ್ವೇತಾ ಬೆನ್ನುಬಿದ್ದಿದ್ದ. ಆಗಾಗ ಬೆಂಗಳೂರಿಗೆ ಬಂದು ಶ್ವೇತಾ ಜೊತೆ ಸುರೇಶ್ ದೈಹಿಕ ಸಂಪರ್ಕ ಬೆಳೆಸಿದ್ದ‌. ಈ ವಿಷಯ ಶ್ವೇತಾ ಪತಿ ಚಂದ್ರಶೇಖರ್ ಗೆ ಗೊತ್ತಾಗಿ ಮನೆಯಲ್ಲಿ ದೊಡ್ಡ ಜಗಳವಾಗಿತ್ತು. ಇದರಿಂದ ಕೋಪಗೊಂಡ ಶ್ವೇತಾ ತನ್ನ ಪ್ರಿಯಕರ ಸುರೇಶನಿಗೆ ಮನೆಯಲ್ಲಿ ಗಲಾಟೆಯಾಗಿದೆ ಎಂದಿದ್ದಳು. 

ಸುರೇಶ ನಿನ್ನ ಗಂಡ ಇದ್ರೆ ನಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ. ಅವನನ್ನು ಮುಗಿಸಿ ನಾವು ನೆಮ್ಮದಿಯಾಗಿರೋಣ ಎಂದಿದ್ದ.  ಇದಕ್ಕೆ ಶ್ವೇತಾ ಸಹ ಒಪ್ಪಿಗೆ ಕೊಟ್ಟು ಫ್ಲ್ಯಾನ್ ಮಾಡು ಎಂದಿದ್ದಳು. ಸುರೇಶ ಚಂದ್ರಶೇಖರನನ್ನು ಮುಗಿಸಬೇಕು ಅಂತಾ ಪಕ್ಕಾ ಫ್ಲ್ಯಾನ್ ಮಾಡಿಕೊಂಡು ಕಳೆದ 22 ತಾರೀಖು ಬೆಂಗಳೂರಿಗೆ ಬಂದಿದ್ದ. ಗಂಡ ಮನೆಯಲ್ಲಿದ್ದಾನೆ ಇದೇ ಸರಿಯಾದ ಸಮಯ. ಅವನನ್ನು ಮುಗಿಸಿಬಿಡು ಎಂದು ಶ್ವೇತಾ ಸುರೇಶನಿಗೆ ಕರೆ ಮಾಡಿದ್ದಳು. 

ಇದನ್ನೂ ಓದಿ : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿಷವಾದ ಜೀವ ಜಲ, ಕಲುಷಿತ ನೀರು ಸೇವಿಸಿ ಇಬ್ಬರು ಮೃತ

ಹೊಂಚು ಹಾಕಿ ಕೂತಿದ್ದ ಸುರೇಶ ನಿನ್ನ ಬಳಿ ಮಾತನಾಡಬೇಕು ಬಾ ಎಂದು ಚಂದ್ರಶೇಖರ್ ನನ್ನು ಮನೆಯ ಟೆರೇಸ್ ಗೆ ಕರೆದುಕೊಂಡು ಹೋಗಿ ಜಗಳ ತೆಗೆದಿದ್ದ. ಮಾತಿಗೆ ಮಾತು ಬೆಳೆದಾಗ ಪಕ್ಕದಲ್ಲಿದ್ದ ಕಟ್ಟಿಗೆಯಿಂದ ಚಂದ್ರಶೇಖರನ ತಲೆಗೆ ಸುರೇಶ ಹೊಡೆದಿದ್ದಾನೆ. ಹೊಡೆತದ ರಭಸಕ್ಕೆ ಚಂದ್ರಶೇಖರ್ ತೀವ್ರ ರಕ್ತಸ್ರಾವದಿಂದ ನೆಲಕ್ಕೆ ಬಿದ್ದಿದ್ದಾನೆ. ಇದೇ ವೇಳೆ ಚಂದ್ರಶೇಖರನನ್ನು ಮರ್ಮಾಂಗ ಕತ್ತರಿಸಿ ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದ.

ಕೊಲೆ ನಡೆದಾಗ ಪತ್ನಿ ಶ್ವೇತಾ ಮನೆಯಲ್ಲಿದ್ದರೂ ಸಹ ಏನೂ ಗೊತ್ತಿಲ್ಲ‌ ಎಂಬ ರೀತಿ ನಟಿಸಿದ್ದಳು. ಕುಟುಂಬಸ್ಥರು ಬಂದಾಗ ಗಂಡ ಮೃತಪಟ್ಟಿದ್ದಾನೆ ಎಂದು ಕಣ್ಣೀರು ಸುರಿಸಿ ನಾಟಕವಾಡಿದ್ದಳು. ಸದ್ಯ ಶ್ವೇತಾಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾಳೆ. ಸದ್ಯ ಕೊಲೆ ಆರೋಪಿ ಸುರೇಶ ಹಾಗೂ ಗಂಡನನ್ನು ಕೊಲ್ಲಲ್ಲು ಸಂಚು ರೂಪಿಸಿದ್ದ ಶ್ವೇತಾಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News