Buddha Purnima 2021: ಬುದ್ಧ ಪೂರ್ಣಿಮಾದ ಇತಿಹಾಸ ಮತ್ತು ಮಹತ್ವ

Last Updated : May 26, 2021, 06:41 AM IST
  • ಈ ದಿನವನ್ನು ವಿಶ್ವದಾದ್ಯಂತ ಬೌದ್ಧರು ಮತ್ತು ಹಿಂದೂಗಳು ಸ್ಮರಿಸುತ್ತಾರೆ ಮತ್ತು ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ, ಇಂಡೋನೇಷ್ಯಾ ದೇಶಗಳಲ್ಲಿ ಆಚರಿಸುತ್ತಾರೆ.
 Buddha Purnima 2021: ಬುದ್ಧ ಪೂರ್ಣಿಮಾದ ಇತಿಹಾಸ ಮತ್ತು ಮಹತ್ವ title=

ಬುದ್ಧ ಜಯಂತಿ ಅಥವಾ ಬುದ್ಧ ಪೂರ್ಣಿಮಾ ಗೌತಮ ಬುದ್ಧನ ಜನ್ಮ ಆಚರಣೆಯಾಗಿದ್ದು, ಈ ವರ್ಷ ಇದನ್ನು ಮೇ 26 ರಂದು ಆಚರಿಸಲಾಗುವುದು. ಅವರ ಜನ್ಮದಿನವನ್ನು ಬುದ್ಧ ಪೂರ್ಣಿಮಾ ಅಥವಾ ವೈಶಾಖಿ ಬುದ್ಧ ಪೂರ್ಣಿಮಾ ಅಥವಾ ವೆಸಾಕ್ ಎಂದೂ ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಬುದ್ಧ ಜಯಂತಿ ವೈಶಾಖ್ ತಿಂಗಳಲ್ಲಿ ಹುಣ್ಣಿಮೆಯ ದಿನದಂದು ಬರುತ್ತದೆ (ಇದು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ).

ಬುದ್ಧನ 2583 ನೇ ಜನ್ಮ ದಿನಾಚರಣೆ ಏಷ್ಯನ್ ಲೂನಿಸೋಲಾರ್ ಕ್ಯಾಲೆಂಡರ್ ಅನ್ನು ಆಧರಿಸಿದೆ, ಅದಕ್ಕಾಗಿಯೇ ಪ್ರತಿವರ್ಷ ದಿನಾಂಕಗಳು ಬದಲಾಗುತ್ತವೆ. ಭಗವಾನ್ ಬುದ್ಧ (Gautam Buddha)ರಾಜಕುಮಾರ ಸಿದ್ಧಾರ್ಥ ಗೌತಮನಾಗಿ ಕ್ರಿ.ಪೂ 563 ರಲ್ಲಿ ಲುಂಬಿನಿ (ಆಧುನಿಕ ದಿನ ನೇಪಾಳ) ದಲ್ಲಿ ಪೂರ್ಣಿಮಾ ತಿಥಿಯಲ್ಲಿ (ಹುಣ್ಣಿಮೆಯ ದಿನ) ಜನಿಸಿದನು. ಹಿಂದೂ ಧರ್ಮದಲ್ಲಿ ಬುದ್ಧನನ್ನು ವಿಷ್ಣುವಿನ ಒಂಬತ್ತನೇ ಅವತಾರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಗೌತಮ್ ಬುದ್ಧ ನೇಪಾಳದಲ್ಲಿ ಜನಿಸಿದ್ದನು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದ ಭಾರತ

ಈ ದಿನವನ್ನು ವಿಶ್ವದಾದ್ಯಂತ ಬೌದ್ಧರು ಮತ್ತು ಹಿಂದೂಗಳು ಸ್ಮರಿಸುತ್ತಾರೆ ಮತ್ತು ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ, ಇಂಡೋನೇಷ್ಯಾ  ದೇಶಗಳಲ್ಲಿ ಆಚರಿಸುತ್ತಾರೆ.ಶ್ರೀಲಂಕಾದಲ್ಲಿ ಇದನ್ನು ವೆಸಾಕ್ ಎಂದು ಕರೆಯಲಾಗುತ್ತದೆ, ಆದರೆ ಪ್ರತಿಯೊಂದು ದೇಶವೂ ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತದೆ.

ಮಹತ್ವ

ಬ್ರಿಟಿಷ್ ಲೈಬ್ರರಿ ಬ್ಲಾಗ್ ಪ್ರಕಾರ ಪ್ರತಿ ಹುಣ್ಣಿಮೆಯ ದಿನವು ಬೌದ್ಧರಿಗೆ ಶುಭ ದಿನವಾಗಿದೆ, ಆದರೆ ಎಲ್ಲಕ್ಕಿಂತ ಮುಖ್ಯವಾದುದು ಮೇ ತಿಂಗಳಲ್ಲಿ ಬರುವ ಹುಣ್ಣಿಮೆಯ ದಿನ, ಏಕೆಂದರೆ ಈ ಸಂದರ್ಭದಲ್ಲಿ ಗೌತಮ ಬುದ್ಧನ ಜೀವನದಲ್ಲಿ ಮೂರು ಪ್ರಮುಖ ಘಟನೆಗಳು ನಡೆದ ದಿನ. ಮೊದಲನೆಯದಾಗಿ, ರಾಜಕುಮಾರ ಸಿದ್ಧಾರ್ಥ ಮೇ ತಿಂಗಳ ಹುಣ್ಣಿಮೆಯ ದಿನದಂದು ಲುಂಬಿನಿಯಲ್ಲಿ ಜನಿಸಿದ್ದು, ಎರಡನೆಯದಾಗಿ, ಆರು ವರ್ಷಗಳ ಕಠಿಣ ತಪ್ಪಸ್ಸಿನಿಂದಾಗಿ ಅವರು ಬೋಧಿ ಮರದ ನೆರಳಿನಲ್ಲಿ ಜ್ಞಾನೋದಯವನ್ನು ಪಡೆದು ಮೇ ಹುಣ್ಣಿಮೆಯ ದಿನದಂದು ಬೋಧ್ ಗಯಾದಲ್ಲಿ ಗೌತಮ ಬುದ್ಧರಾಗಿದ್ದು, ಮೂರನೆಯದಾಗಿ, ಸತ್ಯವನ್ನು ಬೋಧಿಸಿದ 45 ವರ್ಷಗಳ ನಂತರ, ಅವರು ಎಂಭತ್ತು ವರ್ಷದವರಾಗಿದ್ದಾಗ, ಕುಸಿನಾರದಲ್ಲಿ ನಿಬ್ಬಾಣಕ್ಕೆ ಒಳಗಾಗಿದ್ದು. 

ಇದನ್ನೂ ಓದಿ: ಬುದ್ಧ ಪೂರ್ಣಿಮಾದ ಮಹತ್ವ ಮತ್ತು ವಿಶ್ವದೆಲ್ಲೆಡೆ ಬೆಳೆದು ಬಂದ ಬಗೆ

ಗೌತಮ ಬುದ್ಧನು ಧರ್ಮ (ಕರ್ತವ್ಯ), ಅಹಿಂಸೆ, ಸಾಮರಸ್ಯ ಮತ್ತು ದಯೆಯನ್ನು ಬೋಧಿಸಿದನು. ತನ್ನ 30 ನೇ ವಯಸ್ಸಿನಲ್ಲಿ ತನ್ನ ಲೌಕಿಕ ಆಸ್ತಿ ಮತ್ತು ರಾಜಕುಮಾರವನ್ನು ತೊರೆದು ಸತ್ಯವನ್ನು ಹುಡುಕುವ ಜೀವನ ಮೊರೆ ಹೋದನು

ಆಚರಣೆ

ಈ ದಿನ, ಬೌದ್ಧರು ಮತ್ತು ಪ್ರಪಂಚದಾದ್ಯಂತದ ಬೌದ್ಧ ಧರ್ಮದ ವಿಶ್ವಾಸಿಗಳು ಪ್ರಾರ್ಥನೆ ಸಲ್ಲಿಸುತ್ತಾರೆ, ಧ್ಯಾನಿಸುತ್ತಾರೆ, ಉಪವಾಸಗಳನ್ನು ಆಚರಿಸುತ್ತಾರೆ ಮತ್ತು ಬುದ್ಧನ ಬೋಧನೆಗಳನ್ನು ಚರ್ಚಿಸುತ್ತಾರೆ. ಪವಿತ್ರ ಗಂಗಾ ನದಿಯಲ್ಲಿ ಮಿಂದೇಳುವ ಸಂಪ್ರದಾಯವೂ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News