Holi 2021: ಹೋಳಿ ದಹನದ ವೇಳೆ ಈ ವಿಶೇಷ ಉಪಾಯಗಳನ್ನು ಮಾಡಿ ದೇವಿ ಲಕುಮಿಯ ಕೃಪೆಗೆ ಪಾತ್ರರಾಗಿ

Holi 2021: ಈ ವರ್ಷ ಮಾರ್ಚ್ 29 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹಿಂದೂ ಪಂಚಾಂಗದ ಪ್ರಕಾರ, ಹೋಳಿ ದಹನದ (Holi Dahan) ಮಾರನೆಯ ದಿನವೇ ಈ ಹಬ್ಬವನ್ನು ಆಚರಿಸಲಾಗುತ್ತದೆ. 

Written by - Nitin Tabib | Last Updated : Mar 23, 2021, 06:18 PM IST
  • ಈ ಬಾರಿ ಮಾರ್ಚ್ 29 ರಂದು ಹೋಳಿ ಹಬ್ಬ ಆಚರಿಸಲಾಗುತ್ತಿದೆ.
  • ಹೋಳಿ ಹಬ್ಬಕ್ಕೂ ಒಂದು ದಿನ ಮೊದಲು ಹೋಳಿ ದಹನ ಕಾರ್ಯಕ್ರಮ ಇರುತ್ತದೆ.
  • ಈ ದಿನ ದೇವಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಈ ಉಪಾಯಗಳನ್ನು ಮಾಡಿ.
Holi 2021: ಹೋಳಿ ದಹನದ ವೇಳೆ ಈ ವಿಶೇಷ ಉಪಾಯಗಳನ್ನು ಮಾಡಿ ದೇವಿ ಲಕುಮಿಯ ಕೃಪೆಗೆ ಪಾತ್ರರಾಗಿ title=
Holi 2021 (File Photo)

Holi 2021: ಈ ವರ್ಷ ಮಾರ್ಚ್ 29 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹಿಂದೂ ಪಂಚಾಂಗದ ಪ್ರಕಾರ, ಹೋಳಿ ದಹನದ (Holi Dahan) ಮಾರನೆಯ ದಿನವೇ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಶುಭ ಅವಸರದಂದು ಜನರು ಪರಸ್ಪರ ಬಣ್ಣ ಎರಚಿ ಸಂತಸ ವ್ಯಕ್ತಪಡಿಸುತ್ತಾರೆ. ಬಣ್ಣಗಳ ಹಬ್ಬ (Festival Of Colours) ಎಂದೇ ಕರೆಯಲಾಗುವ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಹಬ್ಬದ ದಿನ ಜನರು ಪರಸ್ಪರ ಬಣ್ಣ, ಅಬೀರ್ ಗುಲಾಲ್ ಇತ್ಯಾದಿ ಎರಚುತ್ತಾರೆ. ಡೋಲು ಬಾರಿಸುತ್ತಾರೆ. ಹೋಳಿ ಹಬ್ಬದ ಹಾಡುಗಳನ್ನು ಹೇಳುತ್ತಾರೆ. ಮನೆ-ಮನೆಗಳಿಗೆ ತೆರಳಿ ಪರಸ್ಪರ ಬಣ್ಣ ಹಚ್ಚಿ ಶುಭಕಾಮನೆಗಳನ್ನು ಹಂಚಿಕೊಳ್ಳುತ್ತಾರೆ. ಈ ದಿನ ಜನ ತಮ್ಮ ಹಿಂದಿನ ವೈಷಮ್ಯ ಮರೆತು ಆಲಿಂಗನ ಮಾಡಿಕೊಳ್ಳುತ್ತಾರೆ ಹಾಗೂ ಮತ್ತೆ ತಮ್ಮ ಸ್ನೇಹಕ್ಕೆ ಮರುಜೀವ ನೀಡುತ್ತಾರೆ. ಪರಸ್ಪರ ಬಣ್ಣ ಹಚ್ಚುವ ಕೆಲಸ ಹಾಗೂ ಹಾಡುಗಳನ್ನು ಹೇಳುವ ಕಾರ್ಯಕ್ರಮ ಮಧ್ಯಾಹ್ನದವರೆಗೆ ನಡೆಯುತ್ತದೆ. ಬಳಿಕ ಸ್ನಾನ ಮಾಡಿ, ಸಿಹಿಯೂಟ ಮಾಡಿ, ಸ್ವಲ್ಪಕಾಲ ವಿಶ್ರಮಿಸಿ ಸಾಯಂಕಾಲದ ಹೊತ್ತು ಪರಸ್ಪರರ ಮನೆಗೆ ಭೇಟಿ ನೀಡುತ್ತಾರೆ. ಪರಸ್ಪರ ಶುಭ ಹಾರೈಸಿ ಸಿಹಿ ಹಂಚುತ್ತಾರೆ. ಇಂದಿನ ದಿನ ನೀವು ಕೆಲ ವಿಶೇಷ ಉಪಾಯಗಳನ್ನು (Holi 2021 Upay) ಮಾಡುವ ಮೂಲಕ ದೇವಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು. 

- ಧನ ಪ್ರಾಪ್ತಿಗಾಗಿ ಹೋಲಿ ದಹನ ಕಾರ್ಯಕ್ರಮದ ವೇಳೆ ಅಗ್ನಿಗೆ ಪ್ರದಕ್ಷಿಣೆ ಹಾಕುತ್ತಾ ಅಗ್ನಿಯಲ್ಲಿ ಬೆಳೆ, ಮಟಾರ್, ಗೋಧಿ ಅರ್ಪಿಸಿ. ಇದು ಧನಪ್ರಾಪ್ತಿಯ ವಿಶೇಷ ಉಪಾಯವಾಗಿದೆ. ಇದಲ್ಲದೆ ಹೋಳಿ ಹಬ್ಬದ ದಿನ ರಾತ್ರಿ ಅಶ್ವತ್ಥ ಮರದ ಕೆಳಗೆ ತುಪ್ಪದ ದೀಪ ಉರಿಸಿ ಮರಕ್ಕೆ ಏಳು ಪ್ರದಕ್ಷಿಣೆ ಹಾಕಿ. ಹಣಕಾಸಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ಇದರಿಂದ ನಿವಾರಣೆಯಾಗುತ್ತವೆ.

- ಆರ್ಥಿಕ ಸಮಸ್ಯೆಯಿಂದ ಮುಕ್ತಿಪಡೆಯಲು ಹೊಲಿದಹನದ ರಾತ್ರಿ 21 ಗೋಮತಿ ಚಕ್ರಗಳನ್ನು ಶಿವಲಿಂಗದ ಮೇಲೆ ಅರ್ಪಿಸಿ. ಬಳಿಕ ಬೆಳಗ್ಗೆ ಅವುಗಳನ್ನು ತೆಗೆದು ಮನೆಯ ತಿಜೋರಿ ಅಥವಾ ಅಂಗಡಿಯಲ್ಲಿಡಿ.

- ಸುಖ-ಸಮೃದ್ಧಿ ಪ್ರಾಪ್ತಿಗಾಗಿ ಹೋಳಿ ದಹನದ ವೇಳೆ ಮನೆಯ ಮುಖ್ಯಸ್ಥ ಹೋಳಿಯ ಅಗ್ನಿಯಲ್ಲಿ ಒಂದು ಲವಂಗದ ಕುಡಿ, ಬತ್ತಾಸ ಹಾಗೂ ವಿಳ್ಯದ ಎಲೆಯನ್ನು ಅಗ್ನಿಗೆ ಅರ್ಪಿಸಬೇಕು. ಬಳಿಕ ಅಗ್ನಿಯ ಮೂರು ಪ್ರದಕ್ಷಿಣೆಯನ್ನು ಹಾಕುತ್ತ ಅಗ್ನಿಗೆ ಒಣ ಕೊಬ್ಬರಿ ತುಂಡುಗಳನ್ನು ಆಹುತಿಯಾಗಿ ಅರ್ಪಿಸಬೇಕು. 

ಇದನ್ನೂ ಓದಿ-Holi 2021: ಈ ವರ್ಷ ಹೋಳಿಗೆ ನೈಸರ್ಗಿಕ ಬಣ್ಣಗಳನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಿ

- ಆದಾಯ ಹೆಚ್ಚಳಕ್ಕೆ ಹೋಳಿ ದಹನದ ಬಳಿಕ ಸ್ವಲ್ಪ ಬೂದಿಯನ್ನು ಕಾಗದದಲ್ಲಿಟ್ಟು ಮನೆಗೆ ತರಬೇಕು. ಇದನ್ನು ನೀವು ಭಸ್ಮದ ರೂಪದಲ್ಲಿ ಹಣೆಗೆ ಹಚ್ಚಿಕೂಳ್ಳಬಹುದು. ಇದರಿಂದ ಆದಾಯ ಸುಧಾರಣೆಯಾಗಲಿದೆ.

ಇದನ್ನೂ ಓದಿ-Holi 2021: ಹೋಳಿ ಹಬ್ಬದ ದಿನ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆದರೆ?

- ದೇವಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ಹೋಳಿ ದಹನದ ವೇಳೆ ಸಾಸಿವೆಯ ಕೆಲ ಕಾಳುಗಳನ್ನು ಅಗ್ನಿಗೆ ಅರ್ಪಿಸಿ,  ದೇವಿ ಲಕ್ಷ್ಮಿಯನ್ನು (Goddess Lakshmi) ಸ್ಮರಿಸಿ . ಇದರಿಂದ ದೇವಿ ಲಕ್ಷ್ಮಿಯ ವಿಶೇಷ ಆಶೀರ್ವಾದ ನಿಮಗೆ ಲಭಿಸುತ್ತದೆ.

ಇದನ್ನೂ ಓದಿ-Motivational Thoughts In Kannada:ದೇವಿ ಲಕುಮಿಯ ಆಶೀರ್ವಾದ ಪಡೆಯಬೇಕಾದರೆ ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News