ನವದೆಹಲಿ: ವಾರದ ಪ್ರತಿ ದಿನವು ತನ್ನದೇ ಆದ ವಿಭಿನ್ನ ಮಹತ್ವವನ್ನು ಹೊಂದಿದೆ. ವಾರದ ಏಳು ದಿನಗಳನ್ನು ಬೇರೆ ಯಾವುದಾದರೂ ದೇವರಿಗೆ ಸಮರ್ಪಿಸಲಾಗಿದೆ . ಅದೇ ರೀತಿ, ವಾರದ ಏಳು ದಿನಗಳಲ್ಲಿ ವಿವಿಧ ಬಣ್ಣಗಳ ಬಟ್ಟೆಗಳನ್ನು ಧರಿಸಬೇಕು ಎಂದು ಸಹ ಹೇಳಲಾಗುತ್ತದೆ. ವಾರದ ಯಾವ ದಿನದಂದು ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕೆಂದು ನಾವು ನಿಮಗೆ ಹೇಳುತ್ತಿದ್ದೇವೆ.
- ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸೋಮವಾರವನ್ನು ಶಿವನ ದಿನವೆಂದು ಪರಿಗಣಿಸಲಾಗುತ್ತದೆ. ಸೋಮವಾರ ಕೂಡ ಚಂದ್ರ ದೇವ್ ದಿನ. ಶಿವನಿಗೆ ಬಿಳಿ ಹೂವುಗಳನ್ನು ಅರ್ಪಿಸಲಾಗುತ್ತದೆ. ಈ ದಿನ ಬಿಳಿ ಬಟ್ಟೆಗಳನ್ನು ಧರಿಸಬೇಕು ಎಂದು ನಂಬಲಾಗಿದೆ. ಬೂದು ಅಥವಾ ತಿಳಿ ನೀಲಿ ಬಟ್ಟೆಗಳನ್ನು ಧರಿಸುವುದೂ ಶುಭ.
ಇದನ್ನು ಓದಿ- ಜಪಮಾಲೆಯಿಂದಲೂ ಕೂಡ ಪೂರ್ಣಗೊಳ್ಳುತ್ತವೆ ಮನೋಕಾಮನೆ, ಗೃಹದೋಷಗಳು ... ಹೇಗೆ?
- ಮಂಗಳವಾರ ಕೆಂಪು ಬಟ್ಟೆಗಳನ್ನು ಧರಿಸಿ. ಮಂಗಳವಾರ ಆಂಜನೇಯನ ದಿನ . ಆಂಜನೇಯ ಸ್ವಾಮಿ ಕೆಂಪು ಬಣ್ಣವನ್ನು ತುಂಬಾ ಇಷ್ಟಪಡುತ್ತಾರೆ.
- ಬುಧವಾರ ಗಣೇಶನ ದಿನ ಎಂದು ಪರಿಗಣಿಸಲಾಗಿದೆ. ಗಣೇಶನಿಗೆ ಕರಿಕೆ ತುಂಬಾ ಇಷ್ಟ, ಆದ್ದರಿಂದ ಬುಧವಾರ ಹಸಿರು ಬಟ್ಟೆ ಧರಿಸುವುದು ಫಲಪ್ರದವಾಗಿದೆ.
- ಗುರುವಾರ ವಿಷ್ಣುವಿಗೆ ಅರ್ಪಿತವಾಗಿದೆ. ಹಳದಿ ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಈ ದಿನ ಧರಿಸಬೇಕು.
ಇದನ್ನು ಓದಿ-ಮನೆಯಿಂದ ದಾರಿದ್ರ್ಯ ತೊಲಗಿಸಬೇಕೇ? ನೀರಿಗೆ ಸಂಬಂಧಿಸಿದ ಈ ಉಪಾಯ ಮಾಡಿ ನೋಡಿ
- ಆದಿಶಕ್ತಿಯ ಪ್ರತಿಯೊಂದು ರೂಪಕ್ಕೂ ಶುಕ್ರವಾರ ಅರ್ಪಿತವಾಗಿದೆ. ಈ ದಿನ, ಗಾಢ ಕೆಂಪು ಅಥವಾ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ದೇವಿಯ ಅನುಗ್ರಹ ನಿಮ್ಮ ಮೇಲಾಗುತ್ತದೆ.
- ಶನಿವಾರ ಶನಿದೇವನ ದಿನ, ಈ ದಿನ ಕಪ್ಪು ಬಟ್ಟೆಗಳನ್ನು ಧರಿಸಬೇಕು. ಶನಿದೇವ ಗಾಢವಾದ ಬಣ್ಣಗಳನ್ನು ಪ್ರೀತಿಸುತ್ತಾನೆ. ಈ ದಿನ ಕಪ್ಪು, ನೀಲಿ ಅಥವಾ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಿ.
- ನೀವು ಭಾನುವಾರ ಹೊಳಪುಳ್ಳ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಹಳದಿ ಬಣ್ಣದ ಬಟ್ಟೆಗಳು ವಿಶೇಷವಾಗಿ ಧರಿಸಿ. ಎಕೆಂದರ ಭಾನುವಾರ ಸೂರ್ಯದೇವನಿಗೆ ಸಮರ್ಪಿತವಾದ ದಿನ.