ಕಂಕಣ ಬಲ ಕೂಡಿ ಬರಲು ತಡವಾಗುತ್ತಿದ್ದರೆ, ಈ ಗ್ರಹವನ್ನು ಬಲಪಡಿಸುವುದು ಅಗತ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ನಮ್ಮ ಜೀವನದ ಮೇಲೆ ಗಾಢ  ಪ್ರಭಾವ ಬೀರುತ್ತವೆ ಎಂದು ಹೇಳಲಾಗುತ್ತದೆ. ಗ್ರಹಗಳು ನಮ್ಮ ಜೀವನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಪೂರ್ಣಗೊಳಿಸುವುದರ ಮೇಲೂ ಪ್ರಭಾವ ಬೀರುತ್ತವೆ.

Updated: Aug 14, 2020 , 10:07 PM IST
ಕಂಕಣ ಬಲ ಕೂಡಿ ಬರಲು ತಡವಾಗುತ್ತಿದ್ದರೆ, ಈ ಗ್ರಹವನ್ನು ಬಲಪಡಿಸುವುದು ಅಗತ್ಯ

ನವದೆಹಲಿ: ಮದುವೆಗೆ ಬಂದು ನಿಂತ ತಮ್ಮ ಮಕ್ಕಳ ಚಿಂತೆ ತಂದೆ-ತಾಯಿಯರಿಗೆ ಹೆಚ್ಚಾಗಿರುತ್ತದೆ . ಸೂಕ್ತ ವರ ಅಥವಾ ಅರ್ಹ ವಧುವಿನ ಕೊರತೆ ಮುಂತಾದವುಗಳು ವಿವಾಹ ವಿಳಂಬಕ್ಕೆ ಕಾರಣವಾಗುತ್ತವೆ. ಜ್ಯೋತಿಷ್ಯಶಾಸ್ತ್ರದಲ್ಲೂ, ಮದುವೆ ವಿಳಂಬಕ್ಕೆ ಅನೇಕ ಕಾರಣಗಳನ್ನು ಸೂಚಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಿವಾಹ ವಿಳಂಬವಾಗಲು ಕಾರಣಗಳು ಯಾವುವು ಮತ್ತುಬೇಗ ಕಂಕಣಬಲ  ಖಚಿತಪಡಿಸಿಕೊಳ್ಳಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವಿವಿಧ ಗ್ರಹಗಳು ನಮ್ಮ ಜೀವನದ ಮೇಲೆ ಗಾಢ ಪ್ರಭಾವ ಬೀರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವಿವಾಹಕ್ಕಾಗಿ ನಿಮ್ಮ ಜಾತಕದಲ್ಲಿ ಗುರುಗ್ರಹ ಬಲಿಷ್ಠವಾಗಿರಬೇಕು ಎಂದು ಹೇಳಲಾಗುತ್ತದೆ.

ವಿವಾಹದ ಯೋಗ
ಗುರು ನಿಮ್ಮ ಜಾತಕದ ಐದನೇ ಮನೆಯಲ್ಲಿ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದರೆ, ವಿವಾಹಕ್ಕೆ ಬಲವಾದ ಯೋಗವಿದೆ ಎಂದರ್ಥ. ಯಾವುದೇ ಒಂದು ಜಾತಕದ ಕುಂಡಲಿಯಲ್ಲಿ ಒಂದು ವರ್ಷದ ಅವಧಿಗಾಗಿ ಗುರು ಪಂಚಮೇಶ ಭಾವದ ಜೊತೆಗೆ ಏಕಾದಶ ಭಾವದಲ್ಲಿ ಕುಳಿತುಕೊಂಡರೆ ಒಂದು ವರ್ಷದಲ್ಲಿ ವಿವಾಹ ನೆರವೇರುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗುತ್ತದೆ. ಗುರುಗ್ರಹದ ಜೊತೆಗೆ ಶುಕ್ರ, ಚಂದ್ರ ಹಾಗೂ ಬುಧ ಗ್ರಹಗಳೂ ಕೂಡ ವಿವಾಯ ಯೋಗದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ.

ಈ ಯೋಗಗಳನ್ನು ವಿವಾಹಕ್ಕೆ ಅಶುಭ ಎನ್ನಲಾಗುತ್ತದೆ
- ಒಂದು ವೇಳೆ ಯಾವುದೇ ವ್ಯಕ್ತಿಯ ಕುಂಡಲಿಯ ಪಂಚಮ ಭಾವದಲ್ಲಿ ಗುರು ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದ್ದರೆ ವಿವಾಹ ಯೋಗ ಸೃಷ್ಟಿಯಾಗುತ್ತಿದ್ದರೂ ಕೂಡ, ಏಕಾದಶ ಭಾವದಲ್ಲಿ ಒಂದು ವೇಳೆ ರಾಹು ಬಂದು ವಿರಾಜಮಾನನಾದರೆ, ಇದರಿಂದ ನಿರ್ಮಾಣಗೊಳ್ಳುವ ಯೋಗ ಶುಭ ಎಂದು ಪರಿಗಣಿಸಲಾಗುವುದಿಲ್ಲ.

- ಗುರುವಿನ ಪಂಚಮ ಸ್ಥಾನದಲ್ಲಿ ಒಂದು ವೇಳೆ ಶನಿ, ರಾಹು ಹಾಗೂ ಕೇತುಗಳು ಬಂದು ವಿರಾಜಮಾನರಾದರೆ, ಇದು ವಿವಾಹದಲ್ಲಿ ಅಡೆತಡೆ ಉಂಟುಮಾಡುತ್ತದೆ.
- ವಧುವಿನ ಕುಂಡಲಿಯಲ್ಲಿಒಂದು ವೇಳೆ ಗುರು ದುರ್ಬಲನಾಗಿದ್ದರೆ, ಕಂಕಣ ಬಲ ಕೂಡಿ ಬರಲು ವಿಳಂಬವಾಗುತ್ತದೆ.

ಗುರುವಾರ ಈ ಉಪಾಯಗಳನ್ನು ಮಾಡಿ
- ಉಪವಾಸ ಮಾಡಿ ಬಾಳೆ ಗಿಡವನ್ನು ಪೂಜಿಸಿ.
- ಹಸುವಿಗೆ  ಹಸಿರು ಮೇವನ್ನು ಅರ್ಪಿಸಿ
- ಹಳದಿ ಬಣ್ಣದ ಆಹಾರ ಪದಾರ್ಥಗಳನ್ನು ಬಡವರಿಗೆ ದಾನ ಮಾಡಿ
- ಹಳದಿ ಬಟ್ಟೆಗಳನ್ನು ಧರಿಸಿ.

ಈ ಉಪಾಯವನ್ನು ಕೂಡ ಮಾಡಿ ನೋಡಿ
- ಯಾವುದೇ ಒಂದು ಕನ್ಯೆಯ ವಿವಾಹದಲ್ಲಿ ಅಡೆತಡೆಗಳು ಬರುತ್ತಿದ್ದರೆ, ಸೋಮವಾರ ಶಿವಲಿಂಗಕ್ಕೆ ಕಚ್ಚಾ ಹಾಲನ್ನು ಅರ್ಪಿಸಿ.

- ದೇವಾಧಿದೇವ ಶಿವ ಹಾಗೂ ಮಾತೆ ಪಾರ್ವತಿಯ ಪೂಜೆ ನೆರವೇರಿಸಿದರೆ ವಿವಾಹ ಕಾರ್ಯ ಶೀಘ್ರದಲ್ಲಿಯೇ ಸಂಪನ್ನಗೊಳ್ಳುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.