ಬಾನಂಗಳದಲ್ಲಿಂದು ತೇಲಾಡಲಿವೆ ಲೋಹದ ಹಕ್ಕಿಗಳು

ಬನ್ನಿ ಮಂಟಪ ಮೈದಾನದಲ್ಲಿ ವೈಮಾನಿಕ ಪ್ರದರ್ಶನ

Last Updated : Sep 29, 2017, 05:11 PM IST
ಬಾನಂಗಳದಲ್ಲಿಂದು ತೇಲಾಡಲಿವೆ ಲೋಹದ ಹಕ್ಕಿಗಳು title=
Pic: Twittert

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಇಂದು ವೈಮಾನಿಕ ಪ್ರದರ್ಶನ ಬನ್ನಿಮಂಟಪದಲ್ಲಿ ನಡೆಯಲಿದೆ. ಲೋಹದ ಹಕ್ಕಿಗಳು ಬಾನಂಗಳದಲ್ಲಿ ಎಲ್ಲರಿಗೂ ಮನರಂಜನೆ ನೀಡಲಿವೆ.

ವಾಯುಸೇನೆಯ ಎಎಲ್ಎಚ್ ಹೆಲಿಕಾಪ್ಟರ್, ಎಂಐ 17 ಹಾಗೂ ಎಂಐ17 ವಿ5 ಹೆಲಿಕಾಪ್ಟರ್ ಗಳು ಆಕಾಶದಲ್ಲಿ ಹಾರಾಡುವುದರ ಮೂಲಕ ಎಲ್ಲರನ್ನೂ ರಂಜಿಸಲಿದ್ದಾರೆ. ವಾಯು ಪಡೆಯ ಯುದ್ಧ ವಿಮಾನಗಳು ಯುದ್ಧ ಸಂದರ್ಭದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ವೈಮಾನಿಕ ಪ್ರದರ್ಶನದಲ್ಲಿ ತೋರಿಸಲಾಗುವುದು. 

ಅಲ್ಲದೆ ಪ್ಯಾರಾಚೂಟ್ ಸಹಾಯದಿಂದ ಕೆಳಕ್ಕೆ ಜಿಗಿಯುವ ಆಕಾಶ ಕಾಯನ (ಸ್ಕೈ ಡೈವಿಂಗ್) ಏರ್ ಶೋ ನ ವಿಶೇಷವಾಗಿದೆ.

Trending News