ಐದು ಭಾಷೆಗಳಲ್ಲಿ ಬರಲಿದೆ ʼ1990sʼ ಪ್ರೇಮಕಥೆ: ಏಕಕಾಲಕ್ಕೆ ನಾಲ್ಕು ಭಾಷೆಗಳ ಟೀಸರ್ ಬಿಡುಗಡೆ

ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ ಸಿಎಂ ನಿರ್ದೇಶಿಸಿರುವ ಹಾಗೂ ಅರುಣ್- ರಾಣಿ ವರದ್ ಅಭಿನಯದ "1990s" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.

Written by - YASHODHA POOJARI | Last Updated : Sep 1, 2024, 05:24 PM IST
    • ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಸಿನಿಮಾ
    • 1990s" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.
    • ನಾಲ್ಕು ಭಾಷೆಗಳ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು
ಐದು ಭಾಷೆಗಳಲ್ಲಿ ಬರಲಿದೆ ʼ1990sʼ ಪ್ರೇಮಕಥೆ: ಏಕಕಾಲಕ್ಕೆ ನಾಲ್ಕು ಭಾಷೆಗಳ ಟೀಸರ್ ಬಿಡುಗಡೆ title=
1990s Movie

ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ ಸಿಎಂ ನಿರ್ದೇಶಿಸಿರುವ ಹಾಗೂ ಅರುಣ್- ರಾಣಿ ವರದ್ ಅಭಿನಯದ "1990s" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಲಹರಿ ವೇಲು ಸೇರಿದಂತೆ ಅನೇಕ ಗಣ್ಯರು ನಾಲ್ಕು ಭಾಷೆಗಳ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ಹಿಂದಿ ಟೀಸರ್ ತಾಂತ್ರಿಕ ಕಾರಣದಿಂದ ಇಂದು ಬಿಡುಗಡೆಯಾಗಲಿಲ್ಲ.

ಇದನ್ನೂ ಓದಿ:  ಎಷ್ಟೇ ಹೈ ಇದ್ದರೂ... ಈ ಎಲೆಯನ್ನು ಮೂಸಿದ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್‌ ಶುಗರ್‌! ಮಧುಮೇಹಿಗಳೇ ಟ್ರೈ ಮಾಡಿ ನೋಡಿ

"ನಾನು ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಿರ್ದೇಶಕನಾಗಿ ಇದು ಚೊಚ್ಚಲ ಚಿತ್ರ. ಈ ಚಿತ್ರ ಆಗಲು ಪ್ರಮುಖ ಕಾರಣ ಚಿತ್ರದ ಛಾಯಾಗ್ರಹಕ ಹಾಲೇಶ್, ಸಂಗೀತ ನಿರ್ದೇಶಕ ಮಹಾರಾಜ, ಸಂಕಲನಕಾರ ಕೃಷ್ಣ ಹಾಗೂ ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್ ಹಾಗೂ ಚಿತ್ರದ ನಾಯಕ ಅರುಣ್. ಇವರೆಲ್ಲರು ನನ್ನ ಜೊತೆಗೆ ಕೈಜೋಡಿಸಿದ್ದು ನಾನು ಈ ಚಿತ್ರ ನಿರ್ದೇಶನ ಮಾಡಲು ಕಾರಣವಾಯಿತು. ಇವರೆಲ್ಲರಿಗೂ ಹಾಗೂ ನಿರ್ಮಾಣ ಸಂಸ್ಥೆ ಮನಸ್ಸು ಮಲ್ಲಿಗೆ ಕಂಬೈನ್ಸ್ ಗೆ ನಾನು ಆಬಾರಿ. ಇನ್ನು "1990s" ತೊಂಭತ್ತರ ದಶಕದಲ್ಲಿ ನಡೆಯುವ ಪ್ರೇಮಕಥೆ. ಅರುಣ್ ಹಾಗೂ ರಾಣಿ ವರದ್ ನಾಯಕ - ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಕಷ್ಟು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಚಿತ್ರದ ಶೀರ್ಷಿಕೆಯನ್ನು "1990s" ಎಂದು ಇಡಲಾಗಿದೆ" ಎಂದರು ನಿರ್ದೇಶಕ ನಂದಕುಮಾರ್.

ರಂಗಭೂಮಿ ಕಲಾವಿದನಾಗಿ ಹತ್ತುವರ್ಷಗಳ ಅನುಭವವಿರುವ ನನಗೆ ಹಿರಿತೆರೆತಲ್ಲಿ ಇದು ಮೊದಲ ಚಿತ್ರ. ನಂದಕುಮಾರ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಚಿತ್ರ ಹಿಡಿಸುವ ನಂಬಿಕೆ ಇದೆ‌. ಈ ಚಿತ್ರದಲ್ಲಿ ನನ್ನದು ಮುಗ್ದ ಪ್ರೇಮಿಯ ಪಾತ್ರ ಎಂದು ತಿಳಿಸಿದ ನಾಯಕ ಅರುಣ್,  ನಾನು ಹಿರಿಯ ಸಂಕಲನಕಾರ ಜನಾರ್ದನ್ ಅವರ ಪುತ್ರ ಎಂದರು.

ಇದನ್ನೂ ಓದಿ: ಮನೆ ಮುಖ್ಯದ್ವಾರದಲ್ಲಿಈ ಹೂವಿನ ಗಿಡ ನೆಟ್ಟರೆ ಅದೃಷ್ಟವೇ ಬದಲಾಗುವುದು: ಸಂಪತ್ತು- ಸಮೃದ್ಧಿ ಜೊತೆ ನೆಮ್ಮದಿಯ ನಂದಗೋಕುಲವಾಗುತ್ತೆ ಆ ಮನೆ

ಛಾಯಾಗ್ರಾಹಕ ಹಾಲೇಶ್, ಸಂಗೀತ ನಿರ್ದೇಶಕ ಮಹಾರಾಜ, ಸಂಕಲನಕಾರ ಕೃಷ್ಣ, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್ ಮುಂತಾದ ತಂತ್ರಜ್ಞರು ಹಾಗೂ ಕಲಾವಿದರು "1990s" ಕುರಿತು ಮಾತನಾಡಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News