ಶುರುವಾಗ್ತಿದೆ ಹೊಚ್ಚ ಹೊಸ ಭಾವನಾತ್ಮಕ ಪ್ರೀತಿ ಕಥೆ "ಅವನು ಮತ್ತೆ ಶ್ರಾವಣಿ"...!!

Avanu Matte Shravani Serial: ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಹೊಸತನದೊಂದಿಗೆ ವಿಭಿನ್ನ ಕಥಾಹಂದರವುಳ್ಳ ಧಾರಾವಾಹಿಗಳನ್ನು ನೀಡುತ್ತಿದೆ.  

Written by - Savita M B | Last Updated : Sep 29, 2023, 12:19 PM IST
  • 900 ಕ್ಕೂ ಹೆಚ್ಚು ಯಶಸ್ವಿ ಸಂಚಿಕೆಗಳೊಂದಿಗೆ ಪ್ರೇಕ್ಷಕರ ಮನಗೆದ್ದ ಧಾರಾವಾಹಿ
  • ಅವನು ಮತ್ತೆ ಶ್ರಾವಣಿ ಹೊಸ ಧಾರಾವಾಹಿ
  • ಇದೀಗ ಮತ್ತೆ ಅದೇ ಹೆಸರಿನಿಂದ ಹೊಸ ಭಾವನಾತ್ಮಕ ಕಥೆ
ಶುರುವಾಗ್ತಿದೆ ಹೊಚ್ಚ ಹೊಸ ಭಾವನಾತ್ಮಕ ಪ್ರೀತಿ ಕಥೆ "ಅವನು ಮತ್ತೆ ಶ್ರಾವಣಿ"...!! title=

Serial Updates: ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಅವನು ಮತ್ತೆ ಶ್ರಾವಣಿ' ಧಾರಾವಾಹಿ 900 ಕ್ಕೂ ಹೆಚ್ಚು ಯಶಸ್ವಿ ಸಂಚಿಕೆಗಳೊಂದಿಗೆ ಪ್ರೇಕ್ಷಕರ ಮನಗೆದ್ದು ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಇದೀಗ ಅದೇ ಹೆಸರಿನಲ್ಲಿ ಹೊಸದೊಂದು ಲವ್ ಸ್ಟೋರಿಯನ್ನು ಪ್ರಸಾರ ಮಾಡಲು ಖಾಸಗಿ ಸಜ್ಜಾಗಿದೆ.

ಬದುಕಿನಲ್ಲಿ ನಡೆದಿದ್ದ ಕಹಿ ಘಟನೆಗಳಿಂದಾಗಿ ಕಥಾನಾಯಕಿ ಶ್ರಾವಣಿ ವಿದೇಶದಲ್ಲಿ ವಾಸವಾಗಿರ್ತಾಳೆ. 4 ವರ್ಷಗಳ ಬಳಿಕ ಶ್ರಾವಣಿ ತನ್ನ ದೊಡ್ಡಪ್ಪನ ಮಗಳ ಮದುವೆಯ ಸಲುವಾಗಿ ವಿದೇಶದಿಂದ ಭಾರತಕ್ಕೆ ಬರುತ್ತಾಳೆ. ತಾನು ಪ್ರೀತಿಸಿ ಮದುವೆಯಾಗಿ ವಿಚ್ಚೇಧನ ಪಡೆದ ಅಭಿಮನ್ಯು , ತನ್ನ ತಂಗಿಯನ್ನು ಮದುವೆಯಾಗಲಿರುವ ಹುಡುಗ ಎಂಬ ಸತ್ಯ ಶ್ರಾವಣಿಗೆ ತಿಳಿಯುತ್ತದೆ. 

ಇದನ್ನೂ ಓದಿ-ಕಾವೇರಿ ವಿವಾದ: ನಟ ರಜನಿಕಾಂತ್‌ ವಿರುದ್ಧ ರೊಚ್ಚಿಗೆದ್ದ ವಾಟಾಳ್‌!

ವರ್ಷಗಳ ಬಳಿಕ  ಇವರಿಬ್ಬರು ಮುಖ ಮುಖಿಯಾಗ್ತಾರೆ. ಇನ್ನು ಈ ಕತೆಯಲ್ಲಿ ಇನ್ನೊಂದು ಮುಖ್ಯಪಾತ್ರ ನಿರ್ವಹಿಸುತ್ತಿರುವುದು  'ಚೀಕು' ಎಂಬ ನಾಯಿ. ಮಗುವಿನಂತಿರುವ ಈ ನಾಯಿ ಅಭಿಮನ್ಯು ಹಾಗು ಶ್ರಾವಣಿಯನ್ನು ಮತ್ತೆ ಹೇಗೆ ಒಂದು ಮಾಡುತ್ತದೆ ? ಈ ಪ್ರೇಮಿಗಳಿಬ್ಬರು ದೂರವಾಗಲು ಕಾರಣವಾದರು ಏನು ? ಈ ಎರಡಕ್ಷರದ ಪ್ರೀತಿಗೆ..ಸಿಗಲಿದೆಯೇ ಎರಡನೇ ಅವಕಾಶ ?  ಅನ್ನೋದೇ "ಅವನು ಮತ್ತೆ ಶ್ರಾವಣಿ" ಧಾರಾವಾಹಿಯ ಮುಖ್ಯ ಕಥಾ ಹಂದರ.

ಇನ್ನು ಈ ಧಾರಾವಾಹಿಯು ಅದ್ಬುತ ತಾರಾಬಳಗವನ್ನು ಹೊಂದಿದ್ದು, ನಾಯಕನ ಪಾತ್ರದಲ್ಲಿ ಸ್ಕಂದ ಅಶೋಕ್, ನಾಯಕಿಯಾಗಿ ಅನುಷಾ ರಮೇಶ್ ಅಭಿನಯಿಸುತ್ತಿದ್ದಾರೆ. ಹದಿನೈದು ವರ್ಷಗಳಿಂದ ಹೊಸತನಕ್ಕೆ ಮೊದಲ ಆಧ್ಯತೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗ್ತಿದೆ ಭಾವನಾತ್ಮಕ ಪ್ರೀತಿಕತೆ  "ಅವನು ಮತ್ತೆ ಶ್ರಾವಣಿ" ಇದೇ ಅಕ್ಟೋಬರ್ 2 ರಿಂದ ರಾತ್ರಿ 10 ಗಂಟೆಗೆ ತಪ್ಪದೇ ವೀಕ್ಷಿಸಿ.

ಇದನ್ನೂ ಓದಿ-ಬಹುನಿರೀಕ್ಷಿತ ಜಗ್ಗೇಶ್‌ ನಟನೆಯ ʼತೋತಾಪುರಿ 2ʼ ನಿನ್ನೆ ರಿಲೀಸ್‌ : ಹೇಗಿದೆ ಸಿನಿಮಾ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News