ಬೆಂಗಳೂರು: ನಟ ಧ್ರುವ ಸರ್ಜಾ ಭಾನುವಾರದಂದು ಪ್ರೇರಣಾ ಶಂಕರ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ.ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಸಂಸ್ಕೃತ ಬೃಂದಾವನದ ಕನ್ವೆಶನ್ ಹಾಲ್ ನಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Wedding festivities begins at @DhruvaSarja residence #ActionPrince all set to tie the knot with #PrernaShankar on November24 @akarjunofficial @chirusarja @meghanasraj pic.twitter.com/u334ynKZeY
— A Sharadhaa (@sharadasrinidhi) November 23, 2019
ಭಾನುವಾರ ಬೆಳಗ್ಗೆ 7.15 ರಿಂದ 7.45 ರ ವೃಶ್ಚಿಕ ಶುಭ ಲಗ್ನದ ವೇಳೆ ಸಪ್ತಪದಿ ತುಳಿದರು. ತಿರುಪತಿ ವೆಂಕಟೇಶ್ವರ ದೇವಸ್ತಾನದ ಮಾದರಿಯಲ್ಲಿ ಮದುವೆ ಮಂಟಪವನ್ನು ಸಿದ್ದಪಡಿಸಲಾಗಿತ್ತು. ಸುಮಾರು 18 ಪುರೋಹಿತರು ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಮದುವೆ ಕಾರ್ಯದಲ್ಲಿ ಧ್ರುವ ಅವರ ಅಭಿಮಾನಿಗಳು ಕುಟುಂಬ ಸದಸ್ಯರು ಹಾಗೂ ಸ್ನೇಹಿತ ಬಳಗದವರು ಹಾಜರಿದ್ದರು.
Taali katuva shubha vele... @DhruvaSarja and @PreranaShankar Maduveya eebanda anuraagada anubanda. 🙌🤟 pic.twitter.com/GksXDOEeQH
— A Sharadhaa (@sharadasrinidhi) November 24, 2019
ಕನ್ನಡದಲ್ಲಿ 2012 ರಲ್ಲಿ ತೆರೆಕಂಡ ಅದ್ಧೂರಿ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಧ್ರುವ ಸರ್ಜಾ ಪಾದಾರ್ಪಣೆ ಮಾಡಿದ್ದರು. ಇದುವರೆಗೆ ಅವರು ನಟಿಸಿದ ಎಲ್ಲ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿಯಾಗಿವೆ.