ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಹೊಡೆದ ʼನಟ ನಾನಾ ಪಾಟೇಕರ್ʼ..! ವಿಡಿಯೋ ವೈರಲ್‌

Nana patekar hits fan : ನಾ ಪಾಟೇಕರ್‌ ಹೆಸರು ವಿವಾದಗಳಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಸಧ್ಯ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬನ ತಲೆಗೆ ಪಾಟೇಕರ್‌ ಹೊಡೆದ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ ನೋಡಿ..

Written by - Krishna N K | Last Updated : Nov 15, 2023, 05:24 PM IST
  • ಅಭಿಮಾನಿಗೆ ಹೊಡೆದ ನಾನಾ ಪಾಟೇಕರ್‌
  • ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
  • ರಾಷ್ಟ್ರ ಪ್ರಶಸ್ತಿ ವಿಜೇತ ನಟನ ವರ್ತನೆಗೆ ಆಕ್ರೋಶ
ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಹೊಡೆದ ʼನಟ ನಾನಾ ಪಾಟೇಕರ್ʼ..! ವಿಡಿಯೋ ವೈರಲ್‌ title=

Nana Patekar : ಬಾಲಿವುಡ್‌ ನಟ ನಾನಾ ಪಾಟೇಕರ್ ಆಗಾಗ ವಿವಾದಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಕಳೆದ ವರ್ಷ ಮಿಟೂ ಅಭಿಯಾನದಲ್ಲಿ ಪಾಟೇಕರ್‌ ಹೆಸರು ಕೇಳಿಬಂದಿತ್ತು. ಸಧ್ಯ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಹೊಡೆಯುವ ಮೂಲಕ ಫ್ಯಾನ್ಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹೌದು.. ನಾನಾ ಪಾಟೇಕರ್‌ ಹೆಸರು ವಿವಾದಗಳಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಸಧ್ಯ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬನ ತಲೆಗೆ ಪಾಟೇಕರ್‌ ಹೊಡೆದ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನಟನ ವರ್ತನೆಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಬೆದರಿಕೆಗೆ ಹೆದರುವುದಿಲ್ಲ, ದೇಶ ಬಿಟ್ಟು ಹೋಗುವುದಿಲ್ಲ : ದೀಪಿಕಾ ಹೀಗೆ ಅಂದಿದ್ದು ಯಾರಿಗೆ..?

ವಾರಣಾಸಿಯ ದಶಾಶ್ವಮೇಧ ಘಾಟ್‌ನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಿಡಿಯೋ ನೋಡಿದ ನೆಟ್ಟಿಗರು "ಅಹಂಕಾರಿ" ಮತ್ತು "ಈ ವರ್ತನೆ ಸರಿಯಲ್ಲ" ಅಂತ ಕಾಮೆಂಟ್‌ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಆದ್ರೆ ಕೆಲವರು ಸೆಟ್‌ನಲ್ಲಿ ಚಿತ್ರೀಕರಣದ ವೇಳೆ ಈ ರೀತಿ ಸೆಲ್ಫಿ ತೆಗೆದುಕೊಳ್ಳುವುದು ಸರಿಯಲ್ಲ ಅಂತ ನಾನಾ ಬೆಂಬಲಿಸಿದ್ದಾರೆ.

ವಿಡಿಯೋದಲ್ಲಿ ನಾನಾ ಪಾಟೇಕರ್ ಹತ್ತಿರ ಬರುವ ಅಭಿಮಾನಿ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಾನೆ. ಆಗ ಕೋಪಗೊಂಡ ಪಾಟೇಕರ್‌ ಅವನ ತಲೆಗೆ ಬಲವಾಗಿ ಹೊಡೆದು ಹೊರ ದಬ್ಬುತ್ತಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ: ಬಾಲಿವುಡ್‌ ಕಿಂಗ್‌ ಶಾರುಖ್‌ ಖಾನ್‌ ಅವರ ಸಹೋದರಿ ಯಾರು ಗೊತ್ತೇ?

ನಾನಾ ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿಯವರ 'ದಿ ವ್ಯಾಕ್ಸಿನ್ ವಾರ್' ನಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನ ಮಾಜಿ ಡೈರೆಕ್ಟರ್ ಜನರಲ್ ಪಾತ್ರವನ್ನು ನಿರ್ವಹಿಸಿದ್ದಾರೆ. 'ಲಾಲ್ ಬತ್ತಿ,' ಪ್ರಕಾಶ್ ಝಾ ಅವರು ನಿರ್ದೇಶಿಸಿದ ರಾಜಕೀಯ ಥ್ರಿಲ್ಲರ್, ನಾನಾ ಪಾಟೇಕರ್ ಅವರ OTT ಚೊಚ್ಚಲ ಸಿನಿಮಾವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News