ಬೆಂಗಳೂರು : ಬರೊಬ್ಬರಿ 2 ವರ್ಷಗಳ ನಂತರ ಅದ್ದೂರಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಇಡೀ ನಗರ ಕಾತುರದಿಂದ ಕಾಯ್ತಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಕೂಡ ಆಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ.
ಹಬ್ಬದಾಚರಣೆಯಿಂದ ಯಾವುದೇ ಕಾರಣಕ್ಕೂ ಪರಿಸರ ಮಲಿನಗೊಳಿಸಬಾರದು ಅನ್ನೋ ನಿಟ್ಟಿನಲ್ಲಿ ಭಾರತೀನಗರ ನಿವಾಸಿಗಳ ಸಂಘ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾಕ್ಸ್‌ಟೌನ್‌ನಲ್ಲಿರೋ ಗಂಗಮ್ಮ ದೇವಿ ದೇವಾಲಯದ ಮುಂದೆ ಮಣ್ಣಿನ ಗಣೇಶ ಮೂರ್ತಿಗಳನ್ನು ಸ್ಥಳದಲ್ಲೇ ಸಿದ್ದಪಡಿಸಿ ಮಕ್ಕಳಿಗೆ ಹಾಗು ಮಹಿಳೆಯರಿಗೆ ಉಚಿತವಾಗಿ ಹಂಚಲಾಯ್ತು. ಸಮಾಜಕ್ಕೆ ಒಳ್ಳೆಯ ರೀತಿಯಲ್ಲಿ ಈ ಕುರಿತ ಅರಿವು ಮೂಡಿಸಬೇಕು ಅನ್ನೋ ನಿಟ್ಟಿನಲ್ಲಿ ಚಿತ್ರನಟಿಯರಾದ ರಾಗಿಣಿ ದ್ವಿವೇದಿ ಹಾಗು ರಚನಾ ಇಂದರ್ ಸ್ವತಃ ತಾವೇ ಮಣ್ಣಿನ ಗಣೇಶನ ಮೂರ್ತಿಗಳನ್ನು ಸಿದ್ದಪಡಿಸುವ ಮೂಲಕ ನೆರೆದಿದ್ದ ಶಾಲಾ ಮಕ್ಕಳಿಗೆ ಹಾಗೂ ಸ್ಥಳೀಯ ಜನರಿಗೆ ಹಂಚಿದರು.
ಇದನ್ನೂ ಓದಿ : ಕಾಫಿ ನಾಡು ಚಂದುಗೆ ಭರ್ಜರಿ ಗಿಫ್ಟ್ ನೀಡಿದ ನಿರೂಪಕಿ ಅನುಶ್ರೀ..!
ಬಳಿಕ ಮಾತನಾಡಿದ ನಟಿ ಮಣಿಯರು, ಪರಿಸರದ ಕಾಳಜಿ ಬಗ್ಗೆ ಹಾಗೂ ಮಣ್ಣಿನ ಗಣಪತಿ ಸೊಗಡು ಎಲ್ಲರಲ್ಲೂ ಮೂಡಬೇಕು. ನಾವು ಕೂಡ ಪ್ರತೀ ವರ್ಷ ಮಣ್ಣಿನ ಗಣಪತಿಯನ್ನೇ ಕೂರಿಸಿ ಪೂಜಿಸುತ್ತೇವೆ ನೀವು ಕೂಡ ಮಣ್ಣಿನ ಗಣಪತಿ ಕೂರಿಸಿ ಉತ್ಸವವನ್ನ ಮಾಡಿ ಪರಿಸರ ಉಳಿಸಿ ಎಂದು ಮನವಿ ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.