Vijay Antony : ಕೋಮಾಗೆ ಜಾರಿದ ತಮಿಳು ಸ್ಟಾರ್‌ ನಟ.. ಆತಂಕದಲ್ಲಿ ವಿಜಯ್‌ ಫ್ಯಾನ್ಸ್‌..!

ಮಲೇಷ್ಯಾದಲ್ಲಿ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರುವ ತಮಿಳು ಖ್ಯಾತ ನಟ ವಿಜಯ್‌ ಆಂತೋನಿ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಹೇಳಾಗಿದೆ. ʼಪಿಚ್ಚೈಕಾರನ್ 2ʼ ಚಿತ್ರದ ಶೂಟಿಂಗ್ ವೇಳೆ ಬೋಟ್‌ ಡಿಕ್ಕಿ ಹೊಡೆದ ಪರಿಣಾಮ ವಿಜಯ್‌ ಗಂಭೀರ ಗಾಯಗೊಂಡಿದ್ದರು. ಅವರನ್ನು ಮಲೇಷ್ಯಾದಿಂದ ಚೆನ್ನೈಗೆ ಕರೆತರಲಾಗಿತ್ತು.

Written by - Krishna N K | Last Updated : Jan 20, 2023, 03:47 PM IST
  • ತಮಿಳು ಖ್ಯಾತ ನಟ ವಿಜಯ್‌ ಆಂತೋನಿ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಹೇಳಾಗಿದೆ.
  • ʼಪಿಚ್ಚೈಕಾರನ್ 2ʼ ಚಿತ್ರದ ಶೂಟಿಂಗ್ ವೇಳೆ ಬೋಟ್‌ ಡಿಕ್ಕಿ ಹೊಡೆದ ಪರಿಣಾಮ ವಿಜಯ್‌ ಗಂಭೀರ ಗಾಯಗೊಂಡಿದ್ದರು.
  • ವಿಜಯ್‌ ಅವರನ್ನು ಮಲೇಷ್ಯಾದಿಂದ ಚೆನ್ನೈಗೆ ಕರೆತರಲಾಗಿತ್ತು.
Vijay Antony : ಕೋಮಾಗೆ ಜಾರಿದ ತಮಿಳು ಸ್ಟಾರ್‌ ನಟ.. ಆತಂಕದಲ್ಲಿ ವಿಜಯ್‌ ಫ್ಯಾನ್ಸ್‌..! title=

Vijay Antony Health Update : ಮಲೇಷ್ಯಾದಲ್ಲಿ ನಡೆಯುತ್ತಿದ್ದ ಸಿನಿಮಾ ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರುವ ತಮಿಳು ಖ್ಯಾತ ನಟ ವಿಜಯ್‌ ಆಂತೋನಿ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಹೇಳಾಗಿದೆ. ʼಪಿಚ್ಚೈಕಾರನ್ 2ʼ ಚಿತ್ರದ ಶೂಟಿಂಗ್ ವೇಳೆ ಬೋಟ್‌ ಡಿಕ್ಕಿ ಹೊಡೆದ ಪರಿಣಾಮ ವಿಜಯ್‌ ಗಂಭೀರ ಗಾಯಗೊಂಡಿದ್ದರು. ಅವರನ್ನು ಮಲೇಷ್ಯಾದಿಂದ ಚೆನ್ನೈಗೆ ಕರೆತರಲಾಗಿತ್ತು.

ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್‌ ಅಂತೋನಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು ಎಂದು ಹೇಳಲಾಗಿತ್ತು. ಇತ್ತೀಚಿನ ಮಾಹಿತಿ ಪ್ರಕಾರ ಅವರು ಇನ್ನೂ ಕೋಮಾ ಸ್ಥಿತಿಯಲ್ಲಿ ಇದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಅಪಘಾತದಲ್ಲಿ ವಿಜಯ್‌ ಗಲ್ಲಕ್ಕೆ ಹೆಚ್ಚಿನ ಗಾಯವಾಗಿದ್ದು, ಮುಖದ ಗುರುತೇ ಸಿಗದಂತಾಗಿದೆ ಎಂದು ಹೇಳಲಾಗುತ್ತಿದೆ. ಚಿತ್ರರಂಗದ ನಟ ನಟಿಯರು ಮತ್ತು ಅವರ ಅಭಿಮಾನಿಗಳು ವಿಜಯ್‌ ಚೇತರಿಕೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಗಳ ಮುಖ ತೋರಿಸಲ್ಲ ಅಂದ್ರೆ ಫೋಟೋ ಶೂಟ್‌ ಯಾಕೆ..! ಪಿಂಕಿ ಟ್ರೋಲ್‌

ಮಲೇಷ್ಯಾದಲ್ಲಿ ʼಪಿಚ್ಚೈಕಾರನ್ 2ʼ ಶೂಟಿಂಗ್‌ ನಡೆಯುತ್ತಿತ್ತು. ಸಮುದ್ರ ಮಧ್ಯ ದೋಣಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಬೋಟ್‌ ಚೇಸಿಂಗ್‌ ದೃಶ್ಯ ಇದಾಗಿತ್ತು. ಈ ವೇಳೆ ಒಂದು ದೋಣಿ ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ವಿಜಯ್ ಆಂಟನಿ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ವಿಜಯ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ವಿಜಯ್ ಕುಟುಂಬ ಮಲೇಷ್ಯಾಗೆ ಪ್ರಯಾಣ ಬೆಳೆಸಿತ್ತು. ಸದ್ಯ ಅವರನ್ನು ಚೆನ್ನೈಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ. 

ವಿಜಯ್ ಅಂತೋನಿ ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ಸಂಗೀತ ನಿರ್ದೇಶಕರಾಗಿ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿ ವಿಜಯ್‌, ಗಾಯಕರಾಗಿ ಹಲವು ಹಾಡುಗಳನ್ನು ಹಾಡಿದ್ದಾರೆ. ಹಲವು ಚಿತ್ರಗಳಿಗೆ ಗೀತರಚನೆಕಾರರಾಗಿ, ಸಂಕಲನಕಾರರಾಗಿಯೂ ಕೆಲಸ ಮಾಡಿದ್ದಾರೆ. ಸಲೀಂ, ಇಂಡಿಯಾ ಪಾಕಿಸ್ತಾನ್, ಬಿಚ್ಚಗಾಡು, ಬೇತಾಳುದ, ಎಮನ್, ಅಣ್ಣಾದೊರೈ, ಕಲಿ, ತಿಮಿರು ಬುಡಿಚವನ್, ಖೋಲಕಾರನ್, ಕೋಡಿಯಲ್ಲಿ ಒರುವನ್ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದರು. ಕನ್ನಡದ ʼಅಮ್ಮಾ ಐ ಲವ್‌ ಯೂʼ ಸಿನಿಮಾ ವಿಜಯ್‌ ನಟನೆಯ ಬಿಚ್ಚಗಾಡು ಸಿನಿಮಾದ ರಿಮೇಕ್‌ ಆಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News