ರಾಜಕೀಯಕ್ಕೆ ಕರಾವಳಿ ಬ್ಯೂಟಿ ನಟಿ ಅನುಷ್ಕಾ ಶೆಟ್ಟಿ ಎಂಟ್ರಿ..! ಪಕ್ಷ ಯಾವುದು ಗೊತ್ತೆ..?

Anushka Shetty Jansena : ನಟಿ ಅನುಷ್ಕಾ ಶೆಟ್ಟಿ ಸಿನಿ ಕೆರಿಯರ್‌ನಿಂದ ರಾಜಕೀಯ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಜನಸೇನಾ ಪಕ್ಷದಿಂದ ರಾಜಕೀಯ ಅದೃಷ್ಟ ಪರೀಕ್ಷೆಗಿಳಿಯಲು ಸ್ವೀಟಿ ರೆಡಿಯಾಗಿದ್ದಾರೆ.. ಈ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..

Written by - Krishna N K | Last Updated : Mar 27, 2024, 11:01 PM IST
    • ನಟಿ ಅನುಷ್ಕಾ ರಾಜಕೀಯ ಎಂಟ್ರಿ ಕೊಡಲು ರೆಡಿ
    • ಜನಸೇನಾ ಪಕ್ಷದಿಂದ ರಾಜಕೀಯ ಅದೃಷ್ಟ ಪರೀಕ್ಷೆಗಿಳಿಯಲು ಸ್ವೀಟಿ ಸಿದ್ಧ
    • ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ..
ರಾಜಕೀಯಕ್ಕೆ ಕರಾವಳಿ ಬ್ಯೂಟಿ ನಟಿ ಅನುಷ್ಕಾ ಶೆಟ್ಟಿ ಎಂಟ್ರಿ..! ಪಕ್ಷ ಯಾವುದು ಗೊತ್ತೆ..? title=

Anushka Shetty Political entry : ದೇಶದಲ್ಲಿ ಲೋಕಸಭೆ ಚುನಾವಣೆ ಕಾವು ಜೋರಾಗಿದೆ.. ವಿವಿಧ ಪಕ್ಷಗಳು ಪ್ರಭಲ ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದು, ಸ್ಟಾರ್‌ ನಟ-ನಟಿಯರ ಮೊರೆ ಹೋಗುತ್ತಿದ್ದಾರೆ. ಇದೆ ವೇಳೆ ನಟಿ ಅನುಷ್ಕಾ ಶೆಟ್ಟಿಗೆ ಬಿಗ್‌ ಪಕ್ಷದಿಂದ ದೊಡ್ಡ ಆಫರ್‌ ಒಂದು ಬಂದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ..

ಹೌದು... ಆಂಧ್ರಪ್ರದೇಶದಲ್ಲಿ ರಾಜಕೀಯ ಅಖಾಡ ರಂಗೇರಿದೆ. ಟಿಡಿಪಿ, ಜನಸೇನೆ ಹಾಗೂ ಬಿಜೆಪಿ ಪಕ್ಷಗಳ ಮೈತ್ರಿ ಜೊತೆಗೆ ವೈಎಸ್‌ಆರ್‌ಸಿಪಿ ವಿರೋಧ ಎದುರಿಸುತ್ತಿದೆ. ಈ ಮೂಲಕ ಹೇಗಾದರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಿರೋಧ ಪಕ್ಷಗಳು ರಣತಂತ್ರ ರೂಪಿಸಿವೆ. ಈ ಬೆಳವಣಿಗೆ ನಡುವೆ ನಟಿ ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

ಇದನ್ನೂ ಓದಿ:ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯಾದ ನಟ ಸಿದ್ಧಾರ್ಥ್ - ಅದಿತಿ ರಾವ್..! ಕಾರಣವೇನು ಗೊತ್ತೆ..?

ಹೌದು.. ಟಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಜನಸೇವೆ ಮಾಡಲು ರೆಡಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕನ್ನಡತಿ ಅನುಷ್ಕಾ, ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಎನ್ನಲಾಗಿದೆ. ಪವರ್​ ಸ್ಟಾರ್ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಮೂಲಕ ರಾಜಕೀಯದ ಅಖಾಡಕ್ಕೆ ಎಂಟ್ರಿ ಕೊಡಲು ಸ್ವೀಟಿ ರೆಡಿಯಾಗಿದ್ದಾರೆ.

ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ನಟಿ ಅನುಷ್ಕಾ ಶೆಟ್ಟಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದಿಂದ ರಾಜಕೀಯ ಭವಿಷ್ಯ ಪರೀಕ್ಷೆ ಮಾಡಲು ಮುದ್ದಾಗಿದ್ದಾರೆ. ಅಲ್ಲದೆ, ನಟಿ ಅನುಷ್ಕಾ ಶೆಟ್ಟಿ ಜನಸೇನಾ ನಾಯಕರ ಸಂಪರ್ಕದಲ್ಲೂ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ನಟಿ ಇದುವರೆಗೂ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ:ಅರೆಬೆತ್ತಲಾಗಿ ಹೋಳಿ ಹಬ್ಬ ಆಚರಣೆ ಮಾಡಿದ ಲೊಡ್ಡೆ ಚಿತ್ರದ ನಟಿ!

ಇದಲ್ಲದೆ ಅನುಷ್ಕಾ ಅವರನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಿಂದ ಸಚಿವೆ ಹಾಗೂ ನಟಿ ರೋಜಾ ಎದಿರು ಸ್ಪರ್ಧಿಸಲು ಅನುಷ್ಕಾ ಅವರನ್ನು ಕಣಕ್ಕಿಳಿಸಲು ಜನಸೇನೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಕುರಿತು ಜನಸೇನಾ ಪಕ್ಷವಾಗಲಿ, ನಟಿ ಅನುಷ್ಕಾ ಶೆಟ್ಟಿಯವರಾಗಲಿ ಯಾವುದೇ ಮಾಹಿತಿ ನೀಡಿಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News