Uttarakanda' : ಡಾಲಿ ಧನಂಜಯ ನಟನೆಯ 'ಉತ್ತರಕಾಂಡ' ಸಿನಿಮಾದಿಂದ ಹೊರನಡೆದ ನಟಿ ರಮ್ಯಾ

ನಟ ಡಾಲಿ ಧನಂಜಯ ನಟನೆಯ ಉತ್ತರಕಾಂಡ ಚಿತ್ರದಲ್ಲಿ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಸಮಯಾವಕಾಶ ಇಲ್ಲದಿರುವುದರಿಂದ ಈ ಸಿನಿಮಾದಿಂದ ಹೊರ ನಡೆಯುವುದಾಗಿ ನಟಿ ರಮ್ಯಾ ತಿಳಿಸಿದ್ದಾರೆ. 

Written by - Zee Kannada News Desk | Last Updated : Mar 26, 2024, 07:48 PM IST
  • ಅಲ್ಲದೇ ಇತ್ತೀಚೆಗೆ ಬಿಡುಗಡೆಯಾದ 'ಹಾಸ್ಟೆಲ್ ಹುಡುಗರು' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ರಮ್ಯಾ ನಟಿಸಿದ್ದರು
  • ಟ್ವಿಟ್ ಮೂಲಕ 10 ವರ್ಷಗಳ ಬಳಿಕ ಉತ್ತರಕಾಂಡ ಸಿನಿಮಾ ಮೂಲಕ ನಾನು ಬೆಳ್ಳಿಪರದೆಗೆ ಹಿಂತಿರುಗುತ್ತಿದ್ದೇನೆ' ಎಂದು ತಿಳಿಸಿದ್ದರು.
  • ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವುದಾಗಿ ಹೇಳಿದ್ದ ನಟಿ ರಮ್ಯಾ ಇದೀಗ ಈ ಚಿತ್ರದಿಂದಲೂ ಹೊರ ನಡೆದಿರುವುದಾಗಿ ತಿಳಿಸಿದ್ದಾರೆ. a
Uttarakanda' : ಡಾಲಿ ಧನಂಜಯ ನಟನೆಯ 'ಉತ್ತರಕಾಂಡ' ಸಿನಿಮಾದಿಂದ ಹೊರನಡೆದ ನಟಿ ರಮ್ಯಾ title=

Uttarakanda movie :  ನಟ ಡಾಲಿ ಧನಂಜಯ ನಟನೆಯ ಉತ್ತರಕಾಂಡ ಚಿತ್ರದಲ್ಲಿ ನಾನು ಬೆಳ್ಳಿಪರದೆಗೆ ಹಿಂತಿರುಗುತ್ತಿದ್ದೇನೆ ಈ ಹಿಂದೆ ನಟಿ ರಮ್ಯಾ ಟ್ವಿಟ್ ಮಾಡಿದ್ದರು. 

10 ವರ್ಷಗಳ ಬಳಿಕ ಉತ್ತರಕಾಂಡ ಸಿನಿಮಾ ಮೂಲಕ ನಾನು ಬೆಳ್ಳಿಪರದೆಗೆ ಹಿಂತಿರುಗುತ್ತಿದ್ದೇನೆ'  ಎಂದು ತಿಳಿಸಿದ್ದರು. 

ಇದನ್ನು ಓದಿ : ಪಾಕಿಸ್ತಾನದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಚೀನಿಯರು ಸಾವು

ಈ ಕುರಿತಂತೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿರುವ ರಮ್ಯಾ, ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಸಮಯಾವಕಾಶ ಇಲ್ಲದಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ ಇತ್ತೀಚೆಗೆ ಬಿಡುಗಡೆಯಾದ 'ಹಾಸ್ಟೆಲ್ ಹುಡುಗರು' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ರಮ್ಯಾ ನಟಿಸಿದ್ದರು ಮತ್ತು ತಮ್ಮದೇ ನಿರ್ಮಾಣದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ನಾಯಕಿ ಪಾತ್ರದಲ್ಲಿ ನಟಿಸುತ್ತೇನೆ ಎಂದು ಸುದ್ದಿ ಬಂದಿತ್ತಾದರೂ ಅದರಿಂದ ಹಿಂದೆ ಸರಿದು ಅಭಿಮಾನಿಗಳಿಗೆ ನಿರಾಸೆ ಮಾಡಿದ್ದರು.ಆ ಅದಾದ ಬಳಿಕ  'ಉತ್ತರಕಾಂಡ' ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿದ್ದರು

 ಟ್ವಿಟ್ ಮೂಲಕ  10 ವರ್ಷಗಳ ಬಳಿಕ ಉತ್ತರಕಾಂಡ ಸಿನಿಮಾ ಮೂಲಕ ನಾನು ಬೆಳ್ಳಿಪರದೆಗೆ ಹಿಂತಿರುಗುತ್ತಿದ್ದೇನೆ' ಎಂದು ತಿಳಿಸಿದ್ದ ನಟಿ ಸದ್ಯಕ್ಕ್ಕೆ ಈ ಸಿನಿಮಾದಿಂದಲೂ ಹೊರಗುಳಿದಿದ್ದಾರೆ ಎಂದು ತಿಳಿಸಿದ್ದಾರೆ. 

'ಸಮಯದ ಅಲಭ್ಯತೆ ಕಾರಣಕ್ಕೆ 'ಉತ್ತರಕಾಂಡ' ಚಿತ್ರತಂಡದ ಜೊತೆ ಕೆಲಸ ಮಾಡುತ್ತಿಲ್ಲ. ಸ್ವಲ್ಪ ದಿನಗಳ ಕಾಲ ರಾಜಕೀಯ ಮತ್ತು ಸಿನಿಮಾಗಳಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದೇನೆ. ಚಿತ್ರತಂಡಕ್ಕೆ ಶುಭಾಶಯಗಳು' ಎಂದಿದ್ದಾರೆ.

ಇದನ್ನು ಓದಿ : KPSC : ಕೆಪಿಎಸ್‌ಸಿ ನೇಮಕಾತಿ, ಪಿಡಿಓ 97 ಹುದ್ದೆಗಳ ಅರ್ಜಿಗೆ ಆಹ್ವಾನ

'ಉತ್ತರಕಾಂಡ" ಚಿತ್ರವನ್ನು 'ರತ್ನನ್ ಪ್ರಪಂಚ' ಖ್ಯಾತಿಯ ರೋಹಿತ್ ಪದಕಿ ನಿರ್ದೇಶಿಸುತ್ತಿದ್ದು, ಕೆ.ಆ‌ರ್.ಜಿ ಸಂಸ್ಥೆ ನಿರ್ಮಾಣದ ಹೊಣೆ ಹೊತ್ತಿದೆ.ಹತ್ತು ವರ್ಷಗಳ ಬಳಿಕ ನಟ ಡಾಲಿ ಧನಂಜಯ ನಟನೆಯ ಉತ್ತರಕಾಂಡ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವುದಾಗಿ ಹೇಳಿದ್ದ ನಟಿ ರಮ್ಯಾ ಇದೀಗ ಈ ಚಿತ್ರದಿಂದಲೂ ಹೊರ ನಡೆದಿರುವುದಾಗಿ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News