Rashmika Mandanna: ಮೊಣಕಾಲು ನೋವಿಗೆ ಚಿಕಿತ್ಸೆ ಪಡೆದ ನಟಿ ರಶ್ಮಿಕಾ ಮಂದಣ್ಣ..!

ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಸ್ವತಃ ಫೋಟೋ ಹಂಚಿಕೊಂಡಿರುವ ಹೈದಾಬಾದ್‍ನ ಪ್ರಮುಖ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಮಾಹಿತಿ ನೀಡಿದ್ದಾರೆ.

Written by - Puttaraj K Alur | Last Updated : Sep 24, 2022, 01:22 PM IST
  • ಅನೇಕ ಚಿತ್ರಗಳಲ್ಲಿ ಸಖತ್ ಡ್ಯಾನ್ಸ್ ಮೂಲಕ ಮಿಂಚಿದ ರಶ್ಮಿಕಾ ಮಂದಣ್ಣಗೆ ಮೊಣಕಾಲಿನ ನೋವು
  • ಮೊಣಕಾಲು ನೋವಿಗೆ ಚಿಕಿತ್ಸೆ ಪಡೆದುಕೊಂಡು ನಟಿ ರಶ್ಮಿಕಾ ಮಂದಣ್ಣ
  • ನಟಿಗೆ ಚಿಕಿತ್ಸೆ ನೀಡಿದ ಹೈದಾಬಾದ್‍ನ ಪ್ರಮುಖ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ
Rashmika Mandanna: ಮೊಣಕಾಲು ನೋವಿಗೆ ಚಿಕಿತ್ಸೆ ಪಡೆದ ನಟಿ ರಶ್ಮಿಕಾ ಮಂದಣ್ಣ..!  title=
ರಶ್ಮಿಕಾ ಮಂದಣ್ಣಗೆ ಮೊಣಕಾಲಿನ ನೋವು!

ನವದೆಹಲಿ: ಕೊಡಗಿನ ಕುವರಿ, ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ತೆಲುಗಿನ ‘ಪುಷ್ಪ-2’ ಮತ್ತು ವಿಜಯ್ ದೇವರಕೊಂಡ ಜೊತೆಗೆ ‘ವರಸುಡು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಬಾಲಿವುಡ್ ಬಿಗ್ ಬಿ ಜೊತೆಗೆ ‘ಗುಡ್ ಬೈ’ , ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ನಟಿಸಿರುವ ‘ಮಿಷನ್ ಮಜ್ನು’ ಮತ್ತು ರಣಬೀರ್ ಕಪೂರ್ ಜೊತೆಗೆ ನಟಿಸಿರುವ ‘ಅನಿಮಲ್’ ಸಿನಿಮಾಗಳ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.   

ಇದೆಲ್ಲಾ ರಶ್ಮಿಕಾರ ಸಿನಿಮಾ ಸುದ್ದಿ ಆಯ್ತು, ಹೊಸ ಸುದ್ದಿ ಏನಪ್ಪಾ ಅಂದ್ರೆ ಸೌತ್ ಸಿನಿರಂಗದ ಸೆನ್ಸೇಷನಲ್ ಬ್ಯೂಟಿ ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹೌದು, ರಶ್ಮಿಕಾ ಇತ್ತೀಚೆಗೆ ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರಂತೆ. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಅಮಿರ್‌ ಖಾನ್‌ ಪುತ್ರಿಗೆ ಪ್ರಪೋಸ್‌ ಮಾಡಿದ ನೂಪುರ್‌ : ನಾಚಿ ನೀರಾಗಿ ಕಿಸ್‌ ಮಾಡಿದ ಇರಾ..!

ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಸ್ವತಃ ಫೋಟೋ ಹಂಚಿಕೊಂಡಿರುವ ಹೈದಾಬಾದ್‍ನ ಪ್ರಮುಖ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಮಾಹಿತಿ  ನೀಡಿದ್ದಾರೆ. ತಮ್ಮ ನೆಚ್ಚಿನ ನಟಿ ಆಸ್ಪತ್ರೆಯತ್ತ ಮುಖ ಮಾಡಿದ್ದನ್ನು ಕಂಡ ಅಭಿಮಾನಿಗಳಿಗೆ ಶಾಕ್ ಆಗಿದೆ. ಸತತ ಚಿತ್ರೀಕರಣಲ್ಲಿರುವ ರಶ್ಮಿಕಾ ಮೊಣಕಾಲಿನ ಸಮಸ್ಯೆಗೆ ಒಳಗಾಗಿದ್ದಾರೆ. ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ನಟಿಗೆ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ನಟಿಯ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ.

‘ಸಾಮಿ..ಸಾಮಿ.. ಎಂದು ಮೊಣಕಾಲಿನ ಮೇಲೆ ಭಾರ ಹಾಕಿ ಡ್ಯಾನ್ಸ್ ಮಾಡುತ್ತಿದ್ದೀರಿ.. ಈಗ ನೋವು ಬಂದಿದೆ! ಮೊಣಕಾಲು ನೋವಿನಿಂದ ನನ್ನ ಬಳಿಗೆ ಬಂದಿದ್ದೀರಿ ಅಂತಾ ಶ್ರೀವಲ್ಲಿಗೆ ನಾನು ಹೇಳಿದೆ’ ಎಂದು ವೈದ್ಯ ಗುರುವಾ ರೆಡ್ಡಿ ಈ ಫೋಟೋಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Samantha Second Marriage: ಎರಡನೇ ಮದುವೆಗೆ ಸಮಂತಾ ರೆಡಿ.? ಇದೇ ಸಾಕ್ಷಿ!

‘ಪುಷ್ಪಾ’ ಸೇರಿ ಅನೇಕ ಚಿತ್ರಗಳಲ್ಲಿ ಸಖತ್ ಡ್ಯಾನ್ಸ್ ಮೂಲಕ ಮಿಂಚಿದ ರಶ್ಮಿಕಾರಿಗೆ ಮೊಣಕಾಲಿನ ನೋವು ಕಾಣಿಸಿಕೊಂಡಿದೆ. ಸದ್ಯ ಚಿಕಿತ್ಸೆ ಪಡೆದುಕೊಂಡಿರುವ ನಟಿ ವೈದ್ಯರ ಜೊತೆಗೆ ನಗು ನಗುತ್ತಲೇ ಪೋಸು ನೀಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News