Vanitha Vijayakumar 4th marriage: ತಮಿಳು ನಟಿ ವನಿತಾ ವಿಜಯಕುಮಾರ್... ಸಾಕಷ್ಟು ವಿವಾದಗಳಿಂದ, ಜೊತೆಗೆ ತನ್ನ ಮದುವೆ ವಿಚಾರಗಳಿಂದಲೇ ಸುದ್ದಿಯಲ್ಲಿರುವ ಈ ನಟಿ ಇದೀಗ ನಾಲ್ಕನೇ ಮದುವೆಗೆ ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲದೆ ಮದುವೆ ಡೇಟ್ ಕೂಡ ಅನೌನ್ಸ್ ಮಾಡಿದ್ದಾರೆ. ನೃತ್ಯ ಸಂಯೋಜಕ ರಾಬರ್ಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: BBK11: ʼಸ್ವರ್ಗʼವಾಸಿಗಳಿಗೆ ʼನರಕʼ ತೋರಿಸಿದ ಚೈತ್ರಾ ಕುಂದಾಪುರ ಮೊದಲ ವಾರವೇ ನಾಮಿನೇಟ್!
ಅಂದಹಾಗೆ ವನಿತಾ ವಿಜಯಕುಮಾರ್ ಮದುವೆಯ ದಿನಾಂಕವನ್ನು ಘೋಷಿಸುತ್ತಾ ಪೋಸ್ಟರ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಮೊಣಕಾಲೂರಿ, ರಾಬರ್ಟ್‌ಗೆ ಪ್ರೇಮ ನಿವೇದನ ಮಾಡುತ್ತಿರುವಂತೆ ತೋರುತ್ತಿದೆ. ಇನ್ನು ಈ ಪೋಸ್ಟ್ ನೋಡುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ. ರಾಬರ್ಟ್ ಕೂಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಡೇಟ್ ಅನೌನ್ಸ್ ಮಾಡಿದ್ದಾರೆ.
ವನಿತಾ ತಮಿಳಿನ ಹಿರಿಯ ನಟ ವಿಜಯಕುಮಾರ್ ಮತ್ತು ಅವರ ಎರಡನೇ ಪತ್ನಿ ತಮಿಳು ನಟಿ ಮಂಜುಳಾ ಅವರ ಪುತ್ರಿ. ಈ ಹಿಂದೆ ವನಿತಾ ಅವರಿಗೆ ಮೂರು ಮದುವೆಯಾಗಿದೆ. 2000 ರಲ್ಲಿ ನಟ ಆಕಾಶ್ ಎಂಬವರನ್ನು ವಿವಾಹವಾಗಿದ್ದ ವನಿತಾ 2005 ರಲ್ಲಿ ವಿಚ್ಛೇದನ ನೀಡಿದರು. ಅದಾದ ಬಳಿಕ 2007ರಲ್ಲಿ, ಉದ್ಯಮಿ ಆನಂದ್ ಜಯ್ ರಾಜನ್ ಅವರನ್ನು ವಿವಾಹವಾದರು. ಆ ದಾಂಪತ್ಯ ಕೂಡ ಮುರಿದುಬಿತ್ತು. ಆ ಬಳಿಕ ಛಾಯಾಗ್ರಾಹಕ ಪೀಟರ್ ಪಾಲ್ ಅವರನ್ನು ಮದುವೆಯಾಗಿದ್ದ ವನಿತಾ 2020ರಲ್ಲಿ ಡಿವೋರ್ಸ್ ನೀಡಿದರು. ಇದೀಗ ರಾಬರ್ಟ್ ಜೊತೆ ನಾಲ್ಕನೇ ಬಾರಿ ಮದುವೆಯಾಗುತ್ತಿದ್ದಾರೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಇದೊಂದು ಪದಾರ್ಥ ತಿನ್ನಿ: ಮಧುಮೇಹ, ಬಿಪಿ ಸಮಸ್ಯೆ ಎಲ್ಲವೂ ಮಾಯವಾಗುತ್ತೆ!
ವನಿತಾ ಮತ್ತು ರಾಬರ್ಟ್ ಡೇಟಿಂಗ್ ಬಗ್ಗೆ ಈ ಹಿಂದೆಯೇ ಭಾರೀ ಸುದ್ದಿಯಾಗಿತ್ತು. ಇವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಈ ವದಂತಿಗೆ ಫುಲ್ ಸ್ಟಾಪ್ ಬಿದ್ದಿದ್ದು ಈ ಜೋಡಿ ಮದುವೆಯಾಗುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.