Aishwarya Rai Abhishek Bachchan: ಇತ್ತೀಚಿಗೆ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವೈವಾಹಿಕ ಜೀವನದಲ್ಲಿ ವಿರಸ ಮೂಡಿದೆ. ಅವರಿಬ್ಬರೂ ವಿಚ್ಛೇದನ ಪಡೆಯುತ್ತಾರೆ ಎನ್ನುವ ಬಗ್ಗೆ ದಿನಕ್ಕೊಂದು ಗಾಸಿಪ್ ಕೇಳಿಬರುತ್ತಿತ್ತು. ಅದರ ನಡುವೆ ಅವರಿಬ್ಬರೂ ಜೊತೆಯಾಗಿದ್ದಾರೆ ಎನ್ನುವ ಸಿಹಿ ಸುದ್ದಿಯೊಂದು ಲಭಿಸಿದೆ.
ಜನಕ್ಕೆ ಯಾರಾದ್ರೂ ಚೆನ್ನಾಗಿದ್ದಾರೆ, ಖುಷಿಖುಷಿಯಾಗಿದ್ದಾರೆ ಅಂದ್ರೆ ಸಹಿಸೋಕೆ ಆಗಲ್ಲ. ಬಡಿದಾಡ್ತಿದ್ದಾರೆ, ಬೇರೆ ಬೇರೆ ಆಗ್ತಾರೆ ಅಂದ್ರೆ ಬಿಟ್ಟ ಕಣ್ಣು ಮುಚ್ಚದೆ ನೋಡ್ತಾರೆ. ಹಿಂದಿ ಚಿತ್ರರಂಗದ ಹೈ ಪ್ರೊಫೈಲ್ ಜೋಡಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಷಯದಲ್ಲೂ ಇದೇ ಆಗ್ತಿರೋದು. ಅವರಿಬ್ಬರೂ ಯಾವತ್ತೂ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿಲ್ಲ. ಆದ್ರೆ ಇನ್ನೇನು ಅವರಿಬ್ರು ಡಿವೋರ್ಸ್ ಪಡ್ಕೊಂಡೇಬಿಟ್ರು ಎನ್ನುವ ರೇಂಜಿಗೆ ಮಾತನಾಡ್ತಿದಾರೆ. ದಿನಕ್ಕೊಂದು ಗಾಸಿಪ್ ಸೃಷ್ಟಿ ಮಾಡಿ ಮಜಾ ತೆಗೋತಿದ್ದಾರೆ. ಇದೆಲ್ಲದರ ನಡುವೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬದ ಜೊತೆ ಐಶ್ವರ್ಯ ರೈ ಹೋಗಿರಲಿಲ್ಲ. ಪ್ರತ್ಯೇಕವಾಗಿ ಹೋಗಿದ್ರು. ಅಲ್ಲಿಂದ ಶುರುವಾಯ್ತು ನೋಡಿ. ಅವರು ಇವರಿಗೆ ಬರ್ತ್ಡೇ ವಿಶ್ ಮಾಡಿಲ್ಲ. ಇವರು ಅವರಿಗೆ ಗುಡ್ ಮಾರ್ನಿಂಗ್ ಮೆಸೇಜ್ ಕಳಿಸಿಲ್ಲ ಎನ್ನೋದರಿಂದ ಹಿಡಿದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಈಗಾಗಲೇ ಬೇರೆ ಬೇರೆ ವಾಸ ಮಾಡುತ್ತಿದ್ದಾರೆ. ಅವರಿಬ್ಬರೂ ಗ್ರೇ ಡಿವೊರ್ಸ್ ಪಡೀತಾರೆ ಹೀಗೆ ದಿನಕ್ಕೊಂದು ವರದಿ ಹರಿದಾಡುತ್ತಿದೆ.
ಇದರಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ತಪ್ಪು ಇದೆ ಎನ್ನಿ. ಏಕೆಂದರೆ ಇಷ್ಟೆಲ್ಲಾ ಗಾಸಿಪ್ ದೇಶ ಸುತ್ತಾಡ್ತಿದ್ರೂ ಅವರಿಬ್ಬರೂ ಗಪ್ ಚುಪ್ ಎನ್ನೋ ರೀತಿ ಇದ್ರು. ಹೋಗಲಿ, ಈಗ ಬರುತ್ತಿರುವ ಸುದ್ದಿ ಏನು ಅಂದ್ರೆ ಅವರಿಬ್ಬರು ಜೊತೆಯಾಗಿ ಸ್ಟಾರ್-ಸ್ಟಡ್ ಪಾರ್ಟಿ ಅಟೆಂಡ್ ಮಾಡಿದ್ದಾರೆ ಅಂತಾ. ಬರಿ ಸುದ್ದಿ ಅಲ್ಲ. ಅವರಿಬ್ಬರೂ ಜೊತೆಯಾಗಿ ಹೋಗಿರುವ ಫೋಟೋಗಳು ಕೂಡ ಸಿಕ್ಕಿವೆ.
ನಿನ್ನೆ (ಡಿ. 5) ರಾತ್ರಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಪಾರ್ಟಿಯಲ್ಲಿ ಆಯೇಷಾ ಜುಲ್ಕಾ, ಅನು ರಂಜನ್ ಮತ್ತಿತರರ ಜೊತೆ ನಗುನಗುತ್ತಾ ಪೋಸು ನೀಡಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿವೆ. ಈ ಸಂದರ್ಭದಲ್ಲಿ ಐಶ್ವರ್ಯ ರೈ ಅವರ ತಾಯಿ ಬೃಂದಾ ರೈ ಕೂಡ ಇದ್ದಾರೆ.
ಇದನ್ನೂ ಓದಿ- Pushpa 2 Box Office Collection: ಮೊದಲ ದಿನವೇ ಭರ್ಜರಿ ಕಮಾಯಿ..! ಎಲ್ಲಾ ದಾಖಲೆಗಳನ್ನು ಪುಡಿ-ಪುಡಿ ಮಾಡಿದ ಪುಷ್ಪ-2
ನಿರ್ಮಾಪಕಿ ಅನು ರಂಜನ್ ಅವರು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಪಾರ್ಟಿಯಲ್ಲಿ ಖುಷಿಖುಷಿಯಾಗಿ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ‘So much love warmth…’ ಅಂತಾ ಬರೆದುಕೊಂಡು ಎರಡು ಲವ್ ಸಿಂಬಲ್ ಅನ್ನೂ ಪೋಣಿಸಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಕಡುಕಪ್ಪು ಕಾಂಬಿನೇಷನ್ ಡ್ರೆಸ್ ಹಾಕಿಕೊಂಡು ಅದರಲ್ಲೂ ಮ್ಯಾಚಿಂಗ್ ಮ್ಯಾಚಿಂಗ್ ಇದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.