ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ Alia Bhat ಸಹೋದರಿಯ ಈ Video

ಖ್ಯಾತ ಬಾಲಿವುಡ್ ನಟಿ ಅಲಿಯಾ ಭಟ್ ಅವಳ ಸಹೋದರ ಸಂಬಂಧಿಯಾಗಿರುವ ಸ್ಮೈಲಿ ಸೂರಿ ವೃತ್ತಿಯಲ್ಲಿ ಓರ್ವ ಪೋಲ್ ಡ್ಯಾನ್ಸರ್ ಆಗಿದ್ದಾಳೆ.

Last Updated : Apr 23, 2020, 05:19 PM IST
ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ Alia Bhat ಸಹೋದರಿಯ ಈ Video title=

ನವದೆಹಲಿ: ನಮಗೆಲ್ಲರಿಗೂ ತಿಳಿದ ಹಾಗೆ ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಕಾಲ ಕಳೆಯುವಂತಾಗಿದ. ಇದಕ್ಕೆ ಸೆಲಿಬ್ರಿಟಿಗಳೂ ಕೂಡ ಹೊರತಾಗಿಲ್ಲ. ಸಧ್ಯ ಅಲಿಯಾ ಭಟ್ ಅವರ ಸಹೋದರ ಸಂಬಂಧಿ ಸ್ಮೈಲಿ ಸೂರಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ವೃತ್ತಿಯಲ್ಲಿ ಓರ್ವ ಪೋಲ್ ಡ್ಯಾನ್ಸರ್ ಆಗಿರುವ ಸ್ಮೈಲಿ ಕ್ವಾರಂಟೀನ್ ಟೈಮ್ ಅನ್ನು ವಿಶೇಷವಾಗಿ ಕಳೆಯುತ್ತಿದ್ದಾಳೆ. ಪೋಲ್ ಡ್ಯಾನ್ಸರ್ ಸ್ಮೈಲಿ ಸೂರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು, ವಿಡಿಯೋದಲ್ಲಿ ಸ್ಮೈಲಿ ವಿಚಿತ್ರವಾಗಿ ಪೋಲ್ ಡಾನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ.

ಸ್ಮೈಲಿ ಈ ವಿಡಿಯೋ ಸ್ಮಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಭಾರಿ ವೈರಲ್ ಆಗಲಾರಂಭಿಸಿದೆ. ಈ ವಿಡಿಯೋದಲ್ಲಿ ಸ್ಮೈಲಿ ಕಸಗೂಡಿಸುತ್ತಿದ್ದಾಳೆ, ಪುಸ್ತಕ ಓದುತ್ತಿದ್ದಾಳೆ. ಜೊತೆಗೆ ಜೂಸ್ ಕೂಡ ಸೇವಿಸುತ್ತಿದ್ದಾಳೆ. ಆದರ ಅವು ಈ ಎಲ್ಲ ಕೆಲಸಗಳನ್ನು ಮಾಡುವ ಪರಿ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ವಿಡಿಯೋ ಅನ್ನು ನೀವೂ ಒಮ್ಮೆ ನೋಡಿ...

ಪೋಲ್ ಡಾನ್ಸ್ ಮಾಡುತ್ತಾ ಈ ರೀತಿಯ ಕೆಲಸಗಳನ್ನು ಬಹುತೇಕರು ಮಾಡುವುದಿಲ್ಲ. ಆದರೆ, ಲಾಕ್ ಡೌನ್ ಅವಧಿ ಇಂತಹ ಹಲವರಲ್ಲಿನ ಇನ್ನೋವೇಟಿವ್ ಐಡಿಯಾಗಳ ಮೇಲೆ ಬೆಳಕು ಚೆಲ್ಲಿದೆ ಎಂಬುದು ಮಾತ್ರ ನಿಜ. ಈ ವಿಡಿಯೋ ಕುರಿತು ಹೇಳುವುದಾದರೆ ಸ್ಮೈಲಿ ತನ್ನ ಐಡಿಯಾಗಳಿಗೆ ಪೋಲ್ ಡಾನ್ಸ್ ನಲ್ಲಿ ಸ್ಥಾನ ಕಲ್ಪಿಸಿರುವುದು ಮಾತ್ರ ಶ್ಲಾಘನೀಯ. ಸ್ಮೈಲಿ ಭಟ್, ಅಲಿಯಾ ಭಟ್, ಇಮ್ರಾನ್ ಹಾಸ್ಮಿ ಹಾಗೂ ಪೂಜಾ ಭಟ್ ಅವರ ಮೊದಲ ಸಹೋದರ ಸಂಬಂಧಿಯಾಗಿದ್ದಾಳೆ.

Trending News