ಆಲಿಯಾ ಭಟ್ ಮುಖಕ್ಕೆ ಪಾರ್ಶ್ವವಾಯು.. ಫ್ಯಾನ್ಸ್ ಆತಂಕಕ್ಕೆ ಕಾರಣವಾದ ಬಾಲಿವುಡ್‌ ಬ್ಯೂಟಿ ಪೋಸ್ಟ್!‌

Alia Bhatt partially paralyzed rumours: ನಟಿ ಆಲಿಯಾ ಭಟ್ ಅವರ ಮುಖಕ್ಕೆ ಪಾರ್ಶ್ವವಾಯು ಹೊಡೆದಿದೆ ಎಂಬ ಸುದ್ದಿ ವೈರಲ್‌ ಆಗಿದೆ. 

Written by - Chetana Devarmani | Last Updated : Oct 26, 2024, 11:45 AM IST
    • ಆಲಿಯಾ ಭಟ್ ಮುಖಕ್ಕೆ ಪಾರ್ಶ್ವವಾಯು?
    • ಆಲಿಯಾ ಭಟ್ ಕಾಸ್ಮೆಟಿಕ್‌ ಸರ್ಜರಿ ಫೋಟೊ
    • ಬ್ಯೂಟಿ ರಹಸ್ಯ ಬಟಾ ಬಯಲು
ಆಲಿಯಾ ಭಟ್ ಮುಖಕ್ಕೆ ಪಾರ್ಶ್ವವಾಯು.. ಫ್ಯಾನ್ಸ್ ಆತಂಕಕ್ಕೆ ಕಾರಣವಾದ ಬಾಲಿವುಡ್‌ ಬ್ಯೂಟಿ ಪೋಸ್ಟ್!‌ title=

Alia Bhatt cosmetic surgery: ನಟಿ ಆಲಿಯಾ ಭಟ್ ಅವರ ಮುಖಕ್ಕೆ ಪಾರ್ಶ್ವವಾಯು ಹೊಡೆದಿದೆ ಎಂಬ ಸುದ್ದಿ ವೈರಲ್‌ ಆಗಿದೆ. ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಖುದ್ದು ಆಲಿಯಾ ಭಟ್‌ ಪೋಸ್ಟ್‌ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್‌ ಆದ ವಿಡಿಯೋ ಬಗ್ಗೆ ಮಾಹಿತಿ ನೀಡಿದ್ದಾರೆ.  

ಬಾಲಿವುಡ್ ನಟಿ ಆಲಿಯಾ ಭಟ್ ಬೊಟೊಕ್ಸ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಈ ವೇಳೆ ಅವರ ಮುಖಕ್ಕೆ ಪಾರ್ಶ್ವವಾಯು ಹೊಡೆದಿದೆ. ಮುಖದ ಸನ್ನೆಗಳಲ್ಲಿ ಬದಲಾವಣೆಗಳುಂಟಾಗಿದೆ ಎಂದು ಹೇಳುವ ಹಲವಾರು ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಸ್ಪಷ್ಟಿಯಾಗಿದ್ದವು. ಈ ಬಗ್ಗೆ ಆಲಿಯಾ ಭಟ್‌ ಕೋಪಗೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಅಪಪ್ರಚಾರ ಮಾಡುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಶಾಕಿಂಗ್‌ ಎಲಿಮಿನೇಷನ್.. ಬಿಗ್‌ ಬಾಸ್‌ ನಲ್ಲಿ ಫಿನಾಲೆಗೆ ಬರ್ತಾರೆ ಎಂದುಕೊಂಡ ಈ ಸ್ಪರ್ಧಿಯೇ ಔಟ್!‌

ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಆಲಿಯಾ ಜನರನ್ನು ತಪ್ಪುದಾರಿಗೆಳೆಯುವ ಲೇಖನಗಳು ಮತ್ತು ವೀಡಿಯೊಗಳ ಸೃಷ್ಟಿಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ʻʻಕಾಸ್ಮೆಟಿಕ್ ಸರ್ಜರಿ ಆಯ್ಕೆಮಾಡುವವರ ಬಗ್ಗೆ ಜಡ್ಜ್‌ ಮಾಡುವ ಅಧಿಕಾರ ಯಾರಿಗೂ ಇಲ್ಲ. ನಿಮ್ಮ ದೇಹ ಎಲ್ಲವೂ ನಿಮ್ಮ ಆಯ್ಕೆಗೆ ಬಿಟ್ಟಿದ್ದು. ನನ್ನ ವಿಷಯದಲ್ಲಿ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹಾಸ್ಯ ಮಾಡುತ್ತಿದ್ದಾರೆ. ನಾನು ಮಾಡಿಕೊಂಡಿರುವ ಬೊಟೊಕ್ಸ್ ಸರ್ಜರಿ ದೋಷಪೂರಿತವಾಗಿದೆ ಎಂಬ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಇದು ನನ್ನ ಗಮನಕ್ಕೆ ಬಂದಿದ್ದು, ನನ್ನ ನಗು ಹಾಗೂ ಮಾತಿನಲ್ಲಿ ಈ ಸರ್ಜರಿಯ ಕಾರಣ ಬದಲಾವಣೆ ಕಾಣುತ್ತಿದೆ ಎಂದು ಬಿಂಬಿಸುವಂತೆ ಎಡಿಟ್‌ ಮಾಡಿದ್ದಾರೆ. ನೀವು ಇದನ್ನು ಏಕೆ ಹೇಳುತ್ತಿದ್ದೀರಿ? ಕ್ಲಿಕ್‌ ಗಾಗಿ? ಜನರ ಗಮನಸೆಳೆಯಲು? ಅದರಲ್ಲಿ ಯಾವುದೂ ಅರ್ಥವಿಲ್ಲʼʼ 

ʻʻವೈರಲ್‌ ವಿಡಿಯೋಗಳ ಪ್ರಕಾರ ನನ್ನ ದೇಹದ ಒಂದು ಭಾಗ ಪಾರ್ಶ್ವವಾಯುವಿಗೆ ತುತ್ತಾಗಿದೆ. ನನ್ನೊಂದಿಗೆ ತಮಾಷೆ ಮಾಡುತ್ತಿದ್ದೀರಾ? ಇಂತಹ ಹೇಳಿಕೆಗಳು ಸುಳ್ಳು. ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಹೇಳಿಕೆಗಳನ್ನು ಹರಿ ಬಿಡುವುದು ನಂಬುವ ಯುವ ಜನರ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂಬುದನ್ನು ಮರೆಯದಿರಿʼʼ ಎಂದು ಆಲಿಯಾ ಭಟ್‌ ಬರೆದುಕೊಂಡಿದ್ದಾರೆ.  

ಇದನ್ನೂ ಓದಿ: ಅಕ್ಷಯ್ ಕುಮಾರ್‌ ಪತ್ನಿಯಾಗಬೇಕಿತ್ತು ರವೀನಾ ಟಂಡನ್‌... ನಿಶ್ಚಿತಾರ್ಥ ಕೂಡ ನಡೆದಿತ್ತು!  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News