Lockdown ಮಧ್ಯೆ ವಿಡಿಯೋ ಹಂಚಿಕೊಂಡ ಊರ್ವಶಿ, 'ಮನೆಯಲ್ಲಿರು ಅಕ್ಕಾ..!" ಎಂದ ಅಭಿಮಾನಿಗಳು

ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಪಸರಿಸುತ್ತಿದೆ. ಇಂತಹುದರಲ್ಲಿ ಭಾರತದಲ್ಲಿ ಇದುವರೆಗೆ ಸುಮಾರು 918 ಜನರು ಈ ಮಾರಕ ಸೋಂಕಿಗೆ ಗುರಿಯಾಗಿದ್ದಾರೆ. ಇನ್ನೊಂದೆಡೆ ಈ ಪ್ರಾಣಾಂತಕ ವೈರಸ್ ಸುಮಾರು 19 ಜನರನ್ನು ಬಲಿ ಪಡೆದಿದೆ. 

Last Updated : Mar 29, 2020, 05:22 PM IST
Lockdown ಮಧ್ಯೆ ವಿಡಿಯೋ ಹಂಚಿಕೊಂಡ ಊರ್ವಶಿ, 'ಮನೆಯಲ್ಲಿರು ಅಕ್ಕಾ..!" ಎಂದ ಅಭಿಮಾನಿಗಳು title=

ನವದೆಹಲಿ: ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಪಸರಿಸುತ್ತಿದೆ. ಇಂತಹುದರಲ್ಲಿ ಭಾರತದಲ್ಲಿ ಇದುವರೆಗೆ ಸುಮಾರು 918 ಜನರು ಈ ಮಾರಕ ಸೋಂಕಿಗೆ ಗುರಿಯಾಗಿದ್ದಾರೆ. ಇನ್ನೊಂದೆಡೆ ಈ ಪ್ರಾಣಾಂತಕ ವೈರಸ್ ಸುಮಾರು 19 ಜನರನ್ನು ಬಲಿ ಪಡೆದಿದೆ. ಅತ್ತ ಈ ವೈರಸ್ ಸೋಂಕಿಗೆ ಗುರಿಯಾಗಿದ್ದ ಸುಮಾರು 79 ಜನ ಚೇತರಿಸಿಕೊಂಡಿದ್ದಾರೆ. ಈ ವೈರಸ್ ನ ಸೋಂಕಿಗೆ ಗುರಿಯಾದ ಅತಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಪತ್ತೆಯಾಗಿವೆ. ಈ ಎರಡೂ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 150ರ ಗಡಿ ದಾಟಿದೆ. ಕೇರಳದಲ್ಲಿ ಈ ಮಾರಕ ವೈರಸ್ ಗೆ ಸುಮಾರು 167 ಜನರು ಗುರಿಯಾಗಿದ್ದರೆ, ನಮ್ಮ ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಒಟ್ಟು 186 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಾಣ ಹಿಂಡುವ ವೈರಸ್ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಕೂಡ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದೆ. 

6 ಲಕ್ಷಕ್ಕೂ ಅಧಿಕ ಬಾರಿಗೆ ಈ ವಿಡಿಯೋ ಅನ್ನು ವೀಕ್ಷಿಸಲಾಗಿದೆ
ಈ ನಡುವೆ ಸಾಮಾನ್ಯ ಜನರಿಂದ ಹಿಡಿದು ಬಾಲಿವುಡ್ ಸೆಲಿಬ್ರಿಟಿಗಳವರೆಗೆ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಕಾಲವನ್ನು ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಖ್ಯಾತ ಬಾಲಿವುಡ್ ನಟಿ ಊರ್ವಶಿ ರೌತೆಲಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಇದು ಭಾರಿ ಹಲ್-ಚಲ್ ಸೃಷ್ಟಿಸಿದೆ. ಈ ವಿಡಿಯೋನಲ್ಲಿ ಊರ್ವಶಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಕಂಡು ಬಂದಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಊರ್ವಶಿ ಅಭಿಮಾನಿಗಳು ಈ ವಿಡಿಯೋಗೆ ಭಾರಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಕುರಿತು ಬರೆದುಕೊಂಡಿರುವ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು, "ಮನೆಯಲ್ಲಿಯೇ ಇರು ಅಕ್ಕಾ.." ಎಂದು ಬರೆದುಕೊಂಡಿದ್ದಾನೆ. ಕಳೆದ 24 ಗಂಟೆಗಳಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಬಾರಿಗೆ ಈ ವಿಡಿಯೋ ವೀಕ್ಷಣೆಗೆ ಒಳಗಾಗಿದೆ. ಹಾಗಿದ್ದರೆ, ಬನ್ನಿ ಇಂಟರ್ ನೆಟ್ ಮೇಲೆ ವೈರಲ್ ಆಗಿರುವ ಈ ವಿಡಿಯೋ ಅನ್ನು ನೀವು ಒಮ್ಮೆ ಕಣ್ತುಂಬಿಕೊಳ್ಳಿ.

ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಊರ್ವಶಿ ಸಾಕಷ್ಟು ಸಕ್ರೀಯರಾಗಿರುತ್ತಾರೆ. ದಿನನಿತ್ಯ ತಮ್ಮ ಹಾಟ್ ಭಾವಚಿತ್ರಗಳನ್ನು ಹಾಗೂ ವಿಡಿಯೋಗಳನ್ನೂ ತನ್ನ ಅಭಿಮಾನಿಗಳ ಜೊತೆಗೆ ಹಂಚಿಕೊಂಡು ಸಂಭ್ರಮಿಸುತ್ತಾಳೆ. ಇತ್ತೀಚೆಗಷ್ಟೇ ಊರ್ವಶಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಬಿಕಿನಿ ಭಾವಚಿತ್ರಗಳನ್ನು ಹರಿಬಿಟ್ಟು ಸಕತ್ ಸುದ್ದಿಮಾಡಿದ್ದಳು. ಹಾಗೂ ಅವಳು ಶೇರ್ ಮಾಡಿದ್ದ ಫೋಟೋಗಳಿಗೂ ಕೂಡ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯಿಸಿದ್ದರು.

Trending News