ಡಿಸೆಂಬರ್ ನಲ್ಲಿ ಅಜರುದ್ದೀನ್ ಪುತ್ರನಿಗೂ ಸಾನಿಯಾ ಮಿರ್ಜಾ ಸಹೋದರಿಗೂ ಕಂಕಣ ಭಾಗ್ಯ...!

ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಹೋದರಿಯಾಗಿರುವ ಅನಂ ಮಿರ್ಜಾ ಅವರು ಮುಂಬರುವ ಡಿಸೆಂಬರ್ ನಲ್ಲಿ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಅವರ ಪುತ್ರ ಅಸಾದ್ ನನ್ನು ವಿವಾಹವಾಗಲಿದ್ದಾರೆ ಎಂದು ತಿಳಿಸಿದ್ದಾರೆ.  

Updated: Oct 7, 2019 , 04:01 PM IST
ಡಿಸೆಂಬರ್ ನಲ್ಲಿ ಅಜರುದ್ದೀನ್ ಪುತ್ರನಿಗೂ ಸಾನಿಯಾ ಮಿರ್ಜಾ ಸಹೋದರಿಗೂ ಕಂಕಣ ಭಾಗ್ಯ...!
Photo courtesy: Instagram

ನವದೆಹಲಿ: ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಹೋದರಿಯಾಗಿರುವ ಅನಂ ಮಿರ್ಜಾ ಅವರು ಮುಂಬರುವ ಡಿಸೆಂಬರ್ ನಲ್ಲಿ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಅವರ ಪುತ್ರ ಅಸಾದ್ ನನ್ನು ವಿವಾಹವಾಗಲಿದ್ದಾರೆ ಎಂದು ತಿಳಿಸಿದ್ದಾರೆ.  

ಈಗ ಈ ವಿಷಯವನ್ನು ಸಾನಿಯಾ ಮಿರ್ಜಾ ಅವರು ಧೃಡಪಡಿಸುವ ಮೂಲಕ ಈ ಹಿಂದೆ ಕೇಳಿ ಬಂದಿದ್ದ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ ' ಅವರು ನಿಜವಾಗಿಯೂ ಡಿಸೆಂಬರ್‌ನಲ್ಲಿ ಮದುವೆಯಾಗುತ್ತಿದ್ದಾರೆ. ನಾವು ಪ್ಯಾರಿಸ್‌ನಲ್ಲಿ ಅವರ ಬ್ಯಾಚಿಲ್ಲೋರೆಟ್ ಪ್ರವಾಸದಿಂದ ಹಿಂತಿರುಗಿದ್ದೇವೆ. ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ. ಅವಳು ಸುಂದರ ಹುಡುಗನನ್ನು ಮದುವೆಯಾಗುತ್ತಿದ್ದಾಳೆ. ಅವನ ಹೆಸರು ಅಸಾದ್ ಮತ್ತು ಮೊಹಮ್ಮದ್ ಅಜರುದ್ದೀನ್ ಅವರ ಮಗ ಮತ್ತು ನಾವು ಈ ಬಗ್ಗೆ ನಿಜವಾಗಿಯೂ ಉತ್ಸುಕರಾಗಿದ್ದೇವೆ' ಎಂದು ಸಾನಿಯಾ ಮಿರ್ಜಾ ಹೇಳಿದರು.

ಈ ಹಿಂದೆ ಅನಾಮ್ ಮತ್ತು ಅಸಾದ್ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಕೇಳಿ ಬಂದಿದ್ದವು, ಈಗ ಅದು ಕೊನೆಗೂ ನಿಜವಾಗಿದ್ದು, ಡಿಸೆಂಬರ್ ನಲ್ಲಿ ಇಬ್ಬರು ಜೋಡಿಗಳು ಮದುವೆಯಾಗುವುದು ಈಗ ಪಕ್ಕಾ ಆಗಿದೆ.

ಸಾನಿಯಾ ಅವರ ಆಪ್ತ ಸ್ನೇಹಿತೆ, ಚಲನಚಿತ್ರ ನಿರ್ಮಾಪಕಿ ಫರಾಹ್ ಖಾನ್ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ಗಳಲ್ಲಿ ಅನಾಮ್ ಅವರನ್ನು ವಧು-ವರ ಎಂದು ಈ ಹಿಂದೆ ಉಲ್ಲೇಖಿಸಿದ್ದರು.